tamanvi
ಕರಾವಳಿ

ಯಕ್ಷಗಾನದ ಒಳಗೆ ಸಲಿಂಗಕಾಮ ಬೆಳೆಯುತ್ತಿದೆ: ಪುರುಷೋತ್ತಮ ಬಿಳಿಮಲೆ | ಆಕ್ರೋಶದ ಬಳಿಕ ಕ್ಷಮೆ ಯಾಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಯಕ್ಷಗಾನದ ಒಳಗೆ ಸಲಿಂಗ ಕಾಮ ಬೆಳೆಯುತ್ತದೆ, ಸ್ತ್ರೀವೇಶದ ಕಲಾವಿದರು ಅದನ್ನು ನಿರಾಕರಿಸಲಾರರು ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದ್ದು, ಯಕ್ಷಗಾನ ಕಲಾವಿದರು ಸೇರಿ ಅಕಾಡೆಮಿ ಸದಸ್ಯರು ಹಾಗೂ ಅಧ್ಯಕ್ಷರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಮೊದಲು ಮಾಡಿದ್ದ ಹೇಳಿಕೆಯಂತೆ 6–8 ತಿಂಗಳು ಹೊರಗಡೆ ಜೀವನ ನಡೆಸುವ ಕಲಾವಿದರಿಗೆ ಮೋಹದ ಅಗತ್ಯ ಬರುವುದು ಸಹಜ. ಅನೇಕರು ಇದನ್ನು ಅನುಭವಿಸುತ್ತಾರೆ ಎಂದು ಹೇಳಿದ್ದು, ಯಕ್ಷಗಾನ ಕಲಾವಿದರ ವೈಯಕ್ತಿಕ ಬದುಕಿನ ಬಗ್ಗೆ ತಪ್ಪು ಕಲ್ಪನೆ ಹರಿ ಬಿಟ್ಟುಕೊಂಡಿದ್ದಾರೆ.

ಕ್ಷಮೆ ಕೋರಿದ ಬಿಳಿಮಲೆ:

ಯಕ್ಷಗಾನ ಕಲಾವಿದರಿಗೆ ಅವಮಾನ ಮಾಡುವ ಉದ್ದೇಶ ನನ್ನದಲ್ಲ. ಯಕ್ಷಗಾನ ಹಿಂದೂ ಧರ್ಮದ್ದಲ್ಲ ಎಂದು ಹೇಳಿದ್ದೇನೆ. ಅದು ಕಲೆಯೊಂದರ ರೂಪ. ಕಲಾವಿದರು ಅನುಭವಿಸುವ ನೋವುಗಳನ್ನು ಹೇಳಿದ್ದೇನೆ ಹೊರತು ಅವರ ಮಾನಹಾನಿ ಮಾಡುವ ಉದ್ದೇಶ ನನ್ನದಲ್ಲ. ಆದರೇ ಕಲಾವಿದರಿಗೆ ನೋವಾದರೆ ಕ್ಷಮೆ ಕೇಳುತ್ತೇನೆ. ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…