tamanvi
ಪ್ರಚಲಿತ

ಅಧ್ಯಕ್ಷ ಗಾದಿ ಅಧಿಕಾರವಲ್ಲ, ಅವಕಾಶ – ಜೆಸಿಐ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ | ಜೆಸಿಐ ಪುತ್ತೂರು ನಿಯೋ ಪ್ರೈಮ್ ಉದ್ಘಾಟನೆ, ಪದಸ್ವೀಕಾರ ಸಮಾರಂಭ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಚಾತುರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಜೆಸಿಐ ಝೋನ್ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಹೇಳಿದರು.

ಶುಕ್ರವಾರ ಸಂಜೆ ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿರುವ ಸಂಭ್ರಮ ಹಾಲ್ ನಲ್ಲಿ ಜೆಸಿಐ ಉಡುಪಿ ಸಿಟಿ ಪ್ರಾಯೋಜಕತ್ವದಲ್ಲಿ ಜರುಗಿದ ಜೆಸಿಐ ಪುತ್ತೂರು ನಿಯೋ ಪ್ರೈಮ್ ಇದರ ಉದ್ಘಾಟನೆ ಹಾಗೂ ಪದಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜೆಸಿಐಗೆ ಸೇರಿದರೆ ಬೆಳೆಯುತ್ತಾರೆ ಎಂದು ಹೇಳುತ್ತಾರೆ. ಆದರೆ ಶ್ರಮ ಪಟ್ಟಾಗ ಮಾತ್ರ ನಾವು ಬೆಳೆಯಲು ಸಾಧ್ಯ. ಜೆಸಿಐ ನೀಡುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು, ಶ್ರಮ ಪಟ್ಟು ದುಡಿದಾಡ ಖಂಡಿತವಾಗಿಯೂ ಜೆಸಿಐನಿಂದ ಬೆಳೆಯಲು ಸಾಧ್ಯ ಎಂದ ಅವರು, ಅಧ್ಯಕ್ಷತೆಯನ್ನು ಅಧಿಕಾರ ಎಂದು ತಿಳಿದುಕೊಳ್ಳಬಾರದು. ಅವಕಾಶ ಎಂದು ಭಾವಿಸಬೇಕು ಎಂದು ಕಿವಿಮಾತು ಹೇಳಿದರು.

ಯುವಕರಿಗೆ ಇನ್ನಷ್ಟು ಅವಕಾಶ

ಜೆಸಿಐ ವಲಯಾಧ್ಯಕ್ಷನಿಗೆ ಇದು ಬಹಳ ಸಂಭ್ರಮದ ಕ್ಷಣ. ಪುತ್ತೂರಿನಲ್ಲಿ ಇಂತಹ ಹೊಸ ತಂಡವನ್ನು ಕಟ್ಟುವುದು ಸುಲಭದ ವಿಷಯವಲ್ಲ. ಇದುವರೆಗೆ ಪುತ್ತೂರಿನಲ್ಲಿ ಜೆಸಿಐ ಒಂದೇ ಘಟಕ ಇತ್ತು. ಇದೀಗ ಹೊಸ ಘಟಕ ಅಸ್ತಿತ್ವಕ್ಕೆ ಬಂದಿದೆ. ಯುವಕರಿಗೆ ಇದು ಇನ್ನಷ್ಟು ಅವಕಾಶಗಳನ್ನು ತೆರೆದಿಡಲಿದೆ. ಈ ವರ್ಷದ ನಾಲ್ಕನೇ ಹೊಸ ತಂಡವಿದು. ಈ ಘಟಕ ಹೆಸರಿನಂತೆ ಪ್ರೈಮ್ ಆಗಿರಲಿದೆ ಎಂದ ಅವರು, ಹೊಸ ತಂಡಕ್ಕೆ ಶುಭಹಾರೈಸಿದರು.

ಸಮುದಾಯ ಅಭಿವೃದ್ಧಿ ಸಂಸ್ಥೆ ಹುಟ್ಟುಹಾಕುವುದು ಕಷ್ಟದ ಕೆಲಸ

ಜೆಸಿಐ ಪುತ್ತೂರು ನಿಯೋ ಪ್ರೈಮ್ ಇದರ ಟೀಮ್ ಕೋಚ್, ರಾಷ್ಟ್ರೀಯ ತರಬೇತುದಾರ ವೇಣುಗೋಪಾಲ್ ಎಸ್.ಜೆ. ಮಾತನಾಡಿ, ದೇಶಕ್ಕೆ ಐತಿಹಾಸಿಕ ದಿನವಾದ ಸ್ವಾತಂತ್ರ್ಯೋತ್ಸವದ ಮುನ್ನದಿನ ಪುತ್ತೂರಿನಲ್ಲಿ ಜೆಸಿಐ ಪುತ್ತೂರು ನಿಯೋ ಪ್ರೈಮ್ ಲೋಕಾರ್ಪಣೆಗೊಂಡಿದೆ. ಸಮುದಾಯ ಅಭಿವೃದ್ಧಿ ಸಂಸ್ಥೆಯನ್ನು ಕಟ್ಟುವುದು ಬಹಳ ಕಷ್ಟ. ವ್ಯವಹಾರಕ್ಕಾಗಿ ಹಣ ಹೂಡಲು ಎಲ್ಲರೂ ಸಿದ್ದರಿದ್ದಾರೆ. ಯಾಕೆಂದರೆ ಅಲ್ಲಿ ಹಾಕಿದ ಹಣ ಮರಳಿ ಬರುತ್ತದೆ. ಆದರೆ ಇಲ್ಲಿ ಹಣ ಹಾಕಿದರೆ ಮತ್ತದು ಹಣದ ರೂಪದಲ್ಲಿ ಮರಳುವುದಿಲ್ಲ. ಹಾಗಾಗಿ ಈ ಸಂಸ್ಥೆಯನ್ನು ಕಟ್ಟಲು ತುಂಬಾ ಶ್ರಮ ವಹಿಸಿದ್ದಾರೆ. ಸುಮಾರು ಆರು ತಿಂಗಳ ಶ್ರಮದ ಫಲವೇ ಇಂದಿನ ಕಾರ್ಯಕ್ರಮ. ಇಂದು 25 ಜನರು ಸದಸ್ಯರಾಗಿದ್ದಾರೆ. ಇನ್ನಷ್ಟು ಮಂದಿ ಸೇರಿಕೊಳ್ಳುವವರಿದ್ದಾರೆ. ಹಾಗಾಗಿ ಈ ತಂಡ ಕಟ್ಟಲು ಶ್ರಮಿಸಿದವರಿಗೆ ಅಭಿನಂದನೆ ಎಂದರು.

ಸ್ಪರ್ಧೆಯತ್ತ ಚಿತ್ತ ಬೇಡ

ಎರಡನೇ ವಿಶ್ವ ಯುದ್ಧ ನಡೆದ ನಂತರ ಜನ ಸಮುದಾಯಕ್ಕೆ ಹಿನ್ನಡೆ ಆಗಬಾರದು ಎಂಬ ಉದ್ದೇಶದಿಂದ ಜೆಸಿಐ ಸ್ಥಾಪನೆ ಆಗಿದೆ. ಪಾಲ್ಗೊಳ್ಳುವಿಕೆ ಹಾಗೂ ಅಭಿವೃದ್ಧಿ ಚಿಂತನೆಯನ್ನು ನಮ್ಮ ಸಂಸ್ಥೆ ಹೊಂದಿದೆ. ಬೆಂಗಳೂರಿನಂತಹ ದೊಡ್ಡ ಪಟ್ಟಣಗಳಲ್ಲಿ ತಮಗೆ ಬೇಕಾದದ್ದನ್ನು ಪಡೆದುಕೊಳ್ಳಲು ಅವಕಾಶವಿದೆ. ಆದರೆ ಪುತ್ತೂರಿನಲ್ಲಿ ಅಷ್ಟು ಅವಕಾಶಗಳಿಲ್ಲ. ಹಾಗಾಗಿ ಇಂತಹ ಸಾಮಾಜಿಕ ಸಂಸ್ಥೆಗಳ ಅವಶ್ಯಕತೆ ತುಂಬಾ ಇದೆ. ಆದರೆ ಸ್ಪರ್ಧೆಯತ್ತ ಚಿತ್ತ ಹರಿಸದೇ, ಸಂಸ್ಥೆಯ ಧ್ಯೇಯೋದ್ದೇಶಗಳತ್ತ ಗಮನ ಹರಿಸಬೇಕು ಎಂದ ಅವರು, ಸಮಾಜದಲ್ಲಿ ಪರಿಣಾಮಕಾರಿ ಕೆಲಸಗಳನ್ನು ನಿರ್ವಹಿಸುವಂತೆ ಕರೆ ನೀಡಿದರು.

ಮೈಲಿಗಲ್ಲನ್ನು ಸಾಧಿಸಲಿ

ವಲಯ ಉಪಾಧ್ಯಕ್ಷೆ ಡಾ. ಹರಿಣಾಕ್ಷಿ ಮಾತನಾಡಿ, ಹೊಸ ತಂಡವೆಂದು ಹಿಂಜರಿಕೆ ಬೇಡ. ಎಲ್ಲರ ಬೆಂಬಲವೂ ನಿಮಗಿದೆ. ಈ ತಂಡ ಸಾಕಷ್ಟು ಕೆಲಸಗಳನ್ನು, ಮೈಲಿಗಲ್ಲನ್ನು ಸಾಧಿಸಲಿ ಎಂದು ಹಾರೈಸಿದರು.

ನೂತನ ಪದಾಧಿಕಾರಿಗಳು

ಇದೇ ಸಂದರ್ಭ ಅಧ್ಯಕ್ಷೆಯಾಗಿ ಅಶ್ವಿನಿ ಕೆ., ಕಾರ್ಯದರ್ಶಿಯಾಗಿ ಪ್ರಜ್ವಲ್ ಡಿಸೋಜಾ, ಕೋಶಾಧಿಕಾರಿಯಾಗಿ ರಶ್ಮಿ ಭಟ್, ಉಪಾಧ್ಯಕ್ಷರುಗಳಾಗಿ ಮನೋಹರ್ ಪಾಟಾಳಿ, ಸುದೇಶ್ ರೈ, ದಕ್ಷಿತ್ ಆಚಾರ್ಯ, ನವೀನ್ ಕೊಯಿಲ, ಕಾವ್ಯಾ ಪ್ರಮಾಣವಚನ ಸ್ವೀಕರಿಸಿದರು. ರಘು ಶೆಟ್ಟಿ, ಪ್ರಜ್ವಲ್ ರೈ, ಸೌಜನ್ಯ ಎಂ., ಭವಿತ್ ಕುಮಾರ್, ಕೇಶವ ರಾಜ್ ಇಂದಾಜೆ, ನಿತಿನ್ ಶಂಕರ ವಿ., ಸಾಯಿ ಧ್ರುವ ಶೆಟ್ಟಿ, ನಿರೋಶ್ ಪಿ.ಜಿ., ಡಾ. ಪ್ರಶಾಂತ್ ಶರ್ಮಾ, ಸುಶಾಂತ್ ಹಾರ್ವಿನ್, ಗೌರವ್ ಭಾರಧ್ವಾಜ್, ಕಾರ್ತಿಕ್ ಬಿ., ಮಧುರಾ ಎಸ್. ಭಟ್, ದಿನೇಶ್ ಕುಮಾರ್ ಕಡಮಜಲು, ಶ್ರುತನ್ ಡಿ.ಜಿ. ನೂತನ ಘಟಕಕ್ಕೆ ಸೇರ್ಪಡೆಗೊಂಡರು.

ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷೆ ಪಲ್ಲವಿ ಕೊಡಗು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ನೂತನ ಘಟಕದ ಚಾರ್ಟರ್ ಪ್ರೆಸಿಡೆಂಟ್ ಅಶ್ವಿನಿ ಕೆ. ಹಾಗೂ ಟೀಮ್ ಕೋಚ್ ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.

ಜೆಸಿಐ ಉಡುಪಿ ಸಿಟಿ ಪೂರ್ವಾಧ್ಯಕ್ಷ ಭಾಸುಮ ಕೊಡಗು, ಆಲಂಕಾರು ಜೆಸಿಐ ಅಧ್ಯಕ್ಷ ಮಹೇಶ್ ಪಾಟಾಳಿ, ಪುತ್ತೂರು ಜೆಸಿಐ ಅಧ್ಯಕ್ಷ ಜಿತೇಶ್ ರೈ, ರಾಷ್ಟ್ರೀಯ ತರಬೇತುದಾರ  ಸುಭಾಶ್ ಬಂಗೇರ, ಸುಹಾಸ್ ಮರಿಕೆ, ವಲಯ ಉಪಾಧ್ಯಕ್ಷ ಜಿತೇಶ್ ಪಿರೇರಾ ಮೊದಲಾದವರು ಶುಭಕೋರಿದರು.

ಪ್ರಜ್ವಲ್ ಡಿಸೋಜಾ ವಂದಿಸಿದರು. ಕಾವ್ಯಾ, ರಶ್ಮಿ ಭಟ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ನಿಂತ್ರೆ ನಿಂತ ಹಾಗೇ – ಬೆಲ್ ಬಾಟಂ ಸಿನಿಮಾ ಮಾದರಿಯ ಡ್ರಗ್!! ಇಬ್ಬರು ಯುವಕರ ವಿಚಿತ್ರ ವರ್ತನೆಗೆ ಸಾರ್ವಜನಿಕರ ಆತಂಕ!

ರಾಜಸ್ಥಾನ: ಶ್ರೀ ಗಂಗಾನಗರದಲ್ಲಿ ಇಬ್ಬರು ಯುವಕರು ರಸ್ತೆಬದಿಯಲ್ಲಿ ಯಾವುದೇ ಚಲನೆಯಿಲ್ಲದೆ…