ಪುತ್ತೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಶಾಂತ್ ಮಿನೇಜಸ್ ನಿರ್ಮಿಸಿರುವ, ಜಿನ್ನು ಎಸ್.ಮೆನೋನ್ ಮತ್ತು ಸಿದ್ದಾರ್ಥ್ ಶೆಟ್ಟಿ ನಿರ್ದೇಶನದ ತುಳು ಸಿನಿಮಾ ‘ಕಜ್ಜ’ ಜೂ.11ರಂದು ತೆರೆ ಕಾಣಲಿದೆ.
ಸಿನಿಮಾದ ನಟ ಸಿದ್ದಾರ್ಥ್ ಶೆಟ್ಟಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸ್ಯಾಂಡ್ ಮಾಫಿಯಾದ ಜೊತೆಗೆ ಕಾಮಿಡಿ, ಉತ್ತಮ ಕಥೆಯನ್ನು ಈ ಚಿತ್ರ ಹೊಂದಿದ್ದು ಈಗಾಗಲೇ ಉಡುಪಿ, ಸುರತ್ಕಲ್, ಮಂಗಳೂರು, ಪುತ್ತೂರಿನಲ್ಲಿ ಪ್ರೀಮಿಯರ್ ಶೋ ಭಾರೀ ಯಶಸ್ವಿ ಕಂಡಿದೆ.ನಮ್ಮ ಆರಂಭದ ಸಿನಿಮಾ ‘ತುಡರ್’ಗೆ ಪ್ರೋತ್ಸಾಹ ನೀಡಿರುವಂತೆ ‘ಕಜ್ಜ’ ಚಿತ್ರಕ್ಕೂ ನೀಡುವಂತೆ ಮನವಿ ಮಾಡಿದರು.
ಚಿತ್ರದಲ್ಲಿ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಜಯಶ್ರೀ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್‌ರಾಜ್, ಗೌತಮ್ ಬಂಗೇರ, ಸುವರ್ಣ ಪೂಜಾರಿ, ಸವಿತಾ ಆಂಚನ್, ಶಾಹಿನ್ ಶೇಕ್, ಸನ್ನಿಧಿ ಶೆಟ್ಟಿ ಅಭಿನಯಿಸಿದ್ದು ಚಂದು ಮೆಪ್ಪಾಯೂರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ.ಶರತ್ ಹೆಗ್ಡೆ ಸಂಕಲನ, ವಿಜೇತ್ ಆರ್ ನಾಯಕ್ ನೃತ್ಯ, ಯೋಗಾನಂದ್ ಸಾಹಸ ಸಂಯೋಜನೆ ಮಾಡಿದ್ದಾರೆ. ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ತಿಕ್ ರೈ ಅಡ್ಯನಡ್ಕ ಕಾರ್ಯನಿರ್ವಹಿಸಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಾಯಕ ನಟಿ ಸಹನಾ ಸುಧಾಕರ್, ಶ್ವೇತಾ ಕೋಟ್ಯಾನ್ ಮತ್ತು ಸಂಗೀತ ನಿರ್ದೇಶಕ ಉಪ್ಪಿನಂಗಡಿ ಬಾರ್ಯ ಮೂಲದ ಲಿಖಿತ್ ಪ್ರಸಾದ್ ಮತ್ತು ಸಿನಿಮಾ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.






















