tamanvi
ಟ್ರೆಂಡಿಂಗ್ ನ್ಯೂಸ್

ಒಬ್ಬನಿಂದಲೂ ಬದಲಾವಣೆ ಸಾಧ್ಯ: ರೋಟರಿ ಗವರ್ನರ್ ಪಿ.ಕೆ. ರಾಮಕೃಷ್ಣ | ರೋಟರಿ ಯುವ ಪುತ್ತೂರು ಕ್ಲಬ್’ಗೆ ರೋಟರಿ ಗವರ್ನರ್ ಅಧಿಕೃತ ಭೇಟಿ ಸಭಾ ಕಾರ್ಯಕ್ರಮ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಒಬ್ಬ ವ್ಯಕ್ತಿಯಿಂದಲೂ ಬದಲಾವಣೆ ಸಾಧ್ಯ. ಆ ಬದಲಾವಣೆ ನಮ್ಮಿಂದಲೇ ಸಾಧ್ಯವಾಗಲಿ ಎಂದು ರೋಟರಿ ಗವರ್ನರ್ ಪಿ.ಕೆ. ರಾಮಕೃಷ್ಣ ಹೇಳಿದರು.

maithri

ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ರೋಟರಿ ಗವರ್ನರ್ ಅವರ ಅಧಿಕೃತ ಭೇಟಿ ಕಾರ್ಯಕ್ರಮದ ಅಂಗವಾಗಿ ಬುಧವಾರ ಸಂಜೆ ಮನೀಷಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಕಾಣುವ ಅನೇಕ ಬದಲಾವಣೆಗಳ ಮೂಲವನ್ನು ನೋಡಿದರೆ, ಅದು ಒಬ್ಬ ವ್ಯಕ್ತಿಯಿಂದಲೇ ಆರಂಭವಾಗಿರುತ್ತದೆ. ರೋಟರಿ ಯುವ ಅಧ್ಯಕ್ಷರಾದ ಕುಸುಮ್’ರಾಜ್ ಅವರು ಒಂದು ಲಕ್ಷ ರೂ.ವನ್ನು ಸರಕಾರಿ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಇಂತಹ ಹಲವು ಕಾರ್ಯಗಳು ನಮ್ಮಿಂದಲೇ ಆರಂಭವಾಗಲಿ ಎಂದರು.

ನೀವು ರೋಟರಿಗೆ ನೀಡುವ ಹಣದ ಮೂರರಷ್ಟು ಅನುದಾನ ಸಮಾಜಕ್ಕೆ ಸಿಗುತ್ತದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಾವು ರೋಟರಿ ಕ್ಲಬ್ಬಿಗೆ ಸೇರಿಕೊಳ್ಳಬೇಕು. ಇಂದು ಅಮೆರಿಕನ್ನರೇ ರೋಟರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾವು ಕಡಿಮೆ ಸಂಖ್ಯೆಯಲ್ಲಿದ್ದೇವೆ ಎಂದರು.

ಝೋನಲ್ ಲೆಫ್ಟಿನೆಂಟ್ ಭರತ್ ಪೈ ಮಾತನಾಡಿ, ರೋಟರಿ ಯುವದಿಂದ ಕೊಡುಗೆಯಾಗಿ ನೀಡಿದ ರೋಟರಿ ಕ್ಲೋತ್ ಬ್ಯಾಂಕನ್ನು ಶ್ಲಾಘಿಸಿದರು.

ರೋಟರಿ ಬುಲೆಟಿನ್ ಅನ್ನು ಅನಾವರಣಗೊಳಿಸಿ ಮಾತನಾಡಿದ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ಸಮಾರಂಭಕ್ಕೆ ಶುಭಹಾರೈಸಿದರು.

rotary-yuva

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುದ್ದಿ ಬಿಡುಗಡೆ ಸಂಪಾದಕ ಡಾ. ಯು.ಪಿ. ಶಿವಾನಂದ್, ರೋಟರಿ ಸಮಾಜದಲ್ಲಿ ಬಹಳಷ್ಟು ಕೆಲಸ ನಿರ್ವಹಿಸುತ್ತಾ ಇದೆ. ಮರೆಯಾದ ಸಾಧಕರನ್ನು ಗುರುತಿಸಲು ನಾವು ಮುಂದಾಗಿದ್ದೇವೆ. ಅದಕ್ಕೆ ರೋಟರಿಯ ಸಹಕಾರ ಬೇಕು ಎಂದರು. ಪುತ್ತೂರು ಉಮೇಶ್ ನಾಯಕ್, ಪಶುಪತಿ ಶರ್ಮಾ ನಿರ್ವಹಿಸಿದರು.

rotary-yuva

ಡಾ. ರಾಜೇಶ್ ಬೆಜ್ಜಂಗಳ ಅವರನ್ನು ಸನ್ಮಾನಿಸಲಾಯಿತು.

ಸಂಗ್ರಹವಾದ 625 ಡಾಲರನ್ನು ಅನೂಪ್ ಅವರು ಗವರ್ನರ್ ಗೆ ಹಸ್ತಾಂತರಿಸಿದರು.

ಫೆ. 22ರಂದು ನಡೆಯುವ ರೋಟಾ ಯುವ ಟ್ರೆಜರ್ ಹಂಟ್ ಇದರ ಲೋಗೋವನ್ನು ಅನಾವರಣ ಮಾಡಲಾಯಿತು. ಪಶುಪತಿ ಶರ್ಮಾ, ಡಾ. ಹರ್ಷ ಕುಮಾರ್ ರೈ ಮಾಡಾವು ಕಾರ್ಯಕ್ರಮ ನಿರೂಪಿಸಿದರು.

ಸೋನಾ, ನರಸಿಂಹ ಪೈ, ಶಬ್ದಾ ನಾಯಕ್, ಶುಭಾ, ಅಶ್ವಿನಿಕೃಷ್ಣ ಮುಳಿಯ, ಶ್ರೇಯಸ್ವಿ ಅನೂಪ್, ಅಂಬಿಕಾ ಶೆಟ್ಟಿ, ಅಭೀಷ್ ಕೆ. ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಚನಾ ಜಯರಾಂ ನಿರ್ವಹಿಸಿದರು.

ಇದೇ ಸಂದರ್ಭ ರಾಮಕೃಷ್ಣ ಸೇವಾಶ್ರಮಕ್ಕೆ ಸಹಾಯಧನ ನೀಡಲಾಯಿತು. ಬಲ್ನಾಡು ಉ.ಹಿ.ಪ್ರಾ. ಶಾಲೆಗೆ ನೀಡಿದ 1 ಲಕ್ಷ ರೂ. ದೇಣಿಗೆಯನ್ನು ಇದೇ ಸಂದರ್ಭ ಹಸ್ತಾಂತರಿಸಲಾಯಿತು. ಗಾಂಧಾರಿ ವಿದ್ಯೆಯ ಮೂಲಕ ಮರಳು ಶಿಲ್ಪ ರಚಿಸಿ ಏಷ್ಯಾನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಶಮಿಕಾ ಅವರನ್ನು ಸನ್ಮಾನಿಸಿದ್ದು, ಅವರ ಪರಿಚಯವನ್ನು ಸಭೆಯ ಮುಂದಿಡಲಾಯಿತು.

ವೃಹಾ ಅನಿಲ್ ಮುಂಡೋಡಿ ಪ್ರಾರ್ಥಿಸಿದರು. ಸ್ಥಾಪಕಾಧ್ಯಕ್ಷ ರತ್ನಾಕರ್ ರೈ, ಪೂರ್ವಾಧ್ಯಕ್ಷರುಗಳಾದ ಚೇತನ್ ಪ್ರಕಾಶ್, ಪುತ್ತೂರು ಉಮೇಶ್ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಅಬೀಷ್ ವಂದಿಸಿದರು. ನರಸಿಂಹ ಪೈ, ಶ್ರದ್ಧಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಆಟಮ್’ಬರ್ಗ್ ಫ್ಯಾನ್ ಮಾರಾಟದಲ್ಲಿ ದಾಖಲೆ: ಮೈತ್ರಿ ಎಲೆಕ್ಟ್ರಿಕ್ ಕಂಪೆನಿಗೆ ಗೋಲ್ಡ್ ಮೆಂಬರ್’ಶಿಪ್

ಪುತ್ತೂರು: ಆಟಮ್’ಬರ್ಗ್ ಫ್ಯಾನ್ ಗಳಲ್ಲಿ ಅತ್ಯಧಿಕ ಮಾರಾಟ ಮಾಡಿ ಸಾಧನೆ ಮಾಡಿದ ಪುತ್ತೂರಿನ…