Gl harusha
ರಾಜ್ಯ ವಾರ್ತೆಸ್ಥಳೀಯ

BPL ಕಾರ್ಡ್ ಮೇಲೆ ಆಹಾರ ಇಲಾಖೆಯ ಕಣ್ಣು!! ಅನ್ನಭಾಗ್ಯದ ಬಗ್ಗೆಯೂ ಹೇಳಿಕೆ ನೀಡಿದ ಸಚಿವರು!!

ಸರ್ಕಾರದಿಂದ ಬಡವರಿಗೆ ದೊರೆಯುವ ಅನೇಕ ಸವಲತ್ತುಗಳನ್ನು ಅನರ್ಹರೂ ಕೂಡ ರಾಜ್ಯದಲ್ಲಿ ಬಿಪಿಎಲ್ (BPL) ಪಡಿತರ ಕಾರ್ಡ್   ಹೊಂದುವ ಮೂಲಕ  ಸವಲತ್ತುಗಳನ್ನು ಪಡೆಯುತ್ತಿದ್ದಾರೆ. 

ಈ ಸುದ್ದಿಯನ್ನು ಶೇರ್ ಮಾಡಿ

ಸರ್ಕಾರದಿಂದ ಬಡವರಿಗೆ ದೊರೆಯುವ ಅನೇಕ ಸವಲತ್ತುಗಳನ್ನು ಅನರ್ಹರೂ ಕೂಡ ರಾಜ್ಯದಲ್ಲಿ ಬಿಪಿಎಲ್ (BPL) ಪಡಿತರ ಕಾರ್ಡ್   ಹೊಂದುವ ಮೂಲಕ  ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಹೀಗೆ ಸವಲತ್ತುಗಳನ್ನು ಪಡೆಯುತ್ತಿರುವವರನ್ನು ಗಮನಿಸಿರುವ ಆಹಾರ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

srk ladders
Pashupathi
Muliya

ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿರುವ ಆಹಾರ ಇಲಾಖೆ ಅನರ್ಹರ ಚೀಟಿಗಳನ್ನು ರದ್ದುಗೊಳಿಸುತ್ತಿದೆ. ಇದೀಗ ಒಟ್ಟು 14 ಲಕ್ಷ ಕಾರ್ಡ್‌ಗಳನ್ನು ಗುರುತಿಸಿರುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ಆಹಾರ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಅಧಿಕಾರಿಗಳು 13.87 ಲಕ್ಷ ಅನರ್ಹ ಕಾರ್ಡ್‌ಗಳನ್ನು ಗುರುತಿಸಿದ್ದು, ಅವುಗಳಲ್ಲಿ 3.64 ಲಕ್ಷ ರದ್ದುಗೊಳಿಸಲಾಗಿದೆ. ಇದರಲ್ಲಿ ಸರ್ಕಾರಿ ನೌಕರರ 2,964 ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ.

ಕರ್ನಾಟಕದಲ್ಲಿ 4.35 ಕೋಟಿ ಫಲಾನುಭವಿಗಳು 1.51 ಕೋಟಿ ಪಡಿತರ ಕಾರ್ಡ್ ಮೂಲಕ ಸರ್ಕಾರದ ಅನೇಕ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.

ಇದೇ ವೇಳೆ ಪ್ರತಿ ಅನ್ನಭಾಗ್ಯ ಫಲಾನುಭವಿಗೆ ಐದು ಕೆಜಿ ಅಕ್ಕಿ ಬದಲಿಗೆ 170 ರೂ.ಗಳ ನೇರ ನಗದು ವರ್ಗಾವಣೆ (ಡಿಬಿಟಿ) ಮುಂದುವರಿಯಲಿದೆ ಎಂದು ಮುನಿಯಪ್ಪ ತಿಳಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts