tamanvi
ಸ್ಥಳೀಯ

ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೋಟೀಶ್ವರ್ ಸಿಂಗ್

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೋಟೀಶ್ವರ್ ಸಿಂಗ್ ಅವರು ಶನಿವಾರ ಪುತ್ತೂರಿಗೆ ಆಗಮಿಸಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

maithri

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆಯುತ್ತಿರುವ ಅಣಕು ನ್ಯಾಯಾಲಯ ಕಾರ್ಯಕ್ರಮಕ್ಕೆ ಆಗಮಿಸಿರುವ ಅವರು, ದಂಪತಿ ಸಹಿತ ದೇವಳಕ್ಕೆ ಭೇಟಿ ನೀಡಿದರು.

smt

ಎಳ್ಳೆಣ್ಣೆ ಸಮರ್ಪಿಸಿದ ಜಸ್ಟೀಸ್ ಕೋಟೀಶ್ವರ್ ಸಿಂಗ್ ದಂಪತಿ, ತುಪ್ಪದ ದೀಪ ಸೇವೆ ಮಾಡಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಬರಮಾಡಿಕೊಂಡು, ಸ್ಮರಣಿಕೆ ನೀಡಿ ಗೌರವಿಸಿದರು. ಮೂಲತಃ ದಕ್ಷಿಣ ಕನ್ನಡದವರಾದ ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾದ ಶೇಖರ್ ಬಿ. ದೇವಸ ಜತೆಗಿದ್ದರು.

smt

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ್ ರೈ, ಜಾರಿ ನಿರ್ದೇಶನಾಲಯದ ವಿಶೇಷ ಸರಕಾರಿ ಅಭಿಯೋಜಕರಾದ ವಕೀಲರಾದ ಮಹೇಶ್ ಕಜೆ, ವಕೀಲರಾದ ಚೇತನ್ ನಾಯಕ್, ನರಸಿಂಹ ಪ್ರಸಾದ್, ದೀಪಕ್ ಬೊಳುವಾರು, ಭಾಸ್ಕರ್ ಕೋಡಿಂಬಾಳ, ಶಶಿ ಕಲ್ಲೂರಾಯ, ಸುರೇಶ್ ರೈ ಪಡ್ಡಂಬೈಲು ಮೊದಲಾದವರು ಉಪಸ್ಥಿತರಿದ್ದರು.

 


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 127