ಅಕ್ಷಯ ಪದವಿ ಕಾಲೇಜಿನಲ್ಲಿ ಪ್ರಿನ್ಸ್ ಮತ್ತು ಪ್ರಿನ್ಸೆಸ್ ದಕ್ಷಿಣ ಕನ್ನಡ 2K26 Season 02 ಫ್ಯಾಷನ್ ಶೋ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆ ಮಾಡಿದ ಎಸ್ ಜಿ ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸತ್ಯ ಶಂಕರ್ ಇವರು ಕಾಲೇಜಿನ ಪ್ರಗತಿಯ ಕುರಿತು ಮಾತನಾಡಿ ಸತತ ಪ್ರಯತ್ನಗಳ ಮೂಲಕ ಶ್ರಮಿಸಿದರೆ ಗೆಲುವು ಶತಸಿದ್ಧ ಎಂದು ಹೇಳಿದರು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕಲಾವತಿ ಜಯಂತ್ ಮಾತನಾಡಿ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಛಲ ಎಂಬುದು ಅತ್ಯಗತ್ಯ. ಮಾಡುವ ಕೆಲಸದಲ್ಲಿ ಪ್ರೀತಿ ಮತ್ತು ನಿಖರ ಗುರಿ ಅತ್ಯಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ರೂಪದರ್ಶಿ ಶ್ರೀಮತಿ ತಷ್ಮಾ ಚೇತನ್ ಇವರು ಪದವಿ ಮತ್ತು ಪ್ಯಾಷನ್ ಸಹಸಂಬಂಧ ಹೊಂದಿದ್ದು ಇದು ಖಂಡಿತ ಮುಂದಿನ ದಿನಗಳಲ್ಲಿ ಉತ್ತಮ ಬದುಕು ಕೊಡುತ್ತದೆ., ಅದಕ್ಕೆ ನಾನೇ ನಿದರ್ಶನ. ನಿಮ್ಮೆಲ್ಲರ ಬದುಕು ಹಸನಾಗಲಿ ಎಂದು ಶುಭ ಹಾರೈಸಿದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭ ದ ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀ ಜಯಂತ್ ನಡುಬೈಲು ಮಾತನಾಡಿ ಇಂದು ಮಕ್ಕಳ ನಡೆಯು ಕಾಲೇಜಿನಲ್ಲಿ ಧನಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲ ಅಕ್ಷಯ ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸಾಧನೆಯು ಸಾಗರದ ಆಚೆಗೂ ವಿಸ್ತರಿಸಿ ಕೊಂಡಿದೆ. ಅದು ಶಿಕ್ಷಣದ ಜೊತೆಗೆ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ಅದನ್ನು ನಮ್ಮ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ ಎನ್ನುತ್ತಾ ಎಲ್ಲರಿಗೂ ಶುಭಾಶಯಗಳನ್ನು ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಇಲಾಖೆ ಬೆಂಗಳೂರು ಇದರ ಸಹನಿರ್ದೇಶಕರಾಗಿರುವ ಆನಂದ. ಪಿ ಇವರು ಗ್ರಾಮೀಣ ಪ್ರದೇಶದಲ್ಲಿ ಅಕ್ಷಯ ಎಂಬ ಶಿಕ್ಷಣ ಸಂಸ್ಥೆ ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಹಾಗಾಗಿ ಈ ವಿದ್ಯಾಸಂಸ್ಥೆಗೆ ನನ್ನ ಸಹಕಾರ ಎಂದಿಗೂ ಇದೆ ಎನ್ನುತ್ತಾ ಶುಭಹಾರೈಸಿದರು.
ಮರ್ಸಿ ಬ್ಯೂಟಿ ಅಕಾಡೆಮಿ ಇದರ ಸಂಸ್ಥಾಪಕರಾದ ಶ್ರೀಮತಿ ಮರ್ಸಿ ವೀಣಾ ಡಿಸೋಜ ಇವರು ವೇದಿಕೆಗಳಿಗೆ ಹತ್ತಿದ ಕ್ಷಣವೇ ನೀವು ಗೆದ್ದಂತೆ. ಅದರ ಬಳಿಕ ಪ್ರಯತ್ನಗಳು ನಿಮ್ಮದಾಗಿಸಿಕೊಂಡರೆ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ ಎಂದು ಎಲ್ಲರಿಗೂ ಶುಭ ಕೋರಿದರು. ಇನ್ನೊರ್ವ ಅತಿಥಿಯಾದ ರೆಡ್ ಬುಟಿಕ್ & ಸ್ಟೈಲ್ ಸ್ಟುಡಿಯೋ ಇದರ ಒಡತಿಯಾಗಿರುವ ಶ್ರೀಮತಿ ಮೋನಿಷ ಕಂಪ ಶುಭ ಹಾರೈಸಿದರು.
ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ. ಪಕ್ಕಳ ಇವರು ಫೆಸೆರಾ ಅಸೋಸಿಯೇಶನ್ ವತಿಯಿಂದ ಈಗಾಗಲೇ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಇಲ್ಲಿನ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಕೂಡ ಹೆಸರು ಮಾಡಿ ಉದ್ಯೋಗ ಪಡೆದಿರುತ್ತಾರೆ. ಹಾಗಾಗಿ ಇಲ್ಲಿನ ನಿಮ್ಮ ಶ್ರಮಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಮಾತನಾಡಿ ಪಿಯುಸಿ ಮತ್ತು ಪದವಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸಾಧನೆಗಳನ್ನು ತಿಳಿಸುತ್ತಾ ನಮ್ಮ ಕಾಲೇಜಿಗೆ ನಿಮಗೆ ಎಂದಿಗೂ ಸ್ವಾಗತ ಎನ್ನುತ್ತಾ ಶುಭ ಹಾರೈಸಿದರು.
ಆಡಳಿತ ಅಧಿಕಾರಿ ಅರ್ಪಿತ್. ಟಿ. ಎ ಮಾತನಾಡಿ ಫ್ಯಾಶನ್ ಡಿಸೈನ್ ವಿದ್ಯಾರ್ಥಿಗಳು ಕೇವಲ ಯುನಿವರ್ಸಿಟಿ ರ‍್ಯಾಂಕ್ ಮಾತ್ರವಲ್ಲದೆ ಮಿ.ಕರ್ನಾಟಕ, ಕೋಸ್ಟಲ್ ಕರ್ನಾಟಕದಂತಹ ಪ್ರಶಸ್ತಿ ಗೆದ್ದು ಹೆಮ್ಮೆ ತಂದಿರುವುದನ್ನು ತಿಳಿಸಿ ಕೋರ್ಸ್ ಗಳ ಕುರಿತಾಗಿ ಮಾಹಿತಿ ನೀಡಿ ಈ ಕಾರ್ಯಕ್ರಮದ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದರು.
ಶೈಕ್ಷಣಿಕ ಮಾರ್ಗದರ್ಶಕರಾದ ಅಭಿಲಾಷ್ ಕ್ಷತ್ರಿಯ ಇವರು ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮಾನವನ ಯೋಚನೆಗಳು ಬೆಳೆಯಬೇಕು. ಅದಕ್ಕೆ ನಮ್ಮ ಕಾಲೇಜು ಎಲ್ಲಾ ತರದಲ್ಲೂ ಸಿದ್ದವಾಗಿದೆ ಎನ್ನುತ್ತಾ ಹಾರೈಸಿದರು.
ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು ಹಾಗೂ ಕಾರ್ಯಕ್ರಮದ ಇನ್ನೊರ್ವ ಪ್ರಾಯೋಜಕರಾದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ನ ಮಾಲಕರಾದ ಬಲರಾಮ ಆಚಾರ್ಯ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿನಿಯರಾದ ರಮ್ಯಾ ಮತ್ತು ಮೋಕ್ಷ ಪ್ರಾರ್ಥನೆ ಹಾಡಿ,ಉಪನ್ಯಾಸಕಿಯಾದ ಶ್ರೀಮತಿ ವೀಣಾ ಪ್ರಸ್ತಾವನೆಗೈದು, ಶ್ರೀಮತಿ ಪ್ರಭಾವತಿ ಮತ್ತು ಶ್ರೀಮತಿ ರಶ್ಮಿ ಸ್ವಾಗತಿಸಿ, ಕು. ಶೈಲಶ್ರೀ ಮತ್ತು ಶ್ರೀಮತಿ ಅನುಷಾ ಪ್ರವೀಣ್. ಮತ್ತು ಶ್ರೀಮತಿ ರಶ್ಮಿತಾ.ಎಸ್ ಅತಿಥಿಗಳ ಪರಿಚಯ ವಾಚಿಸಿ, ಕು. ಧನ್ಯಶ್ರೀ ಮತ್ತು ವಿದ್ಯಾರ್ಥಿನಿ ಜೆನ್ನಿಫರ್ ಡಿಸೋಜ ವಂದಿಸಿ. ವಿದ್ಯಾರ್ಥಿನಿ ರಝೀನ ಬಾನು ಕಾರ್ಯಕ್ರಮ ನಿರೂಪಿಸಿದರು
ಬಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
Prince & Princess of Dakshina kannada 2K26 Season 02 ಫ್ಯಾಷನ್ ಶೋ ವಿಜೇತರು :
Category 1 :
ಹುಡುಗರ ವಿಭಾಗ :
Winner : ಅಯಂಶ್ ಎನ್, First runner up : ಯಜ್ವಯ್ ಜಿ ,Second runner up: ತಸ್ಮಯ್ ಎಸ್ ಪಕ್ಕಳ
ಹುಡುಗಿಯರ ವಿಭಾಗ :
Winner : ಮನಸ್ವಿ, First runner up :ಸಮೃದ್ಧಿ ಎಸ್, Second runner up: ರಿಧೀಷಾ ಎಸ್
Category 2 :*
ಹುಡುಗರ ವಿಭಾಗ :
Winner : ಧನ್ವಿತ್ ಡಿ. ಪಿ , First runner up :ಅಧಿಶ್ ಎಲ್. ಎಸ್ , Second runner up: ಮೌರ್ಯ
ಹುಡುಗಿಯರ ವಿಭಾಗ :
Winner : ಪ್ರಶ್ವಿ ಎಸ್ ,First runner up :ಅಮೃತ ಜೆ. ಎನ್ , Second runner up: ಶೈವಿ ಮರಕ್ಕಡ
Category 3 :
ಹುಡುಗರ ವಿಭಾಗ :
Winner : ಅಹಿಲ್ ಹುಸೈನ್ ,First runner up :ಹಬೀಬ್ ಜರಾರ್ ,Second runner up: ಸ್ಲಾಹುದ್ದಿನ್
ಹುಡುಗಿಯರ ವಿಭಾಗ :
Winner : ವಿಹಾನಿ ಜಕೆ , First runner up :ಮಿಸ್ಚ ಅನ ಡಿಸೋಜ ,Second runner up: ಮೌಲ್ಯ ಪೂಜಾರಿ























