tamanvi
ಸ್ಥಳೀಯ

ಕಬಕದಲ್ಲಿ ಕಳೆದ 32 ಗಂಟೆಯಿಂದ ಕತ್ತಲೆ ಭಾಗ್ಯ: ಬೆಳಿಗ್ಗೆ 10 ಗಂಟೆಗೆ ಮೆಸ್ಕಾಂಗೆ ಮುತ್ತಿಗೆ!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಬಕ, ಪೋಳ್ಯ, ಕೊಡಿಪ್ಪಾಡಿ ಭಾಗದಲ್ಲಿ ಕಳೆದ 32 ಗಂಟೆಯಿಂದ ವಿದ್ಯುತ್ ಇಲ್ಲ. ಬುಧವಾರ ಬೆಳಗ್ಗಿನ ಹೊತ್ತಿಗೆ ವಿದ್ಯುತ್ ಸರಬರಾಜು ಆಗದೇ ಇದ್ದರೆ ಬನ್ನೂರಿನ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪುರುಷೋತ್ತಮ್ ಮುಂಗ್ಲಿಮನೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿದ್ಯುತ್ ಕೈಕೊಟ್ಟಿದೆ. ಅಲ್ಲಿಂದ ಇಲ್ಲಿವರೆಗೆ ಕಬಕ, ಪೋಳ್ಯ, ಕೊಡಿಪ್ಪಾಡಿ ಭಾಗದ ಜನರಿಗೆ ವಿದ್ಯುತ್ ಇಲ್ಲ. ಇದರಿಂದಾಗಿ ಅಂಗಡಿ ಮಳಿಗೆ, ಮನೆಗಳಿಗೆ ತೊಂದರೆಯಾಗಿದೆ. ಐಸ್ ಕ್ರೀಂ  ಅಂಗಡಿಗಳಂತೂ ತೀರಾ ನಷ್ಟ ಅನುಭವಿಸಲಿದೆ. ಹಾಗಾಗಿ ಮೆಸ್ಕಾಂ ಮುತ್ತಿಗೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಸಮಸ್ಯೆಯ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಜೊತೆ ಮಾತನಾಡಿದಾಗ, ಕೆಲವೇ ಗಂಟೆಯಲ್ಲಿ ವಿದ್ಯುತ್ ಸರಿ ಹೋಗುವ ಭರವಸೆ ನೀಡಿದ್ದಾರೆ. ಆದರೆ ಇಲ್ಲಿವರೆಗೂ ವಿದ್ಯುತ್ ಸರಬರಾಜು ಆಗಿಯೇ ಇಲ್ಲ. ಹಾಗಾಗಿ ಗ್ರಾಮಸ್ಥರು ಸೇರಿಕೊಂಡು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…

1 of 133