tamanvi
ಅಪರಾಧ

ಪ್ರೇತ ಭಾದೆಗೆ ಬೆಚ್ಚಿ ಬಿದ್ದ  ಮಡಂತ್ಯಾರು ಕುಟುಂಬ.!

D_shiva_bhat
ಕತ್ತಲು ಆವರಿಸುತ್ತಿದ್ದಂತೆ, ಮನೆ ಯೊಳಗೆ ಇರುವ ಬಟ್ಟೆಗೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆಗಳು ಬೀಳುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸಿದಂತಾಗುವುದು,

ಈ ಸುದ್ದಿಯನ್ನು ಶೇರ್ ಮಾಡಿ

ಮಡಂತ್ಯಾರು: ಇಲ್ಲಿಗೆ ಸಮೀಪದ ಕೊದಬೈಲ್

maithri

ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಕೆಲವು ದಿನಗಳಿಂದ ವಿಚಿತ್ರ ಘಟನಾವಳಿಗಳು ನಡೆಯುತ್ತಿದ್ದು, ಇದರಿಂದ ಆತಂಕ ಗೊಂಡಿರುವ ಮನೆ ಮಂದಿ ಗುರುವಾರ ಮನೆಯನ್ನೇ ತೊರೆದು ಸಂಬಂಧಿಕರ ಮನೆಗೆ ತೆರಳಿದ್ದಾರೆ.

ಕತ್ತಲು ಆವರಿಸುತ್ತಿದ್ದಂತೆ, ಮನೆ ಯೊಳಗೆ ಇರುವ ಬಟ್ಟೆಗೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆಗಳು ಬೀಳುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸಿದಂತಾಗುವುದು, ಗಂಧ-ಪ್ರಸಾದ ನಾಪತ್ತೆಯಾಗುವುದು ಇತ್ಯಾದಿ ವಿಚಿತ್ರ ಘಟನೆಗಳು ನಡೆಯುತ್ತಿವೆ ಎಂದು ಉಮೇಶ್ ಶೆಟ್ಟಿ ತಿಳಿಸಿದ್ದಾರೆ. ಇದನ್ನು ತಿಳಿದು ಪರಿಸರದ ಹಲವಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವಿಶೇಷ ಎಂದರೆ ಮನೆ ಎದುರು ಜನ ಸೇರಿದಾಗ ಇಂತಹ ಘಟನೆಗಳು ನಡೆದಿಲ್ಲ ಎನ್ನುತ್ತಿದ್ದಾರೆ.

ಪತ್ನಿ ಮತ್ತು ಇಬ್ಬರು ಪುತ್ರಿಯರ ಜತೆ ಉಮೇಶ್ ಶೆಟ್ಟಿ ಇಲ್ಲಿ ವಾಸವಾಗಿದ್ದಾರೆ. ಮನೆ ಮಂದಿಗೆಲ್ಲ ವಿಚಿತ್ರ ಅನುಭವಗಳಾಗುತ್ತಿವೆ. ಯಾರೋ ಓಡಾಡಿಕೊಂಡ ಹಾಗೆ ಆಗುತ್ತಿದೆ. ಮನೆಯಲ್ಲಿದ್ದ ಚಿನ್ನ ಕೂಡ ಇತ್ತೀಚೆಗೆ ನಾಪತ್ತೆಯಾಗಿದೆ ಎಂದು ಸೆಂಟ್ರಿಂಗ್ ಕೆಲಸ ಮಾಡಿ ಜೀವನ ಸಾಗಿರುತ್ತಿರುವ ಉಮೇಶ್ ತಿಳಿಸಿದ್ದಾರೆ. ಇದು ಪ್ರೇತ ಮತ್ತು ದೈವದ ಸಮಸ್ಯೆಯಾಗಿರಬೇಕೆಂಬುದು ಅವರ ಅಭಿಪ್ರಾಯವಾಗಿದೆ.

ಮನೆಯಲ್ಲಿ ಕಾದು ಕುಳಿತು ಹೊರಗಿನವರು ಪರಿಶೀಲನೆ ನಡೆಸಿದಾಗ ಅಂತಹ ಯಾವುದೇ ವಿಷಯ ಗೊತ್ತಾಗಿಲ್ಲ. ಈ ನಡುವೆ ಮಕ್ಕಳು ಕೆಲವೊಂದು ವೀಡಿಯೋ ಮಾಡಿದ್ದು, ಅದು ಅಸ್ಪಷ್ಟತೆಯಿಂದ ಕೂಡಿದೆ.

ಇನ್ನು ಅಚ್ಚರಿಯ ವಿಚಾರವೆಂದರೆ, ವಿಚಿತ್ರವಾದ ಮುಖವೊಂದು, ಪ್ರೇತ ಎನ್ನಲಾದ ಚಹರೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ದೆವ್ವನೇ ಎಂದು ವಿಚಿತ್ರ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಬೆಡ್ ರೂಂನಲ್ಲಿ ಮನೆಯ ಬಾಲಕಿ ಈ ಚಿತ್ರ ಕ್ಲಿಕ್ಕಿಸಿದ್ದಾಳಂತೆ. ಸದ್ಯ ದೆವ್ವ ಇದೇ ಎನ್ನುವ ಆ ಕುಟುಂಬವು ಅದರ ಕಾಟಕ್ಕೆ ನಲುಗಿ ಹೈರಾಣಾಗಿದೆ. ಗ್ರಾಮದ ಜನ ಭಯಗೊಂಡಿದ್ದಾರೆ

 ಪರಿಸರದಲ್ಲಿ ಇತರ ಕೆಲವು ಮನೆಗಳಿದ್ದು, ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ.

ಸ್ಕೂಟಿಯಲ್ಲಿ ಪ್ರಸಾದ!

ಉಮೇಶ್ ಅವರು ಸ್ಕೂಟಿ ಹೊಂದಿದ್ದು, ಕೆಲವು ದಿನಗಳಿಂದ ಅದರಲ್ಲಿ ಪ್ರಸಾದ ಕಂಡುಬರುತ್ತಿರುವುದಾಗಿ ತಿಳಿಸಿದ್ದಾರೆ. ಪ್ರತೀದಿನ ಹೊರಗೆ ಹೋಗಿ ಬಂದಾಗ ಅದರಲ್ಲಿ ಪ್ರಸಾದ ಕಂಡುಬರುತ್ತಿದೆ. ಇದಕ್ಕಾಗಿ ಒಮ್ಮೆ ದಿನವಿಡೀ ಕಾದು ಕುಳಿತಿದ್ದೆ. ಅಂದು ಪ್ರಸಾದ ಕಾಣಲಿಲ್ಲ. ಈ ಬಗ್ಗೆ ಜೋತಿಷಿಗಳಲ್ಲಿ ಪ್ರಶ್ನೆ ಚಿಂತನೆ ನಡೆಸಿದಾಗ ಪ್ರೇತ ಮತ್ತು ದೈವದ ಸಮಸ್ಯೆ ಎನ್ನುತ್ತಿದ್ದಾರೆ.

ಇದಕ್ಕೆಲ್ಲ ಪರಿಹಾರ ಮಾಡಿಸುವ ಶಕ್ತಿ ಬಡವನಾದ ನನ್ನಲ್ಲಿ ಇಲ್ಲ ಎಂದು ಉಮೇಶ್ ವಿವರಿಸಿದ್ದಾರೆ. ರವಿವಾರ ಇಲ್ಲಿಗೆ ಹುಲಿಕಲ್‌ ನಟರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ!! ವೃದ್ಧರ ಕುತ್ತಿಗೆಯಿಂದ ಚಿನ್ನದ ಸರ, ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನ ಕಳ್ಳತನ!!

ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ…

1 of 117