tamanvi
ಅಪರಾಧ

ಕೆಯ್ಯೂರು ನಿವಾಸಿ ಬಾಂಬೆಯಲ್ಲಿ ಆತ್ಮಹತ್ಯೆ..!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು:ಕೆಯ್ಯೂರು ಗ್ರಾಮದ ನಿವಾಸಿಯೊಬ್ಬರು ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.21 ರಂದು ನಡೆದಿದೆ.

ಕೆಯ್ಯೂರು ಪಂಚಾಯತ್ ಕಛೇರಿ ಬಳಿಯ ನಿವಾಸಿ ದಿ.ರಘುನಾಥ ಪೂಜಾರಿ ಎಂಬವರ ಪುತ್ರ ಕಾರ್ತಿಕ್ (27.)ರವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

ಕಾರ್ತಿಕ್ ರವರು ಬಾಂಬೆಯ ಉರ್ಲ ಎಂಬಲ್ಲಿ ಕಳೆದ ವರ್ಷಗಳಿಂದ ಹೊಟೇಲ್ ಉದ್ಯೋಗಿಯಾಗಿದ್ದು ಅಲ್ಲೇ ವಾಸವಿದ್ದರು. ಮೇ 21 ರಂದು ತನ್ನ ರೂಮ್‌ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಮೇ 22 ರಂದು ಕೆಯ್ಯೂರಿಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮೃತರು ತಾಯಿ ಗಿರಿಜಾ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 118