ಧಾರ್ಮಿಕ

ಜೂನ್ 7ರಂದು ಸಾಮೂಹಿಕ ಸರಸ್ವತೀ ವಂದನೆ, ವಿದ್ಯಾ ಸಂಕಲ್ಪ | ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪ್ರಸ್ತುತ ವರ್ಷದ ಶಾಲಾ ಹಾಗೂ ಕಾಲೇಜುಗಳ ಆರಂಭದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ವಿದ್ಯೆ, ಸಂಸ್ಕಾರ ಹಾಗೂ ಏಕಾಗ್ರತೆಯ ಅಭಿವೃದ್ಧಿಗಾಗಿ ಸಾಮೂಹಿಕ ಸರಸ್ವತೀ ವಂದನೆ ಹಾಗೂ ವಿದ್ಯಾ ಸಂಕಲ್ಪ ಕಾರ್ಯಕ್ರಮ ಜೂನ್ 7ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಪುತ್ತೂರು ತಾಲೂಕು ಮತ್ತು ಗ್ರಾಮಾಂತರದ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಮತ್ತು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಪಾಂಗಳಾಯಿ ಶ್ರೀ ಮುಂಡ್ಯತ್ತಾಯ ದೈವಸ್ಥಾನ, ಕೋರ್ಟ್ ರಸ್ತೆ ಮುಳಿಯ ದೇವರಕಟ್ಟೆ, ಕೊಂಬೆಟ್ಟು ಅಟಲ್ ಉದ್ಯಾನ, ಕಲ್ಲೇಗ ಮಾಸ್ಟರ್ ಪ್ಲಾನರಿ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾ ವಿಷ್ಣು ದೇವಸ್ಥಾನ, ಕಲ್ಲಾರೆ ಶ್ರೀ ರಾಘವೇಂದ್ರ ಮಠದ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಕೇಂದ್ರಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಿಂದ ವಿದ್ಯಾ ಸಂಕಲ್ಪ, ಮಕ್ಕಳಿಂದ ಪುಸ್ತಕಕ್ಕೆ ಪುಷ್ಪಾರ್ಚನೆ, ದೇವಳದ ವೈದಿಕರಿಂದ ಸರಸ್ವತೀ ಸೂಕ್ತ ಹವನ ನಡೆಯಲಿದೆ. ಶಿಶು ಮಂದಿರದಿಂದ ಪ್ರಾರಂಭಿಸಿ ಸ್ನಾತಕೋತ್ತರ ಪದವಿವರೆಗಿನ ಸಾರ್ವಜನಿಕ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿದ್ಯಾರ್ಥಿಗಳು ಬರುವಾಗ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಬರಬೇಕು. ಒಂದು ಶಾಲಾ ಪುಸ್ತಕ ಅಥವಾ ಸುಜ್ಆನ ದೀಪಿಕೆ ಪುಸ್ತಕ ತರಬೇಕು. ಮನೆಯಲ್ಲೇ ಬೆಳೆದ ಒಂದು ಬೊಗಸೆ ಹೂವು ತಂದರೆ ಉತ್ತಮ ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು

ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…

ಕುದ್ರೋಳಿ: ಶಾರದಾ ಮಾತೆ, ನವದುರ್ಗೆಯರ ಮೂರ್ತಿ ಪ್ರತಿಷ್ಠೆ | ಮಂಗಳೂರು ದಸರಾದಲ್ಲಿ ಹಲವು ವಿಶೇಷತೆ: ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ಭಕ್ತಿಪೂರ್ಣ ಮಂತ್ರಘೋಷಗಳು, ಸಾಂಪ್ರದಾಯಿಕ ಸಂಗೀತ ಮತ್ತು ವರ್ಣರಂಜಿತ ಸಾಂಸ್ಕೃತಿಕ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವಿರುದ್ಧ ವಿ.ಹಿಂ.ಪ. ಆರೋಪ; ಅಭಿವೃದ್ಧಿ ಸಮಿತಿ ವಿಸರ್ಜನೆಗೆ ಆಗ್ರಹ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರ ಧಾರ್ಮಿಕ ಭಾವನೆ…