ಸ್ಥಳೀಯ

ಡಿಸೆಂಬರ್ 20ರ ಒಕ್ಕಲಿಗ ಸಮುದಾಯದ ವಾರ್ಷಿಕ ಸಮಾವೇಶಕ್ಕೆ ಬೆಳ್ಳಿಪ್ಪಾಡಿ ಗ್ರಾಮ ಸಜ್ಜು | ಪ್ರತಿ ಮನೆಯ ಸದಸ್ಯರ ಪಾಲ್ಗೊಳ್ಳುವಿಕೆಗೆ ನಿರ್ಧಾರ – ಕಾರ್ಯಕ್ರಮದ ಯಶಸ್ಸಿಗೆ ಒಗ್ಗಟ್ಟಿನ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆಗಳ ವತಿಯಿಂದ ಡಿಸೆಂಬರ್ 20ರಂದು ನಡೆಯಲಿರುವ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗೌಡರ ಗಮ್ಮತ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಪೂರ್ವಭಾವಿಯಾಗಿ ಬೆಳ್ಳಿಪ್ಪಾಡಿ ಗ್ರಾಮ ಸಮಿತಿ ಸಭೆಯು ನ. 28 ಶನಿವಾರ ಸಂಜೆ 6 ಗಂಟೆಗೆ ಪ್ರೇಮಚಂದ್ರ ಗಾಂಗೇಯ ಸ್ಟೋರ್ (ಅಂಗಡಿ) ಮೇಲ್ಭಾಗದ ಚಾವಣಿಯಲ್ಲಿ ನಡೆಯಿತು.

ಸಭೆಯಲ್ಲಿ ಮುಂಬರುವ ವಾರ್ಷಿಕ ಸಮಾವೇಶದ ಸಿದ್ಧತೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಚಾರ ಕಾರ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ಗ್ರಾಮದ ಪ್ರತಿಯೊಂದು ಮನೆಯ ಸದಸ್ಯರ ಸಹಭಾಗಿತ್ವ ಅತ್ಯಂತ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಮನೆಗಳ ಸದಸ್ಯರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಮಾಜದ ಒಗ್ಗಟ್ಟು, ಸಂಘಟನೆಯ ಬೆಳವಣಿಗೆ ಹಾಗೂ ಮುಂದಿನ ಯೋಜನೆಗಳ ಅನುಷ್ಠಾನದಲ್ಲಿ ಪ್ರತಿಯೊಬ್ಬರ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯ ಮಹತ್ವವನ್ನು ಸಭೆಯಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು, ನಿಕಟಪೂರ್ವ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಕೋಶಾಧಿಕಾರಿ ಶ್ರೀಧರ ಗೌಡ ಕಣಜಾಲು, ಪ್ರಚಾರ ಸಮಿತಿ ಸಂಚಾಲಕ ಯತೀಶ್ ದೇವ, ಒಕ್ಕಲಿಗ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಸಿಸಿಪಿ ಸಂಯೋಜಕ ಪ್ರಸನ್ನ ಕುಮಾರ್ ಡಿ.ಆರ್., ಯುವ ಒಕ್ಕಲಿಗ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಸಂಘದ ಜಂಟಿ ಕಾರ್ಯದರ್ಶಿ ಮೋಹನ್ ಗೌಡ ಬಾಳುಗೋಡು, ನಿಕಟಪೂರ್ವ ಟ್ರಸ್ಟ್ ಅಧ್ಯಕ್ಷ ಡಿ.ವಿ. ಮನೋಹರ್, ಬೆಳ್ಳಿಪ್ಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಪ್ರೇಮಚಂದ್ರ, ಒಕ್ಕೂಟದ ಅಧ್ಯಕ್ಷ ಚಿಂತನ್ ಮಲುವೇಲು, ಯುವ ಸಂಘದ ಅಧ್ಯಕ್ಷ ಗಣೇಶ್ ಗೌಡ, ರಾಮಣ್ಣ ಗೌಡ ಗುಂಡೋಳೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ,ದಾಮೋದರ ಗೌಡ ಬೊಳಂದೂರು, ಮನೋಜ್ ಗೌಡ ಜತ್ರಿಬೆಟ್ಟು, ಲಕ್ಷ್ಮಣ ಗೌಡ ಕಂಬಳದಡ್ಡ, ಗಣೇಶ್ ಬಾತೊಳಿ, ನಿತಿನ್ ಕೆ., ರಾಮಚಂದ್ರ ಕೈಲಾಜೆ, ದೀಪಕ್ ಡಿ., ಗಣೇಶ್ ಗೌಡ ಕೈಲಾಜೆ, ಗಿರೀಶ್ ಗೌಡ ಅಲಿಮೆ, ಕರುಣಾಕರ, ಚೇತನ್, ಭುವನ ಸೇರಿದಂತೆ ಗ್ರಾಮ ಸಮಿತಿ ಮತ್ತು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯದ ಹಲವಾರು ಮಂದಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಹಾಲಿಂಗೇಶ್ವರ ದೇವಸ್ಥಾನದ ಅನುಮತಿ ರಹಿತ ಕಾಮಗಾರಿಗಳಿಗೆ ಹೈಕೋರ್ಟ್‌ ತಡೆಯಾಜ್ಞೆ: ವಿರೂಪಾಕ್ಷ ಮಚ್ಚಿಮಲೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಲಾಖೆಯ ಅನುಮತಿ ಇಲ್ಲದೇ ಅನೇಕ…

1 of 141