tamanvi
ಟ್ರೆಂಡಿಂಗ್ ನ್ಯೂಸ್ಧಾರ್ಮಿಕಸ್ಥಳೀಯ

ದೈವದ ಹಣ ಕದ್ದವ 24 ಗಂಟೆಯೊಳಗೆ ಪತ್ತೆ! ಮಲಗಿದ್ದ ಕಳ್ಳನಿಗೆ ನಿದ್ದೆಯೇ ಬಿಡದೆ, ಪೊಲೀಸರ ಅತಿಥಿಯಾದ!!

D_shiva_bhat
ಕರಾವಳಿ ಜಿಲ್ಲೆಯ ದೈವಗಳ ಕಾರಣಿಕ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ ಸಾವಿರಾರು ನಿದರ್ಶನ ನೀಡಬಹುದು. ಕಾಂತಾರ ಸಿನಿಮಾವೂ ಇದೇ ನೆಲೆಯಲ್ಲಿ ಹುಟ್ಟಿಕೊಂಡ ಚಿತ್ರ. ಇಲ್ಲಿ ಪೊಲೀಸ್ ಇಲಾಖೆ ತನಿಖೆ ಮಾಡುವ ಮೊದಲೇ ದೈವಗಳು ಅಪರಾಧಿಯನ್ನು ತಂದು ಭಕ್ತರ ಮುಂದೆ ಇಟ್ಟು ಕಾರಣೀಕವನ್ನು ತೋರಿದೆ ಎಂದರೆ ನೀವು ನಂಬಲೇಬೇಕು. ಇದಕ್ಕೆ ಸಾಕ್ಷಿ ಎನ್ನುವಂತೆ ಉಡುಪಿಯಲ್ಲಿ ಒಂದು ಘಟನೆ ನಡೆದಿದೆ. ದೇವರ ಕಾಣಿಕೆ ಹಣ ಕದ್ದು ಪರಾರಿಯಾಗಿದ್ದ ಕಳ್ಳ 24 ಗಂಟೆ ಒಳಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕರಾವಳಿ ಜಿಲ್ಲೆಯ ದೈವಗಳ ಕಾರಣಿಕ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ ಸಾವಿರಾರು ನಿದರ್ಶನ ನೀಡಬಹುದು. ಕಾಂತಾರ ಸಿನಿಮಾವೂ ಇದೇ ನೆಲೆಯಲ್ಲಿ ಹುಟ್ಟಿಕೊಂಡ ಚಿತ್ರ. ಇಲ್ಲಿ ಪೊಲೀಸ್ ಇಲಾಖೆ ತನಿಖೆ ಮಾಡುವ ಮೊದಲೇ ದೈವಗಳು ಅಪರಾಧಿಯನ್ನು ತಂದು ಭಕ್ತರ ಮುಂದೆ ಇಟ್ಟು ಕಾರಣೀಕವನ್ನು ತೋರಿದೆ ಎಂದರೆ ನೀವು ನಂಬಲೇಬೇಕು. ಇದಕ್ಕೆ ಸಾಕ್ಷಿ ಎನ್ನುವಂತೆ ಉಡುಪಿಯಲ್ಲಿ ಒಂದು ಘಟನೆ ನಡೆದಿದೆ. ದೇವರ ಕಾಣಿಕೆ ಹಣ ಕದ್ದು ಪರಾರಿಯಾಗಿದ್ದ ಕಳ್ಳ 24 ಗಂಟೆ ಒಳಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

maithri

ಕಳ್ಳನ ಪತ್ತೆಗಾಗಿ ದೈವಸ್ಥಾನದಲ್ಲಿ ಭಕ್ತರಿಂದ ಮೊರೆ
ದುಷ್ಟರನ್ನು ಶಿಕ್ಷಿಸುವುದು ಭಕ್ತಿಯಿಂದ ಬೇಡಿದವರನ್ನು ಪಾಲಿಸುವ ದೈವಗಳು ಅಪರಾಧಿಯನ್ನು ಕೂಡ ಪತ್ತೆ ಹಚ್ಚುವುದರಲ್ಲಿ ಭಕ್ತರ ಜೊತೆಗೆ ನಿಂತಿದೆ ಎನ್ನುವುದಕ್ಕೆ ಈ ಪ್ರಕರಣ ನಿದರ್ಶನವಾಗಿ ನಿಲ್ಲುತ್ತದೆ. ಹೊರ ಜಿಲ್ಲೆಯಿಂದ ಬಂದ ಕಳ್ಳನೋರ್ವ ಉಡುಪಿಯ ಚಿಟ್ಪಾಡಿ ಸಮೀಪದ ಕಸ್ತೂರ್ಬ ನಗರದ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ ನಡೆಸಿದ್ದಾನೆ. ದೈವಸ್ಥಾನದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಹಣವನ್ನ ಕದ್ದು ಕಣ್ಮರೆಯಾಗಿದ್ದ ಕಳ್ಳನ ಪತ್ತೆಗಾಗಿ ದೈವಸ್ಥಾನದ ಭಕ್ತರು ದೈವದಲ್ಲಿ ಮೊರೆ ಇಟ್ಟಿದ್ದಾರೆ. ಭಕ್ತನ ಮೊರೆಗೆ ಓಗೊಟ್ಟ ದೈವ, ಕಳ್ಳನನ್ನ ನಂಬಲಸಾಧ್ಯವಾದ ರೀತಿಯಲ್ಲಿ ಪತ್ತೆ ಹಚ್ಚುವ ಮೂಲಕ ತನ್ನ ಇರುವಿಕೆಯನ್ನು ಭಕ್ತರಿಗೆ ತೋರಿಸಿದೆ.

ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಜು. 4ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆದಿತ್ತು. ಕಳ್ಳತನ ನಡೆದ ಮರುದಿನ ಅಂದರೆ ಜು.5ರಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಕಳ್ಳನ ಪತ್ತೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ದೈವದ ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ? ಎಂದು ಭಕ್ತರು ದೈವಕ್ಕೆ ಪ್ರಶ್ನಿಸಿದ್ದರು‌. ಇದಕ್ಕೆ ಉತ್ತರವಾಗಿ 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಭಕ್ತರಿಗೆ ಅಭಯ ನೀಡಿತ್ತು.

ಕಳ್ಳನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ
ಕಳ್ಳತನ ಮಾಡಿದ್ದ ಕಳ್ಳನ ಕೃತ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದನ್ನ ಬಹುತೇಕ ಭಕ್ತರು ಗಮನಿಸಿದ್ದರು. ಸಿಸಿ ಕ್ಯಾಮೆರಾದಲ್ಲಿ ನೋಡಿದ ಕಳ್ಳನ ಚಹರೆಯನ್ನು ಹೋಲುವ ವ್ಯಕ್ತಿಯೊಬ್ಬ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿದ್ರೆ ಮಾಡುತ್ತಿರುವುದನ್ನು ಸ್ಥಳೀಯ ಆಟೋ ರಿಕ್ಷಾ ಚಾಲಕರೋರ್ವರು ಜುಲೈ 6 ರಂದು ಗಮನಿಸಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸರಿಗೆ ಆಟೋ ಚಾಲಕ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನ ಬಂಧಿಸಿದ್ದಾರೆ.

ಮೂಲತಃ ಬಾಗಲಕೋಟೆ ಮೂಲದ ಮುದುಕಪ್ಪ, ವಿಚಾರಣೆ ಮಾಡಿದಾಗ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದೇವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿ ಇರುವ ಮುದುಕಪ್ಪ ಚಿಟ್ಪಾಡಿ, ಉದ್ಯಾವರ ಭಾಗದಲ್ಲಿ ಕಳ್ಳತನ ನಡೆಸಿ ಕದ್ದ ಹಣದೊಂದಿಗೆ ಊರಿಗೆ ತೆರಳುವ ಸಿದ್ಧತೆ ಮಾಡಿದ್ದ. ಬಸ್ ಸಿಗದ ಕಾರಣ ಬಸ್ಟ್ಯಾಂಡ್ನಲ್ಲಿ ಮಲಗಿದ್ದ ಮುದುಕಪ್ಪನಿಗೆ ಮುಂಜಾನೆ 8 ಗಂಟೆಯಾದರೂ ಎಚ್ಚರಿಕೆ ಆಗದ ಹಿನ್ನೆಲೆಯಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಆಟಮ್’ಬರ್ಗ್ ಫ್ಯಾನ್ ಮಾರಾಟದಲ್ಲಿ ದಾಖಲೆ: ಮೈತ್ರಿ ಎಲೆಕ್ಟ್ರಿಕ್ ಕಂಪೆನಿಗೆ ಗೋಲ್ಡ್ ಮೆಂಬರ್’ಶಿಪ್

ಪುತ್ತೂರು: ಆಟಮ್’ಬರ್ಗ್ ಫ್ಯಾನ್ ಗಳಲ್ಲಿ ಅತ್ಯಧಿಕ ಮಾರಾಟ ಮಾಡಿ ಸಾಧನೆ ಮಾಡಿದ ಪುತ್ತೂರಿನ…

1 of 172