ಧಾರ್ಮಿಕ

ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆ ನೀಡಿದ ಶಿಲ್ಪಾ ಶೆಟ್ಟಿ

GL
ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ರೇಣುಕಾಚಾರ್ಯ ದೇವಾಲಯಕ್ಕೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಭಾನುವಾರ ರೋಬೋಟಿಕ್ ಆನೆ ಗಿಫ್ಟ್ ನೀಡಿದ್ದಾರೆ. ಇದು ನೋಡುವುದಕ್ಕೆ ಜೀವಂತ ಆನೆಯಂತೆಯೇ ಭಾಸವಾಗಿತ್ತದೆ.

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು: ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ರೇಣುಕಾಚಾರ್ಯ ದೇವಾಲಯಕ್ಕೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಭಾನುವಾರ ರೋಬೋಟಿಕ್ ಆನೆ ಗಿಫ್ಟ್ ನೀಡಿದ್ದಾರೆ. ಇದು ನೋಡುವುದಕ್ಕೆ ಜೀವಂತ ಆನೆಯಂತೆಯೇ ಭಾಸವಾಗಿತ್ತದೆ.

chennai-shopping
maithri

ವೀರಭದ್ರ ಎಂದು ಕರೆಯಲಾಗುವ ಈ ಆನೆಯನ್ನು ಅನಾವರಣಗೊಳಿಸಿದ ಅರಣ್ಯ ಸಚಿವ ಈಶ್ವ‌ರ್ ಖಂಡ್ರೆ, ತಂತ್ರಜ್ಞಾನವು ದೇವಾಲಯಗಳಿಗೆ ಆನೆಗಳನ್ನು ಸಂಕೋಲೆಯಲ್ಲಿ ಇರಿಸದಂತೆ ಮಾಡಿದೆ ಎಂದರು.

ರಂಭಾಪುರಿ ಮಠದ ನಿರ್ಧಾರವನ್ನು ಶ್ಲಾಘಿಸಿದ ಸಚಿವರು, ಆನೆಯನ್ನು ನೀಡುವಂತೆ ಅನೇಕ ದೇವಾಲಯಗಳು ಮತ್ತು ಮಠಗಳು ಕೇಳಿವೆ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ,ಯಾವುದೇ ದೇವಾಲಯಕ್ಕೂ ಆನೆಗಳನ್ನು ಕೊಡುಗೆಯಾಗಿ ನೀಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ರೋಬೋಟಿಕ್ ನಂತಹ ತಂತ್ರಜ್ಞಾನ ಬಂದಿದ್ದು, ಶಿಲ್ಪಾಶೆಟ್ಟಿ ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಇಂಧನ ಸಚಿವ ಕೆಜೆ ಜಾರ್ಜ್, ಶಾಸಕ ಟಿ.ಡಿ. ರಾಜೇಗೌಡ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮತ್ತಷ್ಟು ದೇವಾಲಯ ಹಾಗೂ ಮಠಗಳಲ್ಲಿ ರೋಬೋಟಿಕ್ ಆನೆಗಳನ್ನು ಇಡಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ರಂಭಾಪುರಿ ಸ್ವಾಮೀಜಿ ಹೇಳಿದರು.

ಆಗಾಗ್ಗೆ ರಂಭಾಪುರಿ ಮಠಕ್ಕೆ ಭೇಟಿ ನೀಡುವ ಶಿಲ್ಪಾಶೆಟ್ಟಿ ಜೀವಂತ ಆನೆ ನೀಡುವುದಾಗಿ ಸಂಕಲ್ಪ ಮಾಡಿಕೊಂಡಿದ್ದರಂತೆ. ಆದರೆ, ಕಾನೂನಿನಲ್ಲಿ ಅದಕ್ಕೆ ತೊಡಕಿರುವ ಕಾರಣ ಇದೀಗ ರೋಬೋಟಿಕ್ ಆನೆ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪೋಳ್ಯ ಮಠದಲ್ಲಿ ಅರ್ಥಪೂರ್ಣವಾಗಿ ಮೂಡಿಬಂದ ಅರ್ಧ ಏಕಾಹ ಭಜನೆ | ನೂತನವಾಗಿ ಅಸ್ತಿತ್ವಕ್ಕೆ ಬಂದ ಶಾರಂಗ ತಂಡ ಆಯೋಜನೆ

ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದ ಆಶ್ರಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ…

ಮೇ 7ರಂದು ಶೃಂಗೇರಿ ಜಗದ್ಗುರುಗಳು ಪುತ್ತೂರಿಗೆ | ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ – ಜವಾಬ್ದಾರಿ ಹಂಚಿಕೆ

ಪುತ್ತೂರು: ಮೇ 7ರಂದು ನಗರದ ಬಪ್ಪಳಿಗೆಯಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿರುವ ಶೃಂಗೇರಿ…