ಸ್ಥಳೀಯ

ಮಹಾವೀರ ಆಸ್ಪತ್ರೆಯಲ್ಲಿ ಕೆ.ಎಂ.ಸಿ. ಲ್ಯಾಬ್, ಡಾ. ಆಶಾ ಪುತ್ತೂರಾಯರಿಂದ ನೇತ್ರ ವಿಭಾಗ ಆರಂಭ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಹಾವೀರ ಆಸ್ಪತ್ರೆ ಎಂದೇ ಜನರಿಂದ ಕರೆಸಿಕೊಳ್ಳುವ ಬೊಳುವಾರು ಮಹಾವೀರ ಮೆಡಿಕಲ್ ಸೆಂಟರ್ ಶುಕ್ರವಾರ 28ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಮತ್ತಷ್ಟು ಹೊಸತನಕ್ಕೆ ಸಾಕ್ಷಿಯಾಗಿದೆ. ಮಂಗಳೂರಿನ ಕೆಎಂಸಿ ಆಸ್ಪತೆಯವರ ಸುಧಾರಿತ ಲ್ಯಾಬೋರೇಟರಿ ಹಾಗೂ ಕಣ್ಣಿನ ಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಗಿದೆ ಎಂದು ಆಸ್ಪತ್ರೆಯ ಡಾ.ಅಶೋಕ್ ಪಡಿವಾಳ್ ಹೇಳಿದರು.

maithri

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 26 ಬೆಡ್’ಗಳಿಂದ ಪ್ರಾರಂಭವಾದ ಮಹಾವೀರ ಮೆಡಿಕಲ್ ಸೆಂಟರ್ ಇದೀಗ 60 ಬೆಡ್ ಗಳಿಗೆ ಏರಿಕೆಯಾಗಿದೆ. ಇದಕ್ಕೆ ಡಾ. ಸುರೇಶ್ ಪುತ್ತೂರಾಯರೇ ಕಾರಣ. ರೋಗಿಗಳ ಚಿಕಿತ್ಸೆಗಳ ಆವಶ್ಯಕತೆಗೆ ತಕ್ಕಂತೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಜೋಡಿಸಿಕೊಳ್ಳಲಾಗಿದೆ. 2018ರಲ್ಲಿ ಮಾಡ್ಯುಲರ್ ಆಪರೇಷನ್ ಥಿಯೇಟರ್‌ನ್ನು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪ್ರಾರಂಭಿಸಲಾಗಿದೆ. ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಜನರಲ್ ಮೆಡಿಸಿನ್, ಆರ್ಥೋಪೆಡಿಕ್ಸ್, ಸ್ತ್ರೀರೋಗ ಶಾಸ್ತ್ರ, ಇಎನ್‌ಟಿ ಮತ್ತು ಡಯಾಲಿಸಿಸ್ ಸೌಲಭ್ಯದಂತಹ ವ್ಯಾಪಕ ಶ್ರೇಣಿಯ ಒಪಿ ಮತ್ತು ಐಪಿ ಸೇವೆಗಳೊಂದಿಗೆ ಡಾ. ಸುರೇಶ್ ಪುತ್ತೂರಾಯ, ಡಾ. ರಾಜೇಶ್ವರಿ ಪಡಿವಾಳ, ಡಾ. ಪ್ರದೀಪ್, ಡಾ. ನಾಗಶ್ರೀ, ಡಾ. ಅರ್ಚನಾ ಮತ್ತು ಡಾ. ಸಚಿನ್ ಅವರಂತಹ ಹಿರಿಯ ವೈದ್ಯರು ಜೀವ ಉಳಿಸಲು ಮತ್ತು ರೋಗಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಮರ್ಪಿತರಾಗಿದ್ದಾರೆ ಎಂದರು.

ಸುಧಾರಿತ ಲ್ಯಾಬೋರೇಟರಿ ವಿಭಾಗ ಆರಂಭ:

ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರುಗಳಿಗೆ ಲ್ಯಾಬೋರೇಟರಿ ಪರೀಕ್ಷಾ ವರದಿಯು ಬಹುಮುಖ್ಯ ಆಧಾರವಾಗಿದೆ. ಇದಕ್ಕಾಗಿ ರಾಷ್ಟ್ರೀಯ ಮಾನ್ಯತೆ ಪಡೆದಿರುವ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಕೆಎಂಸಿ ಆಸ್ಪತ್ರೆಯವರು ಮಹಾವೀರ ಆಸ್ಪತ್ರೆಯ ಆವರಣದಲ್ಲಿ ಸುಧಾರಿತ ಲ್ಯಾಬೋರೇಟರಿ ವಿಭಾಗವನ್ನು ಪ್ರಾರಂಭಿಸಿದ್ದ ಪುತ್ತೂರಿನ ಜನರಿಗೆ ಸಮಗ್ರ ಗುಣಮಟ್ಟದ ಕೊಡುಗೆಯಾಗಿ ವಿಶ್ವಾಸಾರ್ಹ ರೋಗನಿರ್ಣಯ ಸೇವೆಗಳನ್ನು ನೀಡಲಿದೆ. ಅಲ್ಲದೆ 28ನೇ ವರ್ಷದ ಸಂಭ್ರಮದಲ್ಲಿ ಡಾ.ಆಶಾ ಪುತ್ತೂರಾಯ ಅವರು ಕಣ್ಣಿನ ಚಿಕಿತ್ಸೆ ವಿಭಾಗವನ್ನು ಆಸ್ಪತ್ರೆಯಲ್ಲಿ ಪ್ರಾರಂಭಿಸಿದ್ದಾರೆ ಎಂದರು.

ರೋಟರಿ ಕ್ಲಬ್ ಸಹಯೋಗದಲ್ಲಿ ಡಯಾಲಿಸಿಸ್ ಘಟಕ:

ಆಸ್ಪತ್ರೆಯಲ್ಲಿನ ಕಳೆದ 5 ವರ್ಷಗಳಿಂದ ರೋಟರಿ ಕ್ಲಬ್ ಸಹಯೋಗದಲ್ಲಿ ಡಯಾಲಿಸಿಸ್ ನಡೆಸುತ್ತಿದ್ದು ಬಿಪಿಎಲ್ ಕಾರ್ಡ್‌ದಾರರಿಗೆ ರೂ.750ಕ್ಕೆ ಡಯಾಲಿಸಿಸ್ ಮಾಡಲಾಗುತ್ತಿದೆ. 23 ಮಂದಿ ಡಯಾಲಿಸಿಸ್ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಪುತ್ತೂರಿನಲ್ಲೇ ಕೆಎಂಸಿಯ ಲ್ಯಾಬ್ ಪರೀಕ್ಷೆ:
ಕೆಎಂಸಿ ಆಸ್ಪತ್ರೆ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ಯಾವುದೇ ಚಿಕಿತ್ಸೆಗಳಿಗೂ ಲ್ಯಾಬೋರೇಟರಿಯ ವರದಿಯ ಬಹುಮುಖ್ಯವಾಗಿದೆ. ಇದಕ್ಕಾಗಿ ಆರೋಗ್ಯ ಕ್ಷೇತ್ರದಲ್ಲಿ 3 ದಶಕಗಳ ಅನುಭವವಿರುವ ಕೆಎಂಸಿ ಆಸ್ಪತ್ರೆಯ ಮೂಲಕ ಮಹಾವೀರ ಆಸ್ಪತ್ರೆಯಲ್ಲಿ ಲ್ಯಾಬೋರೇಟರಿ ಪ್ರಾರಂಭಿಸಲಾಗಿದ್ದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿರುವ ಎಲ್ಲಾ ಸಾಧನ, ಪರಿಕರಗಳನ್ನು ಲ್ಯಾಬೋರೇಟರಿಯಲ್ಲಿ ಅಳವಸಿಡಿಕೊಳ್ಳಲಾಗಿದೆ. ಇದರ ಮೂಲಕ ಲ್ಯಾಬ್ ಪರೀಕ್ಷೆಯಲ್ಲಿ ಎಲ್ಲಾ ರೀತಿಯಲ್ಲಿಯೂ ಗುಣಮಟ್ಟ ಕಾಯ್ದುಕೊಂಡು ನಿಖರವಾದ ವರದಿ ನೀಡಲಿದೆ. ಇಲ್ಲಿನ ಲ್ಯಾಬ್ ಕೆಎಂಸಿಯ ಕೇಂದ್ರೀಕೃತ ಲ್ಯಾಬ್‌ನ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸಲಿದೆ. ಹೆಚ್ಚುವರಿ ಪರೀಕ್ಷೆ, ದೃಡಪಡಿವ ಬಗ್ಗೆ ಕೆಎಂಸಿಯ ವೈದ್ಯರು ಪರಿಶೀಲಿಸಿ ನಿಖರವಾಗಿ ವರದಿ ನೀಡಲಿದ್ದಾರೆ. ರೋಗಿಗಳ ಚಿಕಿತ್ಸೆಗೆ ಆವಶ್ಯಕವಾದ ನಿಖರ ಮಾಹಿತಿ ನೀಡುವುದೇ ನಮ್ಮ ಉದ್ದೇಶವಾಗಿದೆ. ಇದರ ಮೂಲಕ ಪುತ್ತೂರಿನ ಜನತೆಗೆ ಸ್ಥಳೀಯವಾಗಿ ಉತ್ತಮ ಸೇವೆ ನೀಡಲಾಗುತ್ತಿದೆ. ಇದರಿಂದ ಪುತ್ತೂರಿನ ಜನತೆ ಅಗತ್ಯ ಆರೋಗ್ಯ ತನಿಖೆಗಳಿಗಾಗಿ ದೂರದ ಮಂಗಳೂರಿಗೆ ಪ್ರಯಾಣ ಮಾಡುವ ಅಗತ್ಯವನ್ನು ಕಡಿಮೆ ಮಾಡಲು ಈ ಲ್ಯಾಬ್ ಅನುಕೂಲವಾಗಲಿದೆ. ಪುತ್ತೂರಿನ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿರುವುದನ್ನು ಮಂಗಳೂರಿನ ವೈದ್ಯರು ಪರೀಕ್ಷಿಸಿ ಅವಶ್ಯ ಚಿಕಿತೆ ನೀಡಲು ಅನುಕೂಲವಾಗಲಿದೆ ಎಂದರು.

ವಿಶೇಷ ತಂತ್ರಜ್ಞಾನದಿಂ ಕೂಡಿದ ಚಿಕಿತ್ಸೆ:

ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಉತ್ತಮ ಗುಣಮಟ್ಟದಲ್ಲಿ ಇಷ್ಟು ವರ್ಷದಲ್ಲಿ ಸೀಮಿತ ವಿಭಾಗದಲ್ಲಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗುತ್ತಿತ್ತು. ಮಂಗಳೂರಿನ ಲ್ಯಾಬ್‌ಗಳಿಗೆ ಕಳುಹಿಸಬೇಕಾದ ಅನಿವಾರ್ಯತೆಯಿತ್ತು, ಕೆಎಂಸಿ ಲ್ಯಾಬ್‌ನಿಂದಾಗಿ ನಮ್ಮ ರೋಗಿಗಳಿಗೆ ಎಲ್ಲಾ ರೀತಿಯ ಪರೀಕ್ಷೆಯ ಜೊತೆಗೆ ಅತ್ಯಂತ ವೇಗವಾಗಿ ನಿಖರ ವರದಿ ದೊರೆಯಲಿದೆ. ರೋಗಿಗಳ ವಾಟ್ಟಪ್‌ಗಳಿಗೆ ಲ್ಯಾಬ್‌ನ ವರದಿ ದೊರೆಯಲಿದೆ. ವರದಿಯ ಗುಣಮಟ್ಟವು ಬಹಳಷ್ಟು ಪರಿಣಾಮಕಾರಿಯಾಗಿದೆ. 28 ವರ್ಷಗಳಲ್ಲಿ ವಿಶೇಷ ತಂತ್ರಜ್ಞಾನದಿಂದ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕವನ್ನು ಉನ್ನತೀಕರಣಗೊಳಿಸಲಾಗಿದೆ. ವೆಂಟಿಲೇಟರ್‌ನ್ನು ಅಳವಡಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳು ಪುತ್ತೂರು ಆಸುಪಾಸಿನ ರೋಗಿಗಳಿಗೆ ಅನುಕೂಲವಾಗಲಿದೆ. ಆಸ್ಪತ್ರೆಯ ಜೊತೆಗೆ ಇನ್ನಿತರ ಹಲವು ಸಮಾಜಮುಖಿ ಕಾರ್ಯಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಮೇ 10: ಕೆಮ್ಮಾಯಿಯಲ್ಲಿ ಆರ್ಕೆ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ವತಿಯಿಂದ ಉಚಿತ ಪುಸ್ತಕ, ಪೆನ್ನು ವಿತರಣೆ

ಪುತ್ತೂರು: ಕ್ರೀಡೆ, ಕಲೆ ಮತ್ತು ಸಾಂಸ್ಕೃತಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ…

1 of 123