tamanvi
ಕರಾವಳಿ

ಎರಡನೇ ಪೀಳಿಗೆ ಎಂಡೋ ಸಲ್ಫಾನ್ ಪತ್ತೆ: 15 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಂಡ ಎಫೆಕ್ಟ್!!

ಈ ಸುದ್ದಿಯನ್ನು ಶೇರ್ ಮಾಡಿ

ಕರಾವಳಿ ಭಾಗಕ್ಕೆ ಮಹಾಮಾರಿಯಾಗಿರುವ ಎಂಡೋ ಸಲ್ಫಾನ್ ಇದೀಗ ಮತ್ತೊಮ್ಮೆ ಆತಂಕ ಮೂಡಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಎಂಡೋಸೆಲ್ಫಾನ್ ಬಾಧಿತರ ಸಂಖ್ಯೆ ಮತ್ತೆ ಕಾಣಿಸಿಕೊಂಡಿದೆ.

ಭಟ್ಕಳ, ಶಿರಸಿ-ಸಿದ್ದಾಪುರ, ಶಿರಾಲಿ, ಕುಮಟಾ, ಹೊನ್ನಾವರ, ಅಂಕೋಲಾದಲ್ಲಿ ಸರ್ವೆ ಮಾಡಲಾಗಿದ್ದು ಆರು ತಿಂಗಳಲ್ಲಿ 543 ಹೊಸ ಪ್ರಕರಣ ಪತ್ತೆಯಾಗಿದೆ ಅಂತಾ ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ತಜ್ಞ ವೈದ್ಯರಿಂದ ಪರೀಕ್ಷೆ ಮಾಡಿಸಲಾಗಿದ್ದು 543 ಪ್ರಕರಣಗಳ ಪೈಕಿ 228 ಸೋಂಕಿತರಲ್ಲಿ 15 ವರ್ಷದ ಒಳಗಿನ ಮಕ್ಕಳೆ ಇರೋದು ಮತ್ತಷ್ಟು ಆತಂಕಕ್ಕೆ ಮೂಡಿಸಿದೆ.’

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಪ್ರಭಾರಿ ಡಿಹೆಚ್ಒ ಶಂಕರ್ ರಾವ್, ಒಟ್ಟು 543 ದಾಖಲಾದ ಕೇಸ್ ಗಳಿದೆ. 25 ವರ್ಷಕ್ಕಿಂತ ಕಡಿಮೆ ಇರುವವರು 10 ಮಂದಿ, 25-60 ವಯಸ್ಸಿನ 118 ಮಂದಿ, 60 ವರ್ಷಕ್ಕಿಂತ ಮೇಲ್ಪಟ್ಟ ಜನರು 415 ಮಂದಿ ಇದ್ದಾರೆ ಎಂದು ತಿಳಿಸಿದ್ದಾರೆ.

ಎರಡನೇ ಪೀಳಿಗೆ ಎಂಡೋಸಲ್ಫಾನ್ ಬಂದಿರುವ ಸಾಧ್ಯತೆ ಇದ್ದು ಈ ಬಗ್ಗೆ ಸಂಶೊಧನೆ ನಡೆಸಬೇಕಾಗಿದೆ. 15 ವರ್ಷದೊಳಗಿನ ಮಕ್ಕಳಲ್ಲಿ ಎಂಡೋಸಲ್ಫಾನ್ ಎಫೆಕ್ಟ್‌ ಪತ್ತೆಯಾಗಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ಇನ್ನು ಗೇರು ಗಿಡಗಳ ಉತ್ಪನ್ನ ಹೆಚ್ಚಾಗಲಿ ಅಂತಾ ಕಳೆದ 30 ವರ್ಷದ ಹಿಂದೆ ಕ್ರಿಮಿನಾಶ ಸಿಂಪಡಣೆ ಮಾಡಿದಾಗ, ಅದರ ಸೇವನೆಯಿಂದ ಸಾವಿರಾರು ಮಕ್ಕಳು ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಅದರಿಂದ ಮೂರು ದಶಕದ ಹಿಂದೆ ಎಂಡೋಸಲ್ಫಾನ್ ಅನ್ನೋ ವಿಷಕಾರಿ ಕ್ರಿಮಿನಾಶಕ ಸಿಂಪಡಣೆ ಕರಾವಳಿ ಭಾಗದ ಸಾವಿರಾರು ಜನರ ಜೀವನವನ್ನೇ ಕಿತ್ತುಕೊಂಡಿತ್ತು. ಆದರೆ ಇದೀಗ ಮತ್ತೆ ಬಾಧಿತರ ಸಂಖ್ಯೆ ಕಂಡುಬಂದಿರೋದು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಸ್ಕೊಡ್ ವೇಸ್ ಸಂಸ್ಥೆ ನಿರ್ದೇಶಕ ವೆಂಕಟೇಶ್ ನಾಯ್ಕ್, ಕಳೆದ 10-15 ವರ್ಷಗಳಿಂದ ಮರು ಸಮೀಕ್ಷೆ ಆಗಿಲ್ಲ. ಆದ್ದರಿಂದ ಮರು ಸಮೀಕ್ಷೆ ಮಾಡುವ ಮೂಲಕ ನಿಜವಾದ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಬೇಕು ಎಂದು ಒತ್ತಾಯ ಮಾಡ್ತಿದ್ದೇವೆ. ಹೊಸದಾಗಿ 543 ಜನರು ಹೊಸ ಬಾಧಿತರು ಇದ್ದಾರೆ ಅಂತ ಆರೋಗ್ಯ ಇಲಾಖೆ ಗುರುತು ಮಾಡಿದೆ. ಇದರಲ್ಲಿ 228 ಜನರು 18 ವರ್ಷದ ಒಳಗಿನ ಮಕ್ಕಳು ಇದ್ದರೇ ಅನ್ನೋದು ಆತಂಕ ಮೂಡಿಸಿದೆ ಎಂದು ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…