ಟ್ರೆಂಡಿಂಗ್ ನ್ಯೂಸ್

ಮಾ. 15ರಂದು ಬನ್ನೂರು ಡಂಪಿಂಗ್ ಯಾರ್ಡ್’ನಲ್ಲಿ ಸಿಬಿಜಿ ಘಟಕ ಲೋಕಾರ್ಪಣೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಎಲ್ ಎಲ್ ಪಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸ್ವಚ್ಚ ಭಾರತ್ ಚಾರಿಟೇಬಲ್ ಟ್ರಸ್ಟ್ ಮತ್ತು ರಿಟಾಪ್ ಸೊಲ್ಯೂಷನ್ಸ್ ಇವರ ಸಾರಥ್ಯದಲ್ಲಿ ಪುತ್ತೂರು ನಗರ ಸಭೆಯ ಸಹಯೋಗದಲ್ಲಿ ನಿರ್ಮಿಸಿದ ಹಸಿ ತ್ಯಾಜ್ಯ ದಿಂದ ಸಿ ಎನ್ ಜಿ ಉತ್ಪಾದನ ಘಟಕ ಮಾ. 15ರಂದು ಬನ್ನೂರು ಡಂಪಿಂಗ್ ಯಾರ್ಡಿನಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಕೃಷ್ಣ ನಾರಾಯಣ ಮುಳಿಯ ಹೇಳಿದರು.

chennai-shopping
maithri

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿತ್ಯಾಜ್ಯದಿಂದ ಉತ್ಪಾದನೆ ಗೊಳ್ಳಲಿರುವ ಕರ್ನಾಟಕ ರಾಜ್ಯದ ಪ್ರಥಮ ಸಿ ಎನ್ ಜಿ ಘಟಕವಾಗಿರುತ್ತದೆ. ಸುಮಾರು 8 ಟನ್ ಗಳಷ್ಟು ಹಸಿ ತ್ಯಾಜ್ಯವನ್ನು ಸಂಸ್ಕರಿಸಲಿರುವ ಈ ಘಟಕಕ್ಕೆ ಸುಮಾರು 3 ಕೋಟಿ ರೂ. ವೆಚ್ಚವಾಗಿರುತ್ತದೆ. ಪ್ರತಿ ದಿನ‌ ಸರಾಸರಿ 250 ಕೆಜಿಯಷ್ಟು ಸಿ.ಎನ್.ಜಿ. ಉತ್ಪಾದನೆಗೊಳ್ಳಲಿದೆ. ಕಳೆದ 12 ವರ್ಷಗಳಿಂದ ಈ ಯೋಜನೆಯ ಅನುಷ್ಟಾನಕ್ಕೆ ಪ್ರಯತ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಪ್ರಜ್ವಲನೆ ನಡೆಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಮಾಜಿ ಶಾಸಕ ಸಂಜೀವ ಮಠಂದೂರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ನಗರ ಸಭೆಯ ಮಾಜಿ ಅಧ್ಯಕ್ಷರಾದ ಲೀಲಾವತಿ ಅಣ್ಣು ನಾಯ್ಕ್,  ರೋಟರಿ ಮಾಜಿ ಜಿಲ್ಲಾ ಗವರ್ನರ್ ಎಚ್ ಆರ್ ಕೇಶವ್, ರಿಟಾಪ್ ಸೊಲ್ಯೂಷನ್ ನ ಡಾ.ದಿವ್ಯಾ ಪ್ರಶಾಂತ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲ್ ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಎಲ್ ಎಲ್ ಪಿ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ವಹಿಸಲಿದ್ದಾರೆ ಎಂದರು.

ರಾಜೇಶ್ ಬೆಜ್ಜಂಗಳ ಮಾತನಾಡಿ, CBG ಘಟಕದಿಂದ ಪರಿಸರಕ್ಕೆ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು. ಸುತ್ತಮುತ್ತಲಿನ ಮನೆಯಲ್ಲಿ ಇರುವವರಿಗೆ ಕೆಟ್ಟ ವಾಸನೆಯಿಂದ ಮುಕ್ತಿ ಸಿಗಲಿದೆ. ಮೀಥೇನ್ , CO² ನಿಂದ 10 ಪಟ್ಟು ಹೆಚ್ಚು ಪರಿಸರಕ್ಕೆ ಹಾನಿಕಾರಕ. ಅದು ವಾತಾವರಣಕ್ಕೆ ಬಿಡುಗಡೆ ಆಗುವುದಿಲ್ಲ. ಕಸ ಡಂಪ್ ಮಾಡಲು ಉಪಯೋಗ ಆಗುವ ಸ್ಥಳದ ಉಳಿತಾಯ. CBGಯನ್ನು ಅಡುಗೆಗೆ ಯಾ ವಾಹನಕ್ಕೆ ಉಪಯೋಗಿಸಿದರೆ, ವಿದೇಶ ವಿನಿಮಯದ ಉಳಿತಾಯ ಆಗಲಿದೆ. ವಾಹನಕ್ಕೆ ಡೀಸೆಲ್ ಬದಲು ಉಪಯೋಗಿಸಿದಾಗ, ಪರಿಸರಕ್ಕೆ ಬಿಡುಗಡೆಯಾಗುವ ಕೆಟ್ಟ ಹೊಗೆಯಿಂದ ಮುಕ್ತಿ ಸಿಗಲಿದೆ. ಡಂಪಿಂಗ್ ಯಾರ್ಡ್ ಇಂದ ಹೊರಸೂಸುವ ಲಿಚೆಟ್ ದ್ರವ ಅಂತರ್ಜಾಲವನ್ನು ಕಲುಷಿತಗೊಳಿಸುತ್ತದೆ. ಇದು ಕ್ಯಾನ್ಸರ್ ಕಾರಕ. ಇದರಿಂದ ಮುಕ್ತಿ ಸಿಗಲಿದೆ. ಹೊರಬಂದ ಸ್ಲರಿ ಒಂದು ಉತ್ತಮ ಸಾವಯುವ ಗೊಬ್ಬರ. 6-10 ಜನಕ್ಕೆ ಉದ್ಯೋಗಾವಕಾಶ ಕೂಡ ಲಭ್ಯವಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ್ ಶೆಣೈ, ಸುಮನ್, ಶಶಿಧರ್ ಕಿನ್ನಿಮಜಲು, ರವಿಕುಮಾರ್ ಮಠ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಏ. 23: ವಿಟ್ಲ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಥೈರಾಯ್ಡ್ (TSH), ಮಧುಮೇಹ ಉಚಿತ ತಪಾಸಣಾ ಶಿಬಿರ

ಪುತ್ತೂರು: ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ ವಿಟ್ಲ ಶಾಖೆಯಲ್ಲಿ ಏಪ್ರಿಲ್ 23ರಂದು…

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌’ನಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಕೊಡುಗೆ: ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ

ಪುತ್ತೂರು: ಆಭರಣ ಕ್ಷೇತ್ರದಲ್ಲಿ ದಶಕಗಳ ನಂಬಿಕೆ ಮತ್ತು ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವ…