ಸ್ಥಳೀಯ

ಪುತ್ತೂರು ಬಿಲ್ಲವ ಬ್ರಿಗೇಡ್’ಗೆ ಪದಾಧಿಕಾರಿಗಳ ಆಯ್ಕೆ | ಗೌರವಾಧ್ಯಕ್ಷರಾಗಿ ಡಾ. ರಾಜಾರಾಮ್ ಕೆ.ಬಿ., ಅಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ಬಿಲ್ಲವ ಬ್ರಿಗೇಡ್ ಇದರ ಪ್ರಥಮ ಗೌರವಾಧ್ಯಕ್ಷರಾಗಿ ಡಾ.ರಾಜಾರಾಮ್ ಕೆ.ಬಿ., ಅಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು ಕೋಡಿಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಸುವರ್ಣ ಪೆರಿಯಡ್ಕ ಮತ್ತು ಕೋಶಾಧಿಕಾರಿಯಾಗಿ ಚಂದ್ರಶೇಖರ ಕಲ್ಲಗುಡ್ಡೆ ಆಯ್ಕೆಯಾಗಿದ್ದಾರೆ.

maithri

ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಮುದಾಯ ಅಭಿವೃದ್ಧಿ ಹೊಂದಲು ಶ್ರಮಿಸುವ ಉದ್ದೇಶದಿಂದ ಪುತ್ತೂರು ಬಿಲ್ಲವ ಬ್ರಿಗೇಡ್ ಅನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಪುತ್ತೂರಿನ ಮಾಜಿ ಸೈನಿಕರ ಭವನದಲ್ಲಿ ಜೂ. 25ರಂದು ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವ ಸಲಹೆಗಾರರಾಗಿ ಸಂಜೀವ ಪೂಜಾರಿ ಕೂರೇಲು, ಪದ್ಮನಾಭ ಪೂಜಾರಿ ಅಳಿಕೆ, ದೇವಾನಂದ ಕೆ., ಉಪಾಧ್ಯಕ್ಷರಾಗಿ ಅಣ್ಣಿ ಪೂಜಾರಿ ಕೆಮ್ಮಾಯಿ, ಮೋಹನ್ ಗುರ್ಜಿನಡ್ಕ, ಜಗದೀಶ್ ಪೂಜಾರಿ ನೇರಳಕಟ್ಟೆ, ಜತೆ ಕಾರ್ಯದರ್ಶಿಗಳಾಗಿ ಹರೀಶ್ ಬಂಗೇರ, ಪ್ರವೀಣ್ ಅಳಿಕೆ ಸಣ್ಣಗುತ್ತು, ಕಿರಣ್ ಕುಮಾರ್ ಬಸಂತಕೋಡಿ, ಕಾನೂನು ಸಲಹೆಗಾರರಾಗಿ ಮನೋಹರ ಎ. ಆರುವಾರಗುತ್ತು, ಕುಮಾರನಾಥ ಎಸ್. ಕೋಡಿಂಬಾಡಿ, ಮಾಧ್ಯಮ ಸಲಹೆಗಾರರಾಗಿ ಸಂತೋಷ್ ಕುಮಾರ್ ಶಾಂತಿನಗರ, ಪ್ರಚಾರ ಸಮಿತಿ ಪ್ರಮುಖರಾಗಿ ಅಜಿತ್ ಕೆ.ಆರ್. ಪೂಜಾರಿ ಕೋಡಿಂಬಾಡಿ, ಪೃಥ್ವಿರಾಜ್ ಗೆಣಸಿನ ಕುಮೇರು, ಸಲಹೆಗಾರರಾಗಿ ನವೀನ್ ಕರ್ಕೇರ, ಎಲ್ಯಣ್ಣ ಪೂಜಾರಿ, ಹರೀಶ್ ನಿಡ್ಪಳ್ಳಿ, ಶಿವಪ್ರಸಾದ್ ಇರ್ದೆ, ಸಂಘಟನಾ ಕಾರ್ಯದರ್ಶಿಗಳಾಗಿ ನಾರಾಯಣ ಪೂಜಾರಿ ಇರ್ದೆ, ಕರುಣಾಕರ ಕರ್ಕೇರ ಬಲ್ನಾಡು ಮತ್ತು ರಾಜೇಶ್ ಅರ್ಲಪದವು ಅವರನ್ನು ಆಯ್ಕೆ ಮಾಡಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

ನಮ್ಮ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಯಿಂದಲೇ ಕಾಮಗಾರಿ ಉದ್ಘಾಟಿಸಿದ ಶಾಸಕ!

ಪುತ್ತೂರು: ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ…

1 of 124