ಟ್ರೆಂಡಿಂಗ್ ನ್ಯೂಸ್

ಆರ್ಯಾಪು ಸಹಕಾರ ಸಂಘದಲ್ಲಿ ಎಸ್.ಐ.ಆರ್. ಮಾಹಿತಿ ಕಾರ್ಯಾಗಾರ | ಇನ್ನು ಸರಕಾರಿ ಸೌಲಭ್ಯಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಅಗತ್ಯ: ಮಹಮ್ಮದಾಲಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಎಸ್.ಐ.ಆರ್ ಮಾಹಿತಿ ಕಾರ್ಯಾಗಾರ ಸೋಮವಾರ ಬೆಳಿಗ್ಗೆ ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಹಕಾರ ಸಂಘದ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ, ಹೊಸದಾಗಿ ಮತ ಪಟ್ಟಿ ತಯಾರಿಕೆ. ಇದು ಪರಿಷ್ಕರಣೆ ಅಲ್ಲ. ಈಗ ಅರ್ಜಿ‌ ಪಡೆದುಕೊಂಡು, ಮತದಾರರ ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಇನ್ನು ಮುಂದೆ ಯಾವುದೇ ಸರಕಾರದ ಸೌಲಭ್ಯ ಪಡೆದುಕೊಳ್ಳಲು ಮತದಾರರ ಪಟ್ಟಿ ಅಗತ್ಯ. ಅದಕ್ಕಾಗಿ ಎಸ್.ಐ.ಆರ್. ಮಾಡಿಕೊಳ್ಳಲೇಬೇಕು ಎಂದರು.

ತರಾತುರಿಯಲ್ಲಿ, ಗೊಂದಲ ಮೂಡಿಸುವ ರೀತಿಯಲ್ಲಿ ಈ ಮತದಾರರ ಪಟ್ಟಿ ತಯಾರಿಸಲಾಗುತ್ತಿದೆ. ಹಾಗಾಗಿ ಇದರ ಬಗ್ಗೆ ನಮ್ಮ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು ಎಂದು ತೀರ್ಮಾನಿಸಿದೆವು. ಕುರಿಯ ಗ್ರಾಮದ ನಮ್ಮ ಶಾಖೆಯಲ್ಲೂ ತರಬೇತಿ ಪಡೆದ ನಮ್ಮ ಸಿಬ್ಬಂದಿಗಳು ಅಲ್ಲಿಗೆ ಬರುತ್ತಾರೆ ಎಂದರು.

ಸಂಪನ್ಮೂಲ ವ್ಯಕ್ತಿ ಅಮಿತ ಅಶ್ವಿನ್ ಉಳ್ಳಾಲ್, ಸಹಕಾರ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ನಿರ್ದೇಶಕರಾದ ಗಣೇಶ್ ರೈ, ಸದಾನಂದ ಶೆಟ್ಟಿ ಕೂರೇಲು, ಇಸ್ಮಾಯಿಲ್, ಗಣೇಶ್ ರೈ ಕುರಿಯ, ಸಂಶುದ್ದೀನ್, ತೆರೇಸಾ ಎಂ. ಸಿಕ್ವೇರಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ ಎನ್.ಎಸ್., ಸಿಬ್ಬಂದಿಗಳಾದ ಸುಭಾಷಿಣಿ ವಿ. ರೈ, ಉಮೇಶ್ ಎಸ್.ಕೆ., ಅರ್ಜುನ್ ಭಾಸ್ಕರ್, ವಿನಯ್ ಕುಮಾರ್ ರೈ, ಪ್ರಶಾಂತಿ ಎಂ. ಉಪಸ್ಥಿತರಿದ್ದರು.

ನವೋದಯ ಸಂಘದ ಪ್ರೇರಕಿ ಮೋಹಿನಿ ಸಹಕರಿಸಿದರು. ಉಮೇಶ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು.

ಸಾಂಕೇತಿಕ ಉದ್ಘಾಟನೆಯ ಬಳಿಕ ಮಾಹಿತಿ ಕಾರ್ಯಾಗಾರ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…

ಕರೆ ಹೋಗ್ತಿಲ್ಲ, ನೆಟ್ ವರ್ಕ್ ಕೆಲಸ ಮಾಡ್ತಿಲ್ಲ!! ವರ್ಷಾಂತ್ಯಕ್ಕೆ ಹೀಗೇಕೆ ಮಾಡ್ತು ಕಂಪೆನಿಗಳು??

ಪುತ್ತೂರು: ಮೊಬೈಲ್ ಕರೆ ಹೋಗ್ತಿಲ್ಲ. ಇಂಟರ್ ನೆಟ್ ವರ್ಕ್ ಆಗ್ತಿಲ್ಲ. ಹೀಗೇಕಾಯ್ತು ಎಂಬ…

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ…