tamanvi
ಅಪರಾಧ

ಹೆರಿಗೆ ಬಳಿಕ ಮೃತಪಟ್ಟ ಗರ್ಭಿಣಿ ಪ್ರಕರಣ: ಪರಿಹಾರ ನೀಡಲು ಆದೇಶಿಸಿದ ಜಿಲ್ಲಾ ಗ್ರಾಹಕರ ನ್ಯಾಯಾಲಯ | ಮರುವಿಚಾರಣೆ ವೇಳೆ ವೈದ್ಯಕೀಯ ನಿರ್ಲಕ್ಷ್ಯ, ಸೇವಾ ನ್ಯೂನ್ಯತೆ ಬೆಳಕಿಗೆ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: 2011ರ ಮಾರ್ಚ್ 30ರಂದು ಹೆರಿಗೆ ನಂತರ ಗರ್ಭಿಣಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ದ.ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದ್ದು, ಪರಿಹಾರ ನೀಡುವಂತೆ ಆದೇಶಿಸಿದೆ.

maithri

ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೇವಾ ನೂನ್ಯತೆಯನ್ನು ಉಲ್ಲೇಖಿಸಿ ಆದೇಶ ಹೊರಡಿಸಲಾಗಿದೆ.

ಮೃತರಾದವರ ಪತಿ ದೂರು ನೀಡಿದ್ದು, ವೈದ್ಯರು ಮತ್ತು ಆಸ್ಪತ್ರೆ 10 ಲಕ್ಷ ರೂ. ಪರಿಹಾರ ನೀಡಬೇಕು. ವ್ಯಾಜ್ಯ ವೆಚ್ಚವಾಗಿ 30,000 ರೂ: ನೀಡಬೇಕು. ಜೊತೆಗೆ ಪ್ರಕರಣದ ಆರಂಭದಿಂದ ಶೇ. 6 ಬಡ್ಡಿಯನ್ನು ನೀಡಬೇಕು. 45 ದಿನದೊಳಗೆ ಪರಿಹಾರ ನೀಡದಿದ್ದರೆ ಶೇ. 8 ಬಡ್ಡಿಯಂತೆ ಪರಿಹಾರ ನೀಡಬೇಕು. 45 ದಿವಸಗಳೊಳಗೆ ಪರಿಹಾರ ನೀಡದಿದ್ದರೆ ವಸೂಲಾತಿಗಾಗಿ ಸೂಕ್ತ ಕ್ರಿಮಿನಲ್ ಅಥವಾ ಸಿವಿಲ್ ವ್ಯವಹರಣೆಯನ್ನು ಆರಂಭಿಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

2014ರಂದು ದಾಖಲಾದ ಪ್ರಕರಣವನ್ನು ಜಿಲ್ಲಾ ಗ್ರಾಹಕರ ನ್ಯಾಯಾಲಯ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಮೃತರ ಪತಿ ರಾಜ್ಯ ಗ್ರಾಹಕ  ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದು, ರಾಜ್ಯ ಗ್ರಾಹಕ ನ್ಯಾಯಾಲಯ 2022ರ ಮಾರ್ಚ್ 28ರಂದು ಪ್ರಕರಣವನ್ನು ಮುರುವಿಚಾರಣೆ ನಡೆಸಬೇಕೆಂದು ಆದೇಶ ನೀಡಿತ್ತು.

2022ರ ನಂತರ ಈ ಪ್ರಕರಣದ ಮರುವಿಚಾರಣೆ ನಡೆಸಿದ ದ.ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯ, ಇದೀಗ ತೀರ್ಪು ನೀಡಿದೆ.

ಗರ್ಭಿಣಿಯನ್ನು ಹೆರಿಗೆ ಕೋಣೆಗೆ ಕಳುಹಿಸುವ ಮೊದಲು ಎಲ್ಲಾ ವ್ಯವಸ್ಥೆಗಳನ್ನು ಹೊಂದಿರಬೇಕಾದದ್ದು ವೈದ್ಯೆಯ ಕರ್ತವ್ಯ. ಹೆರಿಗೆ ಕೊಠಡಿಯಲ್ಲಿ ರಕ್ತ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಹೆರಿಗೆ ಪೂರ್ವದಲ್ಲೇ ಹೊಂದಿರಬೇಕು. ಆದರೆ ಈ ಪ್ರಕರಣದಲ್ಲಿ ಹೆರಿಗೆ ನಂತರ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ವೈದ್ಯೆ ಸಂಪೂರ್ಣ ವಿಫಲವಾಗಿದ್ದಾರೆ. ಈ ಮೂಲಕ ಜೀವ ಉಳಿಸುವ ಬಹು ಮುಖ್ಯ ತುರ್ತು ಸಮಯದಲ್ಲಿ ಸೂಕ್ತ ವ್ಯವಸ್ಥೆಯ ಕೊರತೆ ಕಂಡುಬರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಒಬ್ಬ ಜವಾಬ್ಧರಿಯುತ ವೈದ್ಯ ತುರ್ತು ಸಮಯದಲ್ಲಿ ರಕ್ತ, ಅಮ್ಲಜನಕದಂತಹ ಅವಶ್ಯಕತೆಗಳ ವಿಷಯದಲ್ಲಿ ಹೊಂದಬೇಕಾದ ಮುಂಜಾಗರೂಕತೆ ಈ ಪ್ರಕರಣದ ವಿಫಲವಾಗಿದೆ. ಸದ್ರಿ ರೋಗಿಗೆ ಸಂಬಂಧಿಸಿದ ಕೇಸ್ ಶೀಟ್ ಎಲ್ಲ ವ್ಯವಸ್ಥೆ ಸಮರ್ಪಕವಾಗಿರುವುದನ್ನು ತೋರಿಸುವುದರಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅದೇ ರೀತಿ ಮಂಗಳೂರಿಗೆ ಶಿಫ್ಟ್ ಮಾಡುವಾಗ ಬರವಣೆಗೆ ಅಥವಾ ಮೌಖಿಕ ಒಪ್ಪಿಗೆ ಪಡೆಯದಿರುವುದು ಕೂಡ ಈ ಪ್ರಕರಣದಲ್ಲಿ  ಕಂಡುಬರುತ್ತದೆ. ಅದೇ ರೀತಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಕಾಯಿದೆಯಂತೆ 72 ಗಂಟೆಯೊಳಗೆ ಕೇಸ್‌ಶೀಟ್ ಡಿಸ್ಚಾರ್ಜ್ ಸಮ್ಮರಿಗಳನ್ನು ದೂರುದಾರರಿಗೆ ಆಸ್ಪತ್ರೆ ಒದಗಿಸದೆ ವೃತ್ತಿನಿಯಮಗಳನ್ನು ಉಲ್ಲಂಘಿಸಿದೆ ಎಂದು ತೀರ್ಪುನೀಡಿದೆ.

ದೂರುದಾರರ ಪರವಾಗಿ ಎಚ್ & ಡಿ ಲೀಗಲ್‌ನ ಹರೀಶ್ ಕುಮಾರ್ ಬಳಕ್ಕ ಹಾಗೂ ದೀಪಕ್ ಬೊಳುವಾರು, ಭುವನೇಶ್ವರಿ ಎಂ, ಪಿ ವಿಷೀಕಾ ವಾದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ!! ವೃದ್ಧರ ಕುತ್ತಿಗೆಯಿಂದ ಚಿನ್ನದ ಸರ, ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನ ಕಳ್ಳತನ!!

ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ…

1 of 117