ಸಿನೇಮಾ

‘ಸು ಫ್ರಮ್ ಸೋ’ ಮರಾಠಿಗೆ ಲಗ್ಗೆ!!

GL

ಈ ಸುದ್ದಿಯನ್ನು ಶೇರ್ ಮಾಡಿ

‘ಸು ಫ್ರಮ್ ಸೋ’ ಸಿನಿಮಾ 2025ರ ಯಶಸ್ವಿ ಸಿನಿಮಾಗಳಲ್ಲಿ ಒಂದು. ಕೇವಲ 5 ಕೋಟಿ ರೂಪಾಯಿ ಬಜೆಟ್​​ನಲ್ಲಿ ತಯಾರಾದ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿತು. ಈ ಚಿತ್ರ ಸದ್ದಿಲ್ಲದೆ ಮರಾಠಿಗೆ ರಿಮೇಕ್ ಆಗಿದೆ. ‘ತುಂಬಾಡ್ಚಿ ಮಂಜುಳಾ’ ಹೆಸರಿನಲ್ಲಿ ಮರಾಠಿ ಭಾಷೆಯಲ್ಲಿ ತಯಾರಾದ, ಈ ಚಿತ್ರಕ್ಕೆ ದೊಡ್ಡ ಹಿಂದಿ ಸಿನಿಮಾದ ಕನೆಕ್ಷನ್ ಕೊಡಲಾಗಿದೆ. ಈ ಟ್ರೇಲರ್​​ಗೆ ಮರಾಠಿ ಭಾಷೆಯಲ್ಲಿ ಮೆಚ್ಚುಗೆ ಸಿಗುತ್ತಿದೆ.

maithri

ಕನ್ನಡದಲ್ಲಿ ‘ಸುಲೋಚನ ಫ್ರಮ್ ಸೋಮೇಶ್ವರ’ ಎಂಬ ಟೈಟಲ್​​ನೊಂದಿಗೆ ಸಿನಿಮಾ ರಿಲೀಸ್ ಆಗಿತ್ತು. ಟೈಟಲ್ ಉದ್ದ ಆಗುತ್ತದೆ ಎಂಬ ಕಾರಣಕ್ಕೆ, ‘ಸು ಫ್ರಮ್ ಸೋ’ ಎಂದು ಇಡಲಾಗಿತ್ತು. ಇದನ್ನು ಮರಾಠಿಯಲ್ಲಿ ‘ತುಂಬಾಡ್ಚಿ ಮಂಜುಳಾ’ ಎಂದು ಇಡಲಾಗಿದೆ. ಅಂದರೆ ತುಂಬಾಡ್​ನ ಮಂಜುಳ ಎಂದರ್ಥ. ಈ ಟೈಟಲ್ ಇಡೋದಕ್ಕೂ ಒಂದು ಕಾರಣ ಇದೆ ಎನ್ನಲಾಗಿದೆ.

‘ತುಂಬಾಡ್’ ಹೆಸರಿನ ಸಿನಿಮಾ ಬಾಲಿವುಡ್​​ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ತುಂಬಾಡ್ ಊರಿಗೆ ಕಾಲ್ಪನಿಕ ಕಥೆಯ ಹಿನ್ನೆಲೆ ಸೇರಿಸಲಾಗಿತ್ತು . ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಕಾರಣದಿಂದಲೇ ತುಂಬಾಡ್ ಹೆಸರನ್ನು ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಾ ಇದೆ.

ಇನ್ನು, ‘ತುಂಬಾಡ್ಚಿ ಮಂಜುಳಾ’ ಚಿತ್ರ ಬಹುತೇಕ ‘ಸು ಫ್ರಮ್ ಸೋ’ ಮಾದರಿಯಲ್ಲೇ ಇದೆ. ಹಳ್ಳಿ ಕಥೆ, ಕಾಮಿಡಿ ಮೊದಲಾದ ವಿಷಯಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ‘ಸು ಫ್ರಮ್ ಸೋ’ ಟ್ರೇಲರ್​​ನಲ್ಲಿ ಗುರೂಜಿಯ ದರ್ಶನ ಆಗಿರಲಿಲ್ಲ, ಆದರೆ, ಮರಾಠಿ ಟ್ರೇಲರ್​​ನಲ್ಲಿ ಇದನ್ನು ತೋರಿಸಲಾಗಿದೆ.

ಮರಾಠಿಯಲ್ಲಿ ಜಿತೇಂದ್ರ ಜೋಶಿ, ಓಂ ಭುಟ್ಕರ್, ಮಾರ್ಕಂಡ್ ಅನಸ್ಪುರೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ವಿವಿಧ್ ಕೊರಗಾಂವ್ಕರ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಒಂದು ಸೇತುವೆಯ ಕಥೆಗೆ `ಜೈ’ | ತುಳುವಿನ ಘನತೆ, ಗಂಭೀರತೆಗೆ ಕಲಶ ಪ್ರಾಯ ಹಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಅಭಿನಯ

`ಕಾರ್ ಪತ್ತುನವು ತುಳು ನಾಡ್’ದ ಸಂಸ್ಕೃತಿ, ಕಾರ್ ವೊಯ್ಪುನವ್ವತ್’ (ಕಾಲು ಹಿಡಿಯುವುದು ತುಳು…

ಧರ್ಮದೈವಕ್ಕಿಂತ ವಿಭಿನ್ನ ಕಥಾಹಂದರದ ಧರ್ಮಚಾವಡಿ | ನಾಳೆ (ಜುಲೈ 11) ಉಭಯ ಜಿಲ್ಲೆಗಳಲ್ಲಿ ಬಿಡುಗಡೆ: ನಿತಿನ್ ರೈ ಕುಕ್ಕುವಳ್ಳಿ

ಪುತ್ತೂರು: ತುಳು ಸಿನಿರಂಗದಲ್ಲಿ ಸದ್ದು ಮಾಡಿದ ಧರ್ಮ ದೈವ ಸಿನಿಮಾದ ಬಳಿಕ ಇದೀಗ ಧರ್ಮ ಚಾವಡಿ…