ಸ್ಥಳೀಯ

ಪುತ್ತೂರು: ಮರಾಟಿ ಯುವ ವೇದಿಕೆಯ ನೂತನ ಕಾರ್ಯಕಾರಿ ಸಮಿತಿ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ (ರಿ.) ಕೊಂಬೆಟ್ಟು, ಪುತ್ತೂರು ಇದರ ಆಶ್ರಯದ ಅಂಗ ಸಂಸ್ಥೆಯಾದ ಮರಾಟಿ ಯುವ ವೇದಿಕೆಯ 2025-26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ರಚಿಸಲಾಯಿತು.

gl

ನೂತನ ಸಮಿತಿಯ ಅಧ್ಯಕ್ಷರಾಗಿ ಸಂದೀಪ್ ಆರ್ಯಾಪು, ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಕೆ. ಕಾಪುತಮೂಲೆ ಹಾಗೂ ಕೋಶಾಧಿಕಾರಿಯಾಗಿ ಗಂಗಾಧರ ಪಾಣಾಜೆ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಶ್ರೀನಿವಾಸ ಮಠಂತಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ವಸಂತ ಆರ್ಯಾಪು, ಕ್ರೀಡಾ ಕಾರ್ಯದರ್ಶಿಗಳಾಗಿ ಯತೀಶ್ ಕುಮಾರ್ ಕೆ.ಎಂ. ಪುಣ್ಚಪ್ಪಾಡಿ ಮತ್ತು ಜಗದೀಶ್ ಎಲಿಕ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಹರ್ಷಿತಾ ಬಿ.ಟಿ. ಶೇವಿರೆ ಮತ್ತು ತೇಜಸ್ ಎಂ.ಆರ್. ಆಯ್ಕೆಯಾದರು.

ಭಜನಾ ಉಸ್ತುವಾರಿಯಾಗಿ ವೆಂಕಪ್ಪ ಬರೆಪ್ಪಾಡಿ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ರವೀಶ್ ತಾರಿಗುಡ್ಡೆ, ವಿಜಯ ಮಠಂತಬೆಟ್ಟು ಮತ್ತು ಗೋಪಾಲ ಪಡುಮಲೆ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಕಾಶ್ ನೆಹರು ನಗರ, ನವೀನ್ ಎರ್ಕಮೆ, ಕುಸುಮಾಧರ, ಅಶ್ವಿನಿ ಸಿ.ಎಚ್. ಚಾಕೊಟೆ, ಸ್ವಾತಿ ಬೊಳಿಂಜ, ಸೌಜನ್ಯ ಬೊಳಿಂಜ, ಹರ್ಷತಾ ಎನ್. ಸಾಲ್ಮರ, ಪ್ರಣತಿ ಬಿ., ನವೀನ್ ಮೈರ, ಅಶ್ವಿತಾ ಜರಿನಾರು, ಜಸ್ಮಿತಾ ಜರಿನಾರು, ನಮ್ರತಾ ಡಿ. ಕೈಕಾರ, ಮಮತಾ ಎಸ್. ಪಂಜಿಗ, ಭೂಮಿಕಾ, ದೀಕ್ಷಾ ನಾಯ್ಕ್ ಹಾಗೂ ನವ್ಯಶ್ರೀ ಕೆ. ಆಯ್ಕೆಯಾದರು.

ಮರಾಟಿ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ನಾಯ್ಕ್ ಕೇಪುಲು ಅವರು ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು.

ನೂತನ ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ಯುವ ವೇದಿಕೆಯ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಗೂಂಡಾ ಕಾಯ್ದೆ ಜಾರಿ ಖಂಡಿಸಿ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ: ಸೆ.28ರ ಬಿ.ಸಿ. ರೋಡ್ ಚಲೋಗೆ ಬೆಂಬಲ

ಮಂಗಳೂರು: ಬಂಟ್ವಾಳದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯವು ಭರತ್…

1 of 138