ಹೊಸದಿಲ್ಲಿ: ವಿಶೇಷ ಚೇತನರಿಗೆ ಕೋರ್ಟ್‌ಗಳನ್ನು ಸ್ಥಾಪಿಸಸುವ ಯೋಜನೆಗೆ ದಿಲ್ಲಿ ಮುಖ್ಯಮಂತ್ರಿ ಆತಿಶಿ ಮರ್ಲೇನಾ ಅನುಮೋದನೆ ನೀಡಿದ್ದಾರೆ.
ಅಂಗವಿಕಲರಿಗೆ ನ್ಯಾಯವನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ದಿಲ್ಲಿ ಸರಕಾರ ಈ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ವಿಶೇಷ ಚೇತನರ ಹಕ್ಕುಗಳನ್ನು ರಕ್ಷಿಸಲು ದಿಲ್ಲಿ ಸರಕಾರ ಬದ್ಧವಾಗಿದ್ದು, ಕೋರ್ಟ್‌ಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಈ ಮೂಲಕ ವಿಶೇಷ ಚೇತನರ ಹಿತಾಸಕ್ತಿ ಪೂರೈಸಲು ನ್ಯಾಯಾಂಗ ವ್ಯವಸ್ಥೆ ಸುಧಾರಿಸಲು ನಿರ್ಣಾಯಕ ಹೆಜ್ಜೆ ಇಡುತ್ತಿದ್ದೇವೆ ಎಂದು ದಿಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.