ಧಾರ್ಮಿಕ

ಭಾರತದ ಆಂತರ್ಯವಾದ ಆಧ್ಯಾತ್ಮದಿಂದ ದೇಶದ ಮೌಲ್ಯವರ್ಧನೆ | ಗುರುದೇವ ಆಧ್ಯಾತ್ಮ ಕೇಂದ್ರ ಲೋಕಾರ್ಪಣೆಗೊಳಿಸಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ | ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆ

GL
ಒಡಿಯೂರು ರಥೋತ್ಸವ..ತುಳುನಾಡ ಜಾತ್ರೆಯ ಸಂದರ್ಭದಲ್ಲಿ. ಶ್ರೀ ಗುರುದೇವ ಆಧ್ಯಾತ್ಮ ಕೇಂದ್ರವನ್ನು ದೀಪ ಪ್ರಜ್ವಲನೆ ಮಾಡಿ ಲೋಕಾರ್ಪಣೆಗೊಳಿಸಿ ಆನುಗ್ರಹ ಸಂದೇಶ ನೀಡಿದರು.

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಆಧ್ಯಾತ್ಮದಲ್ಲಿ ಬದುಕಿನ ಅಂತಃಸತ್ವ ಅಡಗಿದೆ. ತನ್ನನ್ನು ತಾನು ಅರಿತುಕೊಳ್ಳುವುದೇ ಆಧ್ಯಾತ್ಮಿಕತೆ. ಅಹಂಕಾರ ಮತ್ತು ಮಮಕಾರ ನಮ್ಮೆಲ್ಲ ಸಮಸ್ಯೆಗಳಿಗೆ ಕಾರಣ. ಅವುಗಳನ್ನು ತೊಡೆದು ಆಧ್ಯಾತ್ಮದತ್ತ ಒಲವು ತೋರಿದಾಗ ನೆಮ್ಮದಿಯ ಬದುಕು ಸಾಧ್ಯ ಆಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

maithri

ಅವರು ಫೆ. 6ರಂದು ಎರಡು ದಿನಗಳ ಒಡಿಯೂರು ರಥೋತ್ಸವ..ತುಳುನಾಡ ಜಾತ್ರೆಯ ಸಂದರ್ಭದಲ್ಲಿ. ಶ್ರೀ ಗುರುದೇವ ಆಧ್ಯಾತ್ಮ ಕೇಂದ್ರವನ್ನು ದೀಪ ಪ್ರಜ್ವಲನೆ ಮಾಡಿ ಲೋಕಾರ್ಪಣೆಗೊಳಿಸಿ ಆನುಗ್ರಹ ಸಂದೇಶ ನೀಡಿದರು.

ಇಳಿ ವಯಸ್ಸಿನಲ್ಲಿ ಆಧ್ಯಾತ್ಮದತ್ತ ವಾಲುವುದು ಸಹಜ. ಆದರೆ ಆಧ್ಯಾತ್ಮಕ್ಕೆ ವಯಸ್ಸಿನ ಮಾನದಂಡ ಇಲ್ಲ. ಇಂದು ಬದುಕಿನ ಎಲ್ಲಾ ಸಮಸ್ಯೆಗಳನ್ನು ಆಧ್ಯಾತ್ಮ ಪರಿಹರಿಸಬಹುದು.

ಆಧ್ಯಾತ್ಮಕ್ಕೆ ಗಟ್ಟಿ ನೆಲೆ ಒದಗಿಸುವ ದೃಷ್ಟಿಯಿಂದ ಒಡಿಯೂರು ಸಂಸ್ಥಾನದಲ್ಲಿ ಆಧ್ಯಾತ್ಮ ಕೇಂದ್ರ ನಿರ್ಮಾಣ ಮಾಡಲಾಗಿದೆ.

ಶ್ರೀ ಸಾದ್ವಿ ಮಾತಾನಂದಮಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶುಭಹಾರೈಸಿ ಮಾತನಾಡಿದರು. ವಿವಿಧ ಕ್ಷೇತ್ರಗಳ ಪ್ರಮುಖರಾದ ದಯಾನಂದ ಹೆಗ್ಡೆ. ಡಾ ಅಧೀಶ್‌ ಶೆಟ್ಟಿ. .ಐಕಳ ಹರೀಶ್‌ ಶೆಟ್ಟಿ, ವಾಮಯ್ಯ ಬಿ. ಶೆಟ್ಟಿ, ದಾಮೋದರ ಶೆಟ್ಟಿ, ಕಣಂಜಾರು ವಿಕ್ರಮ ಹೆಗ್ಡೆ. ಸಂಪತ್ ಕುಮಾರ್ ಶೆಟ್ಟಿ, ಸಂತೋಷ್ ಹೆಗ್ಡೆ, ಭರತ್ ಭೂಷಣ್, ಜಿತೇಂದ್ರ ಕೊಟ್ಟಾರಿ, ಸಹಕಾರ ರತ್ನ ಸುರೇಶ ರೈ ಎ.. ಸರ್ವಾಣಿ ಶೆಟ್ಟಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು. ಸಾದ್ವಿ ಶ್ರೀ ಮಾತಾನಂದಮಯಿ ಆಶಯಗೀತೆ ಹಾಡಿದರು.

ರಥೋತ್ಸವ ಸಮಿತಿ ಉಪಾಧ್ಯಕ್ಷ ಲೋಕನಾಥ ಜೆ. ಶೆಟ್ಟಿ ಒಡಿಯೂರು ಸ್ವಾಮೀಜಿಯವರನ್ನು ಹಾಗೂ ಸರಿತಾ ಲೋಕನಾಥ ಶೆಟ್ಟಿ ಶ್ರೀ ಸಾದ್ವಿ ಮಾತಾನಂದಮಯಿ ಅವರನ್ನು ಗೌರವಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಅನಾಹುತ, ಮೃತ್ಯು ಕಂಟಕ ಪರಿಹಾರಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಸೂಕ್ತ ಜಪ, ವಿಶೇಷ ಪ್ರಾರ್ಥನೆ

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮೃತ್ಯುಂಜಯ…

ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ

ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ…