ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.
ಬಿ ಗ್ರೇಡ್‌ಗೆ ಸೇರಿದ ದೇವಸ್ಥಾನ ಇದಾಗಿದ್ದು, ಅರ್ಚಕ ಸ್ಥಾನದಿಂದ ಸೂರ್ಯನಾರಾಯಣ ಭಟ್, ಪ.ಜಾತಿ, ಪ.ಪಂಗಡದಿಂದ ಚೆನ್ನಪ್ಪ ಮರಿಕೆ, ಮಹಿಳಾ ಸ್ಥಾನದಿಂದ ಆರ್ಯಾಪು ಗ್ರಾ.ಪಂ. ಸದಸ್ಯೆ ಪೂರ್ಣಿಮಾ ರೈ ಮಜಲು, ಉಷಾ ಎಸ್. ಆಳ್ವ ಕುರಿಯ ಏಳಾಡುಗುತ್ತು, ಸಾಮಾನ್ಯ ಸ್ಥಾನದಿಂದ ಪವಿತ್ರ ರೈ ಉದ್ಯಂಗಲ, ಯಾಧವ ಕೃಷ್ಣ ಗೌಡ ಸಂಟ್ಯಾರು, ವ್ಯವಸ್ಥಾನಾ ಸಮಿತಿ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿಕೂರೇಲು, ಹರೀಶ್ ಪೂಜಾರಿ ಉದ್ಯಂಗಲ ಹಾಗೂ ಪ್ರಜ್ವಲ್ ರೈ ತೊಟ್ಲ ಅವರು ನೇಮಕಗೊಂಡಿದ್ದಾರೆ.