tamanvi
ಸ್ಥಳೀಯ

ಕಬಕ ಗ್ರಾಮದಲ್ಲಿ ನಿನ್ನೆಯಿಂದ ಕರೆಂಟಿಲ್ಲ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!! | ಕೆಲವೇ ಗಂಟೆಯಲ್ಲಿ ವಿದ್ಯುತ್ ಸಂಪರ್ಕ ಸರಿಯಾಗಲಿದೆ: ಮೆಸ್ಕಾಂ ಕಾರ್ಯಪಾಲಕ ಅಭಿಯಂತರ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸೋಮವಾರ ಸಂಜೆ ಸುರಿದ ಭಾರೀ ಗಾಳಿ – ಮಳೆಗೆ ಕಬಕ ಗ್ರಾಮದಲ್ಲಿ ವಿದ್ಯುತ್ ಕೈಕೊಟ್ಟಿದ್ದು, ಇದುವರೆಗೆ ಸರಿಯಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಮೆಸ್ಕಾಂಗೆ ಕರೆ ಮಾಡಿ ವಿಚಾರಿಸಿದಾಗ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಆದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 2024ರಲ್ಲಿ ಕಬಕ ಗ್ರಾಮಕ್ಕೆ ಓರ್ವ ಲೈನ್ ಮ್ಯಾನ್ ಇದ್ದರು. ಆದರೆ ಈಗ ಕಬಕ ಕೊಡಿಪ್ಪಾಡಿ, ಪಡ್ನೂರು ಮೂರು ಗ್ರಾಮಗಳಿಗೆ ಓರ್ವ ಲೈನ್ ಮ್ಯಾನ್ ಇದ್ದಾರೆ. ಆದ್ದರಿಂದ ವಿದ್ಯುತ್ ಸಮಸ್ಯೆ ಬಹುವಾಗಿ ಕಾಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಮೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ರಾಮಚಂದ್ರ ಅವರು ಪ್ರತಿಕ್ರಿಯಿಸಿ, ಭಾರಿ ಗಾಳಿ – ಮಳೆಗೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ತೀರಾ ಹಾನಿಯಾಗಿತ್ತು. ಅಲ್ಲಿಗೆ ಹೆಚ್ಚುವರಿ ಜನ ಕಳುಹಿಸಿ ರಿಪೇರಿ ಕಾರ್ಯ ಪೂರ್ಣಗೊಳಿಸಲಾಗಿದೆ. ಇದೀಗ ಇನ್ಸುಲೇಟರ್ ಗಳ ಕಾಮಗಾರಿ ನಡೆಯುತ್ತಿದೆ. ಲೈನ್ ಮ್ಯಾನ್ ಗಳು ಕೆಟ್ಟು ಹೋಗಿರುವ ಇನ್ಸುಲೇಟರ್’ಗಳನ್ನು ಬದಲಾಯಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ವಿದ್ಯುತ್ ಸರಬರಾಜು ಆಗಲಿದೆ ಎಂದು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…

1 of 133