ಪುತ್ತೂರು: ಸೌಂದರ್ಯ ಸದಾ ತಾಜಾ ಆಗಿರಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ? ಸದಾ ಕಾಲ ಸೌಂದರ್ಯವತಿ ಆಗಿರಬೇಕಾದರೆ ಗುಣಮಟ್ಟದ ಸೌಂದರ್ಯ ಸಾಧನಗಳ ಬಳಕೆ ಹಾಗೂ ಬ್ಯೂಟಿಷಿಯನ್ ಅವರ ಕೈಚಳಕ ಅಗತ್ಯ.
ಇಂತಹ ಬ್ಯೂಟಿ ಪಾರ್ಲರ್ ಹೊಂದಿರುವವರು ರಚನಾ ರೈ. ಸಂಸ್ಥೆಯ ಹೆಸರು ರಚನಾ ರೈ ಮೇಕಪ್ ಆ್ಯಂಡ್ ಹೇರ್.
ಪುತ್ತೂರು ಮುಖ್ಯರಸ್ತೆಯ ಇನ್’ಲ್ಯಾಂಡ್ ವಾಣಿಜ್ಯ ಸಂಕೀರ್ಣದ ಎರಡನೇ ಅಂತಸ್ತಿನಲ್ಲಿ ರಚನಾ ರೈ ಮೇಕಪ್ ಆ್ಯಂಡ್ ಹೇರ್ ಸಂಸ್ಥೆಯಿದೆ.
ಮೇಕಪ್ ಆ್ಯಂಡ್ ಹೇರ್ ಜೊತೆಗೆ ಬ್ಯೂಟಿಷಿಯನ್ ತರಬೇತಿಯನ್ನು ನೀಡುವುದೇ ಇಲ್ಲಿನ ವಿಶೇಷತೆ. ಆರಂಭವಾದ ಕೆಲವೇ ತಿಂಗಳುಗಳಲ್ಲಿ ಜನಮಾನಸಕ್ಕೆ ಹತ್ತಿರವಾಗಿದೆ. ಸಾಕಷ್ಟು ಮಂದಿ ಇಲ್ಲಿ ತರಬೇತಿ ಪಡೆದುಕೊಂಡು, ಅನುಭವಿ ಬ್ಯೂಟಿಷಿಯನ್ ಆಗಿ ಹೊರಹೊಮ್ಮಿದ್ದಾರೆ.
ರಚನಾ ಮೇಕಪ್ ಆ್ಯಂಡ್ ಹೇರ್ ಸಂಸ್ಥೆಯ ತರಬೇತಿ ವಿಭಿನ್ನವಾಗಿರಲಿದೆ. ಬ್ರಾಂಡೆಡ್ ಉತ್ಪನ್ನಗಳ ಕಿಟ್ ಜೊತೆಗೆ ತರಬೇತಿಯ ಕೊನೆಗೆ ಮಾಡೆಲ್ ಫೊಟೋಶೂಟ್ ಕೂಡ ಇರಲಿದೆ.
ಒಟ್ಟು 35 ದಿನಗಳ ಈ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಪರಿಪೂರ್ಣ ಬ್ಯೂಟಿಷಿಯನ್ ಆಗಿ ಹೊರಹೊಮ್ಮಲಿದ್ದಾರೆ. ತರಬೇತಿಯ ಕೊನೆಗೆ ಸರ್ಟಿಫಿಕೇಟ್ ನೀಡಲಾಗುವುದು. ತರಬೇತಿ ಸಂದರ್ಭ ಅವಶ್ಯಕ ಪರಿಕರಗಳ ಕಿಟ್ ನೀಡಲಾಗುವುದು. ಇದು ಬ್ರಾಂಡೆಡ್ ಪರಿಕರಗಳಾಗಿದ್ದು, ಬ್ಯೂಟಿಷಿಯನ್’ಗಳಿಗೆ ಸದಾ ಉಪಕಾರಿ.
ತರಬೇತಿಯಲ್ಲಿ ಬ್ಯೂಟಿ ಉತ್ಪನ್ನಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ತರಬೇತಿಯ ನಂತರ ಮಾರ್ಕೆಟಿಂಗ್ ನಡೆಸಲು ಸಹಕಾರ ನೀಡಲಾಗುವುದು. ಒಂದು ವೇಳೆ ತರಬೇತಿ ನಂತರವೂ ಸಂದೇಹಗಳಿದ್ದರೆ, ಸಂಸ್ಥೆಗೆ ಆಗಮಿಸಿ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ.
ಶುಲ್ಕ ಪಾವತಿಗೆ ಇನ್’ಸ್ಟಾಲ್’ಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತರಬೇತಿ ಸಮಯ. ತರಬೇತಿಯ ಬಗ್ಗೆ ರಿವಿಷನ್ ಮಾಡಬೇಕೆಂದೆನಿಸಿದರೆ ಸಂಜೆ 4ರವರೆಗೂ ಸಂಸ್ಥೆಯಲ್ಲಿ ಕುಳಿತು ಅಭ್ಯಾಸ ನಡೆಸಬಹುದು. ಇದರ ಜೊತೆಗೆ ಭಾನುವಾರದ ತರಗತಿಗಳು ಇವೆ.
ತರಬೇತಿಯಲ್ಲಿ ಏನೇನಿದೆ?
ಪ್ರೊಫೆಷನಲ್ ಮೇಕಪ್ ಹಾಗೂ ಹೇರ್ ಸ್ಟೈಲ್
ಸಾರಿ ಪ್ರೀ ಪ್ಲೀಟಿಂಗ್
ಹಿಂದೂ, ಮುಸ್ಲಿಂ, ಕ್ಯಾಥೋಲಿಕ್ ಸೇರಿದಂತೆ ಎಲ್ಲಾ ಜಾತಿ – ಮತಗಳ ಮದುಮಗಳ ಮೇಕಪ್
ಹುಟ್ಟುಹಬ್ಬ, ಮೆಹಂದಿ, ಪ್ರೀ-ವೆಡ್ಡಿಂಗ್, ಪಾರ್ಟಿ ವೇರ್ ಮೊದಲಾದ ಕಾರ್ಯಕ್ರಮಗಳ ಮೇಕಪ್
ಹೇರ್ ಸ್ಟೈಲ್ – ಮೆಸ್ಸಿ, ಬನ್, ಜಲ್ಲಿ, ಕರ್ಲಿ, ಸ್ಟ್ರೈಟ್ನಿಂಗ್, ಎಕ್ಸ್’ಟೆನ್ಷನ್ ಹೇರ್ ಸ್ಟೈಲ್, ಶಾರದೆ ಜಲ್ಲಿ ಮೊದಲಾದ ಹೇರ್ ಸ್ಟೈಲ್.
ಕಚ್ಚೆ ಸಾರಿ ಸೇರಿದಂತೆ ಸೀರೆ ಉಡುವ ಹಲವು ವೈವಿಧ್ಯಗಳನ್ನು ಇಲ್ಲಿ ಕಲಿಸಿಕೊಡಲಾಗುವುದು

ತರಬೇತಿಯ ಜೊತೆಗೆ ಮೇಕಪ್’ನಲ್ಲಿಯೂ ರಚನಾ ರೈ ಎತ್ತಿದ ಕೈ ಎನ್ನುವುದು ಈಗಾಗಲೇ ಸಾಬೀತಾಗಿದೆ. ತಮ್ಮ ಸಂಸ್ಥೆಯಲ್ಲಿ ಮೇಕಪ್ ಮಾಡುವುದರ ಜೊತೆಗೆ, ಮನೆಗಳಿಗೆ ಆಗಮಿಸಿಯೂ ಮೇಕಪ್ ಮಾಡಿ, ಸಿದ್ಧಪಡಿಸುತ್ತಾರೆ.
ಅಂದಹಾಗೇ ಇಷ್ಟು ಮೇಕಪ್ ಹಾಗೂ ಹೇರ್ ಸ್ಟೈಲ್’ನಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಾರೆ ಎನ್ನುವುದರ ಜೊತೆಗೆ ಮಿತದರ ಎನ್ನುವುದು ಸತ್ಯ. ಉತ್ತಮ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿದೆ.
ಚರ್ಮದ ಕಾಂತಿಗೂ ಪೂರಕ:
ರಚನಾ ರೈ ಮೇಕಪ್ ಆ್ಯಂಡ್ ಹೇರ್ ಸ್ಟೈಲ್ ಸಂಸ್ಥೆಯಲ್ಲಿ ಗುಣಮಟ್ಟದ ಅದರಲ್ಲೂ ವೈದ್ಯರು ಶಿಫಾರಸು ಮಾಡುವ ಸೌಂದರ್ಯ ಉತ್ಪನ್ನಗಳನ್ನೇ ಬಳಸಿಕೊಳ್ಳುತ್ತಿದ್ದು, ಇದರ ಉದ್ದೇಶವೇನೆಂದರೆ ಚರ್ಮದ ಕಾಂತಿ. ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದು ಎಷ್ಟು ಮುಖ್ಯವೋ, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಅಗತ್ಯ.ದ
ಸಂಪರ್ಕಕ್ಕೆ: 99451 25925.
ಮೇಕಪ್, ತರಬೇತಿಯಲ್ಲಿ ಗುಣಮಟ್ಟದ ಉತ್ಪನ್ನಗಳಿಗೆ ಪ್ರಾಶಸ್ತ್ಯ:
ನಾವು ಗುಣಮಟ್ಟದ ಬ್ರಾಂಡೆಡ್ ಉತ್ಪನ್ನಗಳನ್ನು ಬಳಸಿಕೊಂಡೇ ಮೇಕಪ್ ಮಾಡುತ್ತೇವೆ. ಇದರಿಂದ ಮೇಕಪ್’ನ ತಾಜಾತನ ಇಡೀ ದಿನ ಹಾಗೇ ಇರಲಿದೆ. ಇಷ್ಟು ಗುಣಮಟ್ಟದ ಉತ್ಪನ್ನಗಳನ್ನು ಬಳಸಿಕೊಂಡು, ಮಿತದರದಲ್ಲಿ ಮೇಕಪ್ ಹಾಗೂ ಹೇರ್ ಸ್ಟೈಲ್ ಮಾಡುತ್ತೇವೆ. ಫೊಟೋ ನೀಡಿ, ಈ ರೀತಿ ಮೇಕಪ್ ಆಗಬೇಕು ಎಂದಾದರೆ ಅದಕ್ಕೂ ನಾವು ಸಿದ್ಧ. ಇದರ ಜೊತೆಗೆ, ತರಬೇತಿಯನ್ನು ನೀಡುತ್ತೇವೆ. ಮೇಕಪ್, ಹೇರ್ ಸ್ಟೈಲ್ ಪ್ರತ್ಯೇಕವಾಗಿ ಅಥವಾ ಎರಡೂ ಜೊತೆಯಾಗಿ ತರಬೇತಿ ಪಡೆದುಕೊಳ್ಳಲು ಅವಕಾಶವಿದೆ. ವಿವಿಧ ವಿನ್ಯಾಸದ ಹೇರ್ ಸ್ಟೈಲ್, ಮೇಕಪ್’ಗಳನ್ನು ನಾವು ಕಲಿಸಿಕೊಡುತ್ತೇವೆ. ಹೆಚ್ಚಿನ ಮಾಹಿತಿಗೆ ಇನ್’ಸ್ಟಾ ಐಡಿ rachanaraimakeover ಸಂದರ್ಶಿಸಿ.
ರಚನಾ ರೈ, ಮಾಲಕರು, ರಚನಾ ರೈ ಮೇಕಪ್ ಆ್ಯಂಡ್ ಹೇರ್