Gl
ದೇಶಸ್ಥಳೀಯ

ತನ್ನ ವೃತ್ತಿಯ ಅವಹೇಳನ: ಆತ್ಮಹತ್ಯೆಗೆ ಶರಣಾದ ತ್ಯಾಜ್ಯ ಸಂಗ್ರಾಹಕ!

ತನ್ನ ವೃತ್ತಿಯ ಆವಹೇಳನ ವೈರಲ್ ವಿಡಿಯೊದಿಂದ ಮನನೊಂದು ಹಿರಿಯ ತ್ಯಾಜ್ಯ ಸಂಗ್ರಾಹಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ತನ್ನ ವೃತ್ತಿಯ ಆವಹೇಳನ ವೈರಲ್ ವಿಡಿಯೊದಿಂದ ಮನನೊಂದು ಹಿರಿಯ ತ್ಯಾಜ್ಯ ಸಂಗ್ರಾಹಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Pashupathi

ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ತನ್ನ ಕೈಗಾಡಿಯಲ್ಲಿ ಸಂಗ್ರಹಿಸುತ್ತಿದ್ದ ಆ ಹಿರಿಯ ತ್ಯಾಜ್ಯ ಸಂಗ್ರಾಹಕ, ತನ್ನ ಜೀವನೋಪಾಯಕ್ಕಾಗಿ ಆ ತ್ಯಾಜ್ಯಗಳನ್ನು ಮಾರಾಟ ಮಾಡಿಕೊಂಡಿದ್ದರು ಎನ್ನಲಾಗಿದೆ.

akshaya college

ಲೌಹಾತ್ ಗ್ರಾಮದ ಕೆಲವು ಯುವಕರು ಆತನ ವೃತ್ತಿಯನ್ನು ಅಣಕವಾಡಿ, ವಿಡಿಯೊ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದರಿಂದ ಆ ಹಿರಿಯ ವ್ಯಕ್ತಿಯನ್ನು ಅನೇಕರು ಗುರುತಿಸಲು ಪ್ರಾರಂಭಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, “ತ್ಯಾಜ್ಯ ಸಂಗ್ರಾಹಕನ ಮೃತದೇಹ ಹೆದ್ದಾರಿ ಬಳಿಯ ಮರವೊಂದರಿಂದ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

 ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ| ರೂಪಾಯಿಗೆ ಬಲ ನೀಡಿದ ಕ್ರಮವನ್ನು‌ ಬಹಿರಂಗಪಡಿಸಿದ ವಿನಿಮಿಯ ದತ್ತಾಂಶ!

ಅಮೆರಿಕದ ಡಾಲರ್ ಎದುರು ಸೋಮವಾರ ಭಾರತೀಯ ರೂಪಾಯಿ ಬಲಗೊಂಡಿದ್ದು, ಜಾಗತಿಕವಾಗಿ ಅಮೆರಿಕದ ಕರೆನ್ಸಿ…

ಮುಕ್ವೆಯನ್ನು ಮುಳುಗಿಸಿದ ಮಳೆ ನೀರು | ಮನೆ, ಅಂಗಡಿಗಳನ್ನು ಮುಳುಗಿಸಿತು ಉಕ್ಕಿ ಹರಿದ ಚರಂಡಿ ನೀರು; ಹೆದ್ದಾರಿ ಬಂದ್!

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ…

1 of 105