tamanvi
ಸಿನೇಮಾ

ರಶ್ಮಿಕಾ ಕೈ ಹಿಡಿದ ‘ಸು ಫ್ರಮ್ ಸೋ’ ಖ್ಯಾತಿಯ ಜೆಪಿ ತುಮಿನಾಡು!!

ಈ ಸುದ್ದಿಯನ್ನು ಶೇರ್ ಮಾಡಿ

‘ಸು ಫ್ರಮ್ ಸೋ’ ಸಿನಿಮಾ ನಿರ್ದೇಶನ ಮಾಡಿ ಅಪಾರ ಜನಪ್ರಿಯತೆ ಪಡೆದ ನಿರ್ದೇಶಕ ಜೆಪಿ ತುಮಿನಾಡು ಅವರು ರಶ್ಮಿಕಾ ಅವರ ಕೈ ಹಿಡಿದಿದ್ದಾರೆ.

ಹೊಸ ಬದುಕಿಗೆ ಕಾಲಿಟ್ಟಿರುವ ಜೆಪಿ ತುಮಿನಾಡು ಅವರು ವಿವಾಹವಾಗಿದ್ದಾರೆ. ಅವರ ಪತ್ನಿಯ ಹೆಸರು ರಶ್ಮಿಕಾ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ರಶ್ಮಿಕಾ ಹೆಸರು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗುತ್ತಿದೆ.

ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ವಿವಾಹ ಮಂಟಪ ಸಾಕಷ್ಟು ಅದ್ದೂರಿಯಾಗಿ ಕಾಣಿಸಿದೆ. ಜೆಪಿ ಹೊಸ ಬಾಳಿಗೆ ಎಲ್ಲರ ಹಾರೈಕೆ ಸಿಕ್ಕಿದೆ.

ಜೆಪಿ ತುಮಿನಾಡು ಅವರು ಕರಾವಳಿ ಪ್ರತಿಭೆ. ಸಿನಿಮಾ ರಂಗಕ್ಕೆ ಕಾಲಿಡುವ ಮೊದಲು 14 ವರ್ಷ ಅವರು ರಂಗಭೂಮಿಯಲ್ಲಿ ಶ್ರಮಿಸಿದರು. ಅನೇಕ ನಾಟಕಗಳ ರಚನೆ, ನಿರ್ದೇಶನ ಹಾಗೂ ನಟನೆ ಮಾಡಿದರು. ಜೆಪಿ ಅವರು ಹೆಚ್ಚಾಗಿ ಹಾಸ್ಯ ನಾಟಕಗಳನ್ನೇ ಬರೆಯುತ್ತಿದ್ದರು.

‘ಸು ಫ್ರಮ್ ಸೋ’ ಸಿನಿಮಾ ಕೂಡ ಹಾಸ್ಯದ ಶೈಲಿಯಲ್ಲೇ ಮೂಡಿ ಬಂತು. ಈ ಕಾರಣಕ್ಕೆ ಸಿನಿಮಾ 100 ಕೋಟಿ ರೂಪಾಯಿ ಗಳಿಸಿತು. ರಾಜ್ ಬಿ ಶೆಟ್ಟಿ ಅವರು ಸಿನಿಮಾದಲ್ಲಿ ಗುರೂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ನಟ ಅಮಿರ್ ಖಾನ್’ಗೆ ಬೆದರಿಕೆ ಹಾಕಿದ ಲಾರೆನ್ಸ್ ಬಿಷ್ಣೋಯ್ ತಂಡ!! ಲವ್ ಜಿಹಾದ್ ಪ್ರೋತ್ಸಾಹಕ್ಕೆ ತಕ್ಕ ಶಾಸ್ತಿ ಎಂಬ ಎಚ್ಚರಿಕೆ!

ಮುಂಬೈ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ನಂತರ ಇದೀಗ ಬಾಲಿವುಡ್ ನಟ ಆಮೀರ್ ಖಾನ್…