ಪುತ್ತೂರು: ಕಬಕ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯದಿಂದ ಉಂಟಾದ ಸಮಸ್ಯೆಯ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಮುಖಂಡರ ನಿಯೋಗ ಬನ್ನೂರಿನಲ್ಲಿರುವ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ, ಪ್ರಭಾರ ಕಾರ್ಯಪಾಲಕ ಅಭಿಯಂತರರಾದ ರಾಮಚಂದ್ರ ಅವರ ಜೊತೆ ಮಾತುಕತೆ ನಡೆಸಿ, ಸಮಸ್ಯೆ ಶೀಘ್ರ ಪರಿಹಾರಕ್ಕೆ ಒತ್ತಾಯಿಸಿದರು.
ಮನವಿ ನೀಡಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ತಾಲೂಕಿನ ಗ್ರಾಮೀಣ ಭಾಗ ಹಾಗೂ ನಗರ ಭಾಗದಲ್ಲಿ ಕಳೆದ 15 ದಿನಗಳಿಂದ ನಿರಂತರ ವಿದ್ಯುತ್ ಕಡಿತ ಉಂಟಾಗುತ್ತಿದ್ದು, ಒಂದು ವಾರದ ಒಳಗಾಗಿ ಸಮಸ್ಯೆ ಬಗೆಹರಿಸಬೇಕು. ಇಲ್ಲದೇ ಇದ್ದರೆ ಬನ್ನೂರು ಮೆಸ್ಕಾಂ ಕಚೇರಿ ಮುಂಭಾಗ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಕಡಿತ ಆಗಿ ಜನ ಸಾಮಾನ್ಯರು ಕುಡಿಯುವ ನೀರಿಗೆ ಬವಣೆ ಪಡುವಂತ ಸ್ಥಿತಿ ನಿರ್ಮಾಣ ಆಗಿದೆ. ಮಳೆಗಾಲದಲ್ಲಿ ಸಹಜವಾಗಿ ವಿದ್ಯುತ್ ಕಡಿತವಾಗುತ್ತದೆ. ಆದರೆ ಈ ಬಾರಿ ಗಾಳಿ, ಮಳೆ, ಸಿಡಿಲು ಇಲ್ಲದೇ ಇದ್ದರೂ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಉಪ್ಪಿನಂಗಡಿ ಭಾಗದಲ್ಲಿ ಒಂದು ವಾರದ ಹಿಂದೆ ನಿರಂತರ ವಿದ್ಯುತ್ ಕಂಬಗಳು ಉರುಳಿದ್ದು, POWER MAN ಗಳ ಒಂದುವಾರ ವಿದ್ಯುತ್ ಕಡಿತ ಆಯಿತು. ನಿನ್ನೆ ಕಬಕ ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿ, ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರಕ್ಕೆ ಬರಲಾಯಿತು. ಪುತ್ತೂರಿನಲ್ಲಿರುವ POWER MAN ಗಳ ವರ್ಗಾವಣೆ ಮಾಡಿರುವ ಪರಿಣಾಮ ಇಂದು ಯಾವುದೇ ವಿದ್ಯುತ್ ದುರಸ್ತಿ ಕಾರ್ಯ ಆಗುತ್ತಿಲ್ಲ ಎಂದರು.
ಮಳೆ ಬರುವುದಕ್ಕೆ ಮೊದಲೇ ಗಿಡ ಮರಗಳ ರೆಂಬೆ, ಕೊಂಬೆ ತುಂಡರಿಸುವ ಕೆಲಸ ಆಗಬೇಕಿತ್ತು. ಆದರೆ ಇದುವರೆಗೆ ಆಗಿಲ್ಲ. ಅಪಾಯಕಾರಿ ಮರಗಳು ವಿದ್ಯುತ್ ಲೈನಿಗೆ ಬೀಳುವ ಸಂಭವ ಇದ್ದರು ಅದನ್ನು ಹಾಗೆ ಬಿಟ್ಟು ಬಿಡುವ ಪರಿಸ್ಥಿತಿ ಇದೆ. ಕಂಬಗಳು ಹಾಗೂ ಲೈನ್ ದುರಸ್ತಿ ಕಾರ್ಯ ಕೂಡ ನಡೆದಿಲ್ಲ. ಇದರ ಪರಿಣಾಮ ವಿದ್ಯುತ್ ಕಡಿತ ಆಗಿರುತ್ತದೆ. ಹಿಂದಿನ ಸರಕಾರ T.C BANK ಆರಂಭ ಮಾಡಿತ್ತು ಆದರೆ ಇಂದು TRANSFORMER ಕೆಟ್ಟು ಹೋದರೆ ಒಂದು ವಾರ ಆದರೂ ಪರಿವರ್ತಕ ಆಳವಡಿಸುವುದಿಲ್ಲ. ಗುತ್ತಿಗೆಯನ್ನು ಯಾರೋ ಹೊರ ಜಿಲ್ಲೆಯವರಿಗೆ ಕೊಡುವ ಕಾರಣ ಸ್ಥಳೀಯ ಗುತ್ತಿಗೆದಾರರು ಸಣ್ಣ ಪುಟ್ಟ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದು ಗಮನ ಸೆಳೆದರು.
ಈಗಾಗಲೇ ತಲೆದೋರಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ತಕ್ಷಣ POWER MAN ಗಳ ನೇಮಕ, ಪರಿವರ್ತಕಗಳ ದುರಸ್ತಿ, ವಿದ್ಯುತ್ ಲೈನ್ ಗಳು ಹಾದು ಹೊಗುವಲ್ಲಿ ಮರಗಳ ಕೊಂಬೆ ರಂಬೆ ಕತ್ತರಿಸುವ ಕೆಲಸ ಹಾಗೂ 24/7 ಮೆಸ್ಕಾಂ ಸಹಾಯವಾಣಿ ಕೆಂದ್ರ ಮಾಡಬೇಕು ಮತ್ತು ಪುತ್ತೂರು ಉಪ ವಿಭಾಗದಲ್ಲಿ ಒಂದು ವಾರದ ಒಳಗಡೆ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸದೇ ಇದ್ದರೆ. ಭಾರತೀಯ ಜನತಾ ಪಾರ್ಟಿಯಿಂದ ಉಗ್ರ ಹೋರಾಟವನ್ನು MESCOM ಕಚೇರಿ ಮುಂದುಗಡೆ ಮಾಡಲಿದ್ದೇವೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷರಾದ ಜೀವಂಧರ್ ಜೈನ್, ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಹಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ರಾಜೇಶ್ ಬನ್ನೂರು, ಶಶಿಧರ್ ನಾಯಕ್, ಅಜಿತ್ ರೈ ಹೊಸಮನೆ, ಹರಿಪ್ರಸಾದ್ ಯಾದವ್, ಲೊಕೇಶ್ ಹೆಗ್ಡೆ, ಗೌರಿ ಬನ್ನೂರು, ವಿಶ್ವನಾಥ್ ಬನ್ನೂರು, ಮಹೇಶ್ ಕೆ.ವಿ., ನಿತೀಶ್ ಕುಮಾರ್ ಶಾಂತಿವನ, ವಿದ್ಯಾಧರ್ ಜೈನ್, ಮೋಹಿನಿ ಗೌಡ ಬನ್ನೂರು, ನಿರಂಜನ್, ಕಿರಣ್ ಕುಮಾರ್ ಬಲ್ನಾಡು, ಕಿಶೋರ್ ಬೇರಿಕೆ, ವಿಶ್ವನಾಥ್ ಕುಲಾಲ್, , ಸುರೇಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.





















