tamanvi
ಕರಾವಳಿ

ಮರಿಕೆ ಸಾವಯವ ಮಳಿಗೆಯ ಡ್ರೈಫ್ರುಟ್ಸ್, ನಟ್ಸ್, ಅಡುಕಲೆಯ ಸ್ನ್ಯಾಕ್ಸ್ ಮಳಿಗೆ ಶುಭಾರಂಭ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಾವಯವ ಮಳಿಗೆ ಮರಿಕೆ ಸಂಸ್ಥೆಯ 3ನೇ ಮಳಿಗೆ ಮರಿಕೆ ಪ್ಯಾರಡೈಸ್ ಸೋಮವಾರ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಮುಂಭಾಗದ ತ್ರೀನೇತ್ರ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.

maithri

ಮಳಿಗೆಯನ್ನು ಉದ್ಘಾಟಿಸಿದ ಮಾಲಕರ ತಂದೆ ಎ.ಪಿ ಸದಾಶಿವ ಮಾತನಾಡಿ, ಸುಹಾಸ್’ಗೆ ಎಳವೆಯಿಂದಲೇ ವ್ಯಾಪಾರದ ಮೇಲೆ ಆಸಕ್ತಿ. ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದು, ಗ್ರಾಹಕರ ಆಶೀರ್ವಾದ ಸಿಕ್ಕಿದೆ. ಇದೇ ರೀತಿ ಮುಂದೆಯೂ ಸಹಕಾರ ನೀಡಲಿ ಎಂದು ಹಾರೈಸಿದರು.

ಭರಣಿಯಿಂದ ಡ್ರೈಫ್ರುಟ್ಸ್ ಹೊರತೆಗೆಯುವ ಮೂಲಕ ಸಂಸ್ಥೆಗೆ ಚಾಲನೆ ನೀಡಿದ ಮಂಗಳೂರು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷ ರಾಘವೇಂದ್ರ ಹೊಳ್ಳ ಮಾತನಾಡಿ, ಕೃಷಿ ಮತ್ತು ವ್ಯವಹಾರ ಒಟ್ಟಿಗೆ ಸಾಗುವುದು ಉತ್ತಮ. ಇದರಿಂದ ಊರಿನ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ಉತ್ಕೃಷ್ಟ ಗುಣಮಟ್ಟದ ಒಣಹಣ್ಣುಗಳ ಎಕ್ಸ್‌’ಕ್ಲೂಸಿವ್ ಮಳಿಗೆಯಾಗಿದ್ದು ಪುತ್ತೂರಿನ ಜನತೆಗೆ ಗುಣಮಟ್ಟದ ಒಣಹಣ್ಣುಗಳು ದೊರೆಯಲಿದೆ ಎಂದರು.

ಕಟ್ಟಡದ ಪಾಲುದಾರ ಗಿರಿಧರ ಹೆಗ್ಡೆ ಮಾತನಾಡಿ, ಕಟ್ಟಡದ ಉದ್ಘಾಟನೆ ಆದ ದಿನವೇ ಮರಿಕೆಯವರ ಮಳಿಗೆ ಇದೇ ಕಟ್ಟಡದಲ್ಲಿ ಶುಭಾರಂಭಗೊಂಡಿದೆ. ಒಂದೇ ವರ್ಷದಲ್ಲಿ ಒಂದೇ ಕಟ್ಟಡದಲ್ಲಿ ಮೂರನೇ ಮಳಿಗೆ ಪ್ರಾರಂಭಗೊಂಡಿದೆ. ನೈಸರ್ಗಿಕ ಮತ್ತ ಸಾವಯವ ಉತ್ಪನ್ನಗಳು ನಮ್ಮ ಕಟ್ಟಡದಲ್ಲಿದ್ದು ಮರಿಕೆ ಸಾವಯವ ಮಳಿಗೆಯು ಪುತ್ತೂರಿನ ಜನತೆಗೆ ಆರೋಗ್ಯದಾಯಕ ಸಂಸ್ಥೆಯಾಗಿದೆ ಎಂದರು.

ಸಂಸ್ಥೆಯ ಮಾಲಕ ಸುಹಾಸ್ ಮರಿಕೆ ಅತಿಥಿಗಳನ್ನು ಸ್ವಾಗತಿಸುತ್ತಾ, ಈಗಾಗಲೇ ಇರುವ ಸಾವಯವ ಉದ್ಯಮಕ್ಕೆ ಹೊಂದಿಕೆಯಾಗಿ ಅಡುಕಲೆ ಆಹಾರ ಉತ್ಪನ್ನ ಮತ್ತು ಕಲ್ಬಾವಿ ಕಂಪನಿಯ ಡ್ರೈ ಹಾಗೂ ನಟ್ಸ್ ಎಂಬ ಎರಡು ಕಂಪನಿಗಳ ಒಣಹಣ್ಣುಗಳ ಎಕ್ಸ್‌’ಕ್ಲೂಸಿವ್ ಮಳಿಗೆಯ ಮೂಲಕ ಪುತ್ತೂರಿನ ಜನತೆಗೆ ಗುಣಮಟ್ಟದ ಒಣಹಣ್ಣುಗಳನ್ನು ನೀಡಲಾಗುತ್ತಿದೆ ಎಂದರು.

ವರಲಕ್ಷ್ಮೀ ಪ್ರಾರ್ಥಿಸಿದರು. ಗ್ರಾಮಜನ್ಯ ಸಂಸ್ಥೆಯ ನಿರ್ದೇಶಕ ನಿರಂಜನ ಪೋಳ್ಯ ಕಾರ್ಯಕ್ರಮ ನಿರೂಪಿಸಿ, ಮಾನಸ ಸುಹಾಸ್ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…

ಪುತ್ತೂರಿಗೆ ತಡವಾಗಿ ಆಗಮಿಸುತ್ತಿರುವ ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲು: ಕ್ರಮ ಕೈಗೊಳ್ಳಲು ಸಂಸದರಿಗೆ ಆಗ್ರಹ!!

ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು…

ಕಲ್ಲುಗುಂಡಿಯ ಫಾತಿಮತ್ ನಿಶಾನ ಸಾವು ಪ್ರಕರಣ: ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಪುತ್ತೂರು ಕಾಂಗ್ರೆಸ್ ನಿಯೋಗ!

ಕಲ್ಲುಗುಂಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಫಾತಿಮತ್ ನಿಶಾನ ಅವರ ತಾಯಿ ಮನೆಯಾದ ಕುಂಬ್ರದ…