Gl
ಸ್ಥಳೀಯ

ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಸಹಿತ ವಿವಿಧ ಬ್ರ್ಯಾಂಡಿನ ಮದ್ಯ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ಪರವಾನಗಿಯಿಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಹಿತ ಸಾವಿರಾರು ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮಂಚಿ ಎಂಬಲ್ಲಿ ನಡೆದಿದೆ.

Pashupathi

ಮಂಚಿಕಟ್ಟೆ ಎಂಬಲ್ಲಿ ಸುಧಾಕರ್ ಎಂಬವರು ಅಕ್ರಮ ಮದ್ಯ ಮಾರಾಟ ‌ಮಾಡುತ್ತಿದ್ದ ವ್ಯಕ್ತಿಯಾಗಿದ್ದು,ಇವರನ್ನು ಬಂಧಿಸಿದ ಪೋಲೀಸರು 32,34 KE act1965 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

akshaya college

ಆರೋಪಿ ಸುಧಾಕರ್ ಅವರು ಮಂಚಿಕಟ್ಟೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚುವರಿಯಾಗಿ ಪಡೆದುಕೊಂಡು ಮಾರಾಟ ಮಾಡುತ್ತಿರುವ ಆರೋಪ ಬಂದಿದ್ದು, ಇವರ ಬಳಿಯಿಂದ 1480 ರೂ ಮೌಲ್ಯದ ವಿವಿಧ ಕಂಪೆನಿಯ ಮದ್ಯದ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ.

80 ರೂ ಮುಖಬೆಲೆಯ 320 ರೂ ಮೌಲ್ಯದ ಅಮೃತ್ ಪ್ರೆಸ್ಟಿಜ್ ವಿಸ್ಕಿ 180 ML ನ ಪ್ಲಾಸ್ಟಿಕ್‌ 4 ಬಾಟಲಿ, 40 ರೂ ಮುಖಬೆಲೆಯ 160 ರೂ ಮೌಲ್ಯದ ಅಮೃತ್ ಪ್ರೆಸ್ಟಿಜ್ ವಿಸ್ಕಿ ಎಂದು ಬರೆದಿರುವ 90 ML ನ 4 ಸ್ಯಾಚೆಟ್, 40 ರೂ ಮುಖಬೆಲೆಯ 560 ರೂ ಮೌಲ್ಯದ Original Choice Deluxe whisky ಎಂದು ಬರೆದಿರುವ 90 ML ನ 14 ಸ್ಯಾಚೆಟ್‌, 40 ರೂ ಮುಖಬೆಲೆಯ 440 ರೂ ಮೌಲ್ಯದ Mysore Lancer Whisky ಎಂದು ಬರೆದಿರುವ 90 ML ನ 11 ಸ್ಯಾಚೆಟ್ ಹಾಗೂ ಗಿರಾಕಿಗಳಿಗೆ ಮದ್ಯ ಮಾರಾಟ ಮಾಡಿ ಬಂದ ರೂ. 350 ಹಣವನ್ನು ಪೋಲೀಸರು ವಶಪಡಿಸಿಕೊಂಡಿದ್ಧಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts