ಪುತ್ತೂರು: ಮೈಸೂರು, ಮಡಿಕೇರಿ ಹಾಗೂ ಕುದ್ರೋಳಿಯಂತೆ ಪುತ್ತೂರಿನಲ್ಲೂ ಹಿಂದೆ ದಸರಾ ಉತ್ಸವಗಳು ವೈಭವದಿಂದ ನಡೆಯುತ್ತಿದ್ದವು. ಕಾಲಕ್ರಮೇಣ ಈ ಪರಂಪರೆ ಮಂಕಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ವೈಭವವನ್ನು ಮರುಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಹೊಸ ರೂಪ ನೀಡಲಾಗಿದ್ದು, ಈ ವರ್ಷದಿಂದ ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.11ರಿಂದ 21ರವರೆಗೆ 92ನೇ ವರ್ಷದ ನವರಾತ್ರಿ ಪೂಜೆ ಹಾಗೂ ಶಾರದೋತ್ಸವ ನಡೆಯಲಿದೆ. ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪುತ್ತೂರಿನ ದಸರಾ ಪರಂಪರೆಗೆ ಹೊಸ ರೂಪ
ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಶಾರದೋತ್ಸವವನ್ನು ಗತಕಾಲದ ವೈಭವ
























