tamanvi
ವಿದೇಶ

ಇರಾನ್–ಇಸ್ರೇಲ್ ಉದ್ವಿಗ್ನತೆ: ಸಂಕಷ್ಟದಲ್ಲಿರುವ ಭಾರತೀಯರಿಗಾಗಿ ತುರ್ತು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧೋನ್ಮುಖ ಪರಿಸ್ಥಿತಿಯಿಂದ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಈ ನಡುವೆಯೇ ಉಭಯ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆಗಾಗಿ ಭಾರತದ ವಿದೇಶಾಂಗ ಸಚಿವಾಲಯ ತುರ್ತು ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದೆ.ಇಸ್ರೇಲ್‌ನಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದಲ್ಲಿ, ಭಾರತೀಯರು 24×7 ಸಹಾಯವಾಣಿಯ ಮೂಲಕ ಟೆಲ್ ಅವೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿ, ಟೆಲ್ ಅವೀವ್ ಅನ್ನು ಸಂಪರ್ಕಿಸಬಹುದು.

ಸಂಪರ್ಕ ವಿವರಗಳು (ಇಸ್ರೇಲ್):

📞 +972-54-7520711

📞 +972-54-2428378

telaviv@mea.gov.in

ಇದೇ ರೀತಿ, ಇರಾನ್‌ನಲ್ಲಿ ಇರುವ ಭಾರತೀಯರು ತುರ್ತು ಸಂದರ್ಭಗಳಲ್ಲಿ ಕೆಳಗಿನ ಸಂಖ್ಯೆಗಳ ಮೂಲಕ ಅಲ್ಲಿನ ಭಾರತೀಯ ಮಿಷನ್ ಅನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ:

ಸಂಪರ್ಕ ವಿವರಗಳು (ಇರಾನ್):

📞 +989128109115

📞 +989128109109

📞 +989128109102

📞 +989932179359

ಇಸ್ರೇಲ್ ಇರಾನ್‌ನ ರಾಜಧಾನಿ ಟೆಹರಾನ್ ಮೇಲೆ ದಾಳಿ ನಡೆಸಿರುವ ಹಿನ್ನೆಲೆ, ಇರಾನ್ ಕೂಡ ಪ್ರತಿದಾಳಿ ಆರಂಭಿಸಿದೆ ಎಂದು ವರದಿಯಾಗಿದೆ. ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದ್ದು, ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.ಇರಾನ್ ಹಾಗೂ ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯ ನಿರಂತರವಾಗಿ ರಾಯಭಾರಿ ಕಚೇರಿಗಳೊಂದಿಗೆ ಸಂಪರ್ಕದಲ್ಲಿದೆ. ತುರ್ತು ಸಹಾಯವಾಣಿ ಪ್ರಾರಂಭಿಸುವ ಮೂಲಕ ಅಲ್ಲಿನ ಭಾರತೀಯರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಲಾಗಿದೆ.ಇದಲ್ಲದೆ, ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯೂ ಹೆಚ್ಚುತ್ತಿರುವುದರಿಂದ ಆ ಪ್ರದೇಶದಲ್ಲಿರುವ ಭಾರತೀಯರಲ್ಲಿ ಆತಂಕ ಮನೆಮಾಡಿದೆ. ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮುರಿದುಬಿತ್ತು ಅಮೆರಿಕ – ಇರಾನ್ ಶಾಂತಿ ಒಪ್ಪಂದ’? ಇರಾನ್ ಮುಂದಿರುವುದು ಸೇಡಿನ ಬಯಕೆಯೇ ಹೊರತು, ಸ್ನೇಹದ ಪ್ರದರ್ಶನವಲ್ಲ!!

ಕೊಲ್ಲಿ ರಾಷ್ಟ್ರಗಳ ಯುದ್ಧ ಇಸ್ಲಾಮಾಬಾದ್ ಶಾಂತಿ ಒಪ್ಪಂದದಿಂದ ತಹಬದಿಗೆ ಬಂತು ಎಂದು ವಿಶ್ವವೇ…