Gl harusha
ಕರಾವಳಿಸ್ಥಳೀಯ

ಕಾಯರ್ತಡ್ಕ: ಬಿಜೆಪಿ ಯುವ ಮುಖಂಡ ರಾಜೇಶ್ ಮೇಲೆ ತಲವಾರು ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ಯುವ ಉದ್ಯಮಿ, ತಾಲೂಕು ಎಸ್‌.ಟಿ. ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ ಮೇಲೆ ಕಾಯರ್ತಡ್ಕದಲ್ಲಿ ಜೂ.4ರಂದು ಸಂಜೆ ತಲವಾರಿನಿಂದ ದಾಳಿ ನಡೆದಿದೆ.

srk ladders
Pashupathi
Muliya

ಕಳೆಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕುಶಾಲಪ್ಪ ಗೌಡ ಕಜೆ ದಾಳಿ ನಡೆಸಿದವರು ಎಂದು ಆರೋಪಿಸಲಾಗಿದೆ.

ಸಂಜೆ ತನ್ನ ಅಂಗಡಿ ಮುಚ್ಚಿ ಮನೆಗೆ ಹೊರಟಿದ್ದ ರಾಜೇಶ್ ಮೇಲೆ ದಾಳಿ ನಡೆಸಲಾಗಿದೆ.

ಸಧ್ಯ ರಾಜೇಶ್ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ವಸಂತ್ ಅಚಾರ್ ಭೇಟಿ ನೀಡಿದ್ದಾರೆ‌.


ಈ ಸುದ್ದಿಯನ್ನು ಶೇರ್ ಮಾಡಿ

Related Posts