tamanvi
ಸಿನೇಮಾ

ಮೇ 8ರಂದು ತೆರೆ ಕಾಣಲಿದೆ ಮಂಗಮಾಯ ಸಿನಿಮಾ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ಬ್ರದರ್ಸ್ ಎಂಟರ್ಟೇನ್ಮಂಟ್ ನಿರ್ಮಾಣದ ಕನ್ನಡ ಚಲನಚಿತ್ರ ‘ಮಂಗಮಾಯ’ ಮೇ 8ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.

maithri

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಸಿನಿಮಾದ ಕಾರ್ಯಕಾರಿ ನಿರ್ಮಾಪಕರು, ವ್ಯವಸ್ಥಾಪಕರು ಆಗಿರುವ ಪ್ರಸನ್ನ ಪುತ್ತೂರು ಮತ್ತು ಅವರ ಸಹೋದರ ಕಲಾ ನಿರ್ದೇಶಕ ಪ್ರಸಾದ್ ಪುತ್ತೂರು ಮಾಹಿತಿ ನೀಡಿದರು.

ಸಣ್ಣ ವೆಚ್ಚದ, ನೈಜ ಘಟನೆ ಆಧಾರಿತ, ಒಂದೇ ದಿನ ನಡೆಯವ ಕಥಾ ಹಂದರವಾಗಿದ್ದು, ಯಾವುದೇ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ, ಒಂದೇ ಲೊಕೇಷನ್‌ ಮತ್ತು ಒಂದೇ ಶೆಡ್ಯೂಲ್‌ನಲ್ಲಿ ಶೂಟ್ ಮಾಡಲ್ಪಟ್ಟ ಚಲನಚಿತ್ರ ಇದಾಗಿದೆ. ಹಲವು ಕರಾವಳಿಯ ಕಲಾವಿದರುಗಳ, ತಂತ್ರಜ್ಞರ ಸಮಾಗಮದಲ್ಲಿ ಈ ಚಿತ್ರವು ಕರಾವಳಿ ಕನ್ನಡದ ಭಾಷ ಸೊಗಡು ಇರುವ ಚಿತ್ರವಾಗಿದೆ ಎಂದವರು ಹೇಳಿದರು.

ಪ್ರಸಾದ್ ಅವರು ಮೂಲತಃ ಮರೀಲ್‌ನವರಾಗಿದ್ದು, ಮೈಸೂರಿನಲ್ಲಿ ಕಲಾ ಪದವಿ ಮುಗಿಸಿ, ಸಿನಿಮಾ ಕ್ಷೇತ್ರದಲ್ಲಿ ವೃತ್ತಿ ಆರಂಭಿಸುವ ಆಸಕ್ತಿಯೊಂದಿಗೆ ಕಾಶಿನಾಥ್ ಅವರ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸಿ ತದನಂತರ ಹತ್ತಾರು ಸಿನಿಮಾಗಳಲ್ಲಿ ನಟನೆ, ವಿಡಿಯೋಗ್ರಫಿ, ಸ್ಟೀಫ್ಟ್, ಆರ್ಟ್, ನಿರ್ದೇಶಕರಾಗಿ ದುಡಿದಿದ್ದಾರೆ. ಇದು ಅವರ ನಿದೇಶನದ ಚೊಚ್ಚಲ ಚಿತ್ರವಾಗಿದೆ.

ಅರಸಿ ಬೇಸತ್ತ ನಾಯಕ ಮತ್ತು ಕೊನೆಗೆ ಲಾಡ್ಜ್‌ ವೊಂದರಲ್ಲಿ ರೂಮ್‌ಬಾಯ್ ಆಗಿ ಕೆಲಸ ನಿರ್ವಹಿಸುವ ಮೂಲಕ ಒಟ್ಟು ಚಿತ್ರದಲ್ಲಿ ಲಾಡ್ಜ್‌ನ ಚಿತ್ರಣವೇ ಹೆಚ್ಚು ಕಾಣಸಿಗುವ ಮೂಲಕ ಗ್ರಿಲ್ಲರ್ ಮತ್ತು ಸಸ್ಪೆನ್ಸ್ ಇರುತ್ತದೆ. ಮೈಸೂರು ವಿದ್ಯಾರಣ್ಯಪುರದ ಲಾಡ್ಜ್‌ನಲ್ಲಿ ಶೂಟಿಂಗ್ ಮಾಡಲಾಗಿದ್ದು, ಕೇವಲ 43 ದಿನದಲ್ಲಿ ಶೂಟಿಂಗ್ ನಡೆದಿದೆ ಎಂದು ಚಿತ್ರ ತಂಡ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ಮಾರ್ಕೆಟಿಂಗ್ ಮತ್ತು ಸೋಶಿಯಲ್ ಫಿಲ್ಕ್ ಇಂಡಿಯಾ ಸಂಸ್ಥೆಯ ಹರ್ಷ ಕಟ್ಟಿಮನಿ, ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ನಟ ಅಮಿರ್ ಖಾನ್’ಗೆ ಬೆದರಿಕೆ ಹಾಕಿದ ಲಾರೆನ್ಸ್ ಬಿಷ್ಣೋಯ್ ತಂಡ!! ಲವ್ ಜಿಹಾದ್ ಪ್ರೋತ್ಸಾಹಕ್ಕೆ ತಕ್ಕ ಶಾಸ್ತಿ ಎಂಬ ಎಚ್ಚರಿಕೆ!

ಮುಂಬೈ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ನಂತರ ಇದೀಗ ಬಾಲಿವುಡ್ ನಟ ಆಮೀರ್ ಖಾನ್…

ಧರ್ಮದೈವಕ್ಕಿಂತ ವಿಭಿನ್ನ ಕಥಾಹಂದರದ ಧರ್ಮಚಾವಡಿ | ನಾಳೆ (ಜುಲೈ 11) ಉಭಯ ಜಿಲ್ಲೆಗಳಲ್ಲಿ ಬಿಡುಗಡೆ: ನಿತಿನ್ ರೈ ಕುಕ್ಕುವಳ್ಳಿ

ಪುತ್ತೂರು: ತುಳು ಸಿನಿರಂಗದಲ್ಲಿ ಸದ್ದು ಮಾಡಿದ ಧರ್ಮ ದೈವ ಸಿನಿಮಾದ ಬಳಿಕ ಇದೀಗ ಧರ್ಮ ಚಾವಡಿ…

ಒಂದು ಸೇತುವೆಯ ಕಥೆಗೆ `ಜೈ’ | ತುಳುವಿನ ಘನತೆ, ಗಂಭೀರತೆಗೆ ಕಲಶ ಪ್ರಾಯ ಹಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಅಭಿನಯ

`ಕಾರ್ ಪತ್ತುನವು ತುಳು ನಾಡ್’ದ ಸಂಸ್ಕೃತಿ, ಕಾರ್ ವೊಯ್ಪುನವ್ವತ್’ (ಕಾಲು ಹಿಡಿಯುವುದು ತುಳು…

ಮಲಯಾಳಂ – ತುಳುವಿನ ಸ್ಪರ್ಶವಿರುವ ಕೋಸ್ಟಲ್ ವುಡ್’ನ ‘ಮೀರಾ’ | ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ ಎಲ್ಲರೂ ಹೊಸಬರೇ!!

ತುಳು ರಂಗ ಭೂಮಿಯ ಅಪ್ಪ - ತುಳು ಸಿನಿಮಾ ರಂಗದ ಮಗಳು. ಇವರೆರಡರ ನಡುವಿನ ಬಾಂಧವ್ಯ, ರಂಗಭೂಮಿ…