tamanvi
ಕರಾವಳಿ

ಕಾರ್ಪಾಡಿ ದ್ವಾರದ ಬಳಿ ಸರಣಿ ಅಪಘಾತ ಸಾಲುಗಟ್ಟಿ ನಿಂತ ವಾಹನಗಳು: ಪ್ರಯಾಣಿಕರ ಪರದಾಟ

ಪುತ್ತೂರು: ಸಂಪ್ಯ - ಕಲ್ಲರ್ಪೆ ನಡುವಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ಸರಣಿ ಅಪಘಾತ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂಪ್ಯ – ಕಲ್ಲರ್ಪೆ ನಡುವಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ಸರಣಿ ಅಪಘಾತ ನಡೆದ ಘಟನೆ ಸೋಮವಾರ ಮಧ್ಯಾಹ್ನ ನಡೆಯಿತು.

ಸಿಟಿ ಹೋಂಡಾ, ಎರ್ಟಿಗಾ ಹಾಗೂ ಫಾರ್ಚೂನರ್ ನಡುವೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಮಗುವಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು‌ ತಿಳಿದುಬಂದಿದೆ.

ಫಾರ್ಚೂನರ್ ಕಾರು ಓವರ್ ಟೇಕ್ ಮಾಡುವ ಭರದಲ್ಲಿ ಎರ್ಟಿಗಾ ಕಾರಿಗೆ ಹಿಂಬದಿಯಿಂದ ಡಿಕ್ಕಿ‌ಹೊಡೆದಿದೆ. ಎರ್ಟಿಗಾ ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಸಿಟಿ ಹೋಂಡಾ ಕಾರಿಗೆ ಅಪ್ಪಳಿಸಿದೆ. ಪರಿಣಾಮ ಮೂರು ಕಾರುಗಳಿಗೆ ಹಾನಿಯಾಗಿದ್ದು, ಕಾರಿನ ಏರ್ ಬಲೂನ್ ಗಳು ತೆರೆದುಕೊಂಡಿವೆ.

ರಸ್ತೆಯುದ್ಧಕ್ಕೂ ಕಾರುಗಳ ಆಯಿಲ್ ಚೆಲ್ಲಿದೆ.

ಹೆದ್ದಾರಿಯ ಎರಡೂ ಬದಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…