ಪುತ್ತೂರು: ಇಲ್ಲಿನ ದ್ವಾರಕಾ ಪ್ರತಿಷ್ಠಾನದ ವತಿಯಿಂದ ಫೆ. 16ರಂದು ಜರಗುವ ದ್ವಾರಕೋತ್ಸವ-2025 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ.05ರಂದು ಪುತ್ತೂರಿನ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ಜರಗಿತು.
ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಬೆಟ್ಟ ಈಶ್ವರ ಭಟ್, ದ್ವಾರಕ ಪರಿಶ್ರಮದಿಂದ ಕಟ್ಟಿದ ಸಂಸ್ಥೆ. ಇದು ಗೋಪಾಲಕೃಷ್ಣ ಭಟ್ ಅವರ ಕನಸಿನ ಕೂಸು. ಗೋಪಾಲಕೃಷ್ಣ ಭಟ್ ಅವರು ಪರಿಶ್ರಮದಿಂದ ಹಂತ ಹಂತವಾಗಿ ಕಟ್ಟಿ ಬೆಳೆಸಿದ ದ್ವಾರಕ ಸಂಸ್ಥೆ ಹಮ್ಮಿಕೊಂಡಿರುವ ದ್ವಾರಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ದ್ವಾರಕಾ ಪ್ರತಿಷ್ಠಾನದ ಸಂಚಾಲಕ ಗಣರಾಜ್ ಕುಂಬ್ಳೆ ಶುಭಹಾರೈಸಿದರು.
ವೇದಿಕೆಯಲ್ಲಿ ದ್ವಾರಕ ಕಾರ್ಪೊರೇಟ್ ಪ್ರೈ ಲಿ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್, ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ದ್ವಾರಕಾ ಕಾರ್ಪೊರೇಟ್ ಪ್ರೈ ಲಿ ನಿರ್ದೇಶಕರು ಮತ್ತು ದ್ವಾರಕಾ ಪ್ರತಿಷ್ಠಾನ ಕಾರ್ಯದರ್ಶಿಗಳಾದ ಅಮೃತ ಕೃಷ್ಣ, ನಿರ್ದೇಶಕರಾದ ಅಶ್ವಿನಿ ಎನ್ ಉಪಸ್ಥಿತರಿದ್ದರು.
ದುರ್ಗಾ ಗಣೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.