ಟ್ರೆಂಡಿಂಗ್ ನ್ಯೂಸ್

ಬಲ್ನಾಡು ಉ.ಹಿ.ಪ್ರಾ. ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಯುವದಿಂದ ಕೊಡುಗೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದಿಂದ ಬಲ್ನಾಡು ಉ.ಹಿ.ಪ್ರಾ. ಶಾಲೆಗೆ ಒಂದು ಲಕ್ಷ ರೂ. ದೇಣಿಗೆ ನೀಡಲಾಯಿತು.

ರೋಟರಿ ಗವರ್ನರ್ ಪಿ.ಕೆ. ರಾಮಕೃಷ್ಣ ಅವರ ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಧಾಕೃಷ್ಣ ನಾಗಗದ್ದೆ ಮಾತನಾಡಿ, ರೋಟರಿ ಕ್ಲಬ್ ನಿಂದ ಈ ಹಿಂದೆಯೂ ಶಾಲೆಗೆ ಕೊಡುಗೆ ನೀಡಲಾಗಿದೆ. ಇದೀಗ ಅನುದಾನ ನೀಡುವ ಕಾರ್ಯಕ್ಕಾಗಿ ಆಗಮಿಸಿದ್ದಾರೆ. ಈ ಮೊತ್ತದಿಂದ ಶಾಲೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮ ಮಾಡಲು ನಮಗೂ ಬಲ ಬಂದಂತಾಗಿದೆ ಎಂದರು.

ಮುಖ್ಯೋಪಾಧ್ಯಾಯಿನಿ ಭವಾನಿ ಮಾತನಾಡಿ, ಶಾಲೆ ಸಾಕಷ್ಟು ಅಭಿವೃದ್ಧಿಯನ್ನು ಎದುರು ನೋಡುತ್ತಿದೆ. ನಿಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದೇವೆ. ರೋಟರಿ ಕ್ಲಬ್ ಪುತ್ತೂರು ಯುವದಿಂದ ನೀಡುತ್ತಿರುವ ಅನುದಾನಕ್ಕೆ ಕೃತಜ್ಞತೆಗಳು ಎಂದರು.

ಕ್ಲಬ್ ಅಧ್ಯಕ್ಷ ಕುಸುಮ್’ರಾಜ್ ಅಧ್ಯಕ್ಷತೆ ವಹಿಸಿದ್ದರು. ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ, ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ಮುಳಿಯ, ಸ್ಥಾಪಕ ಅಧ್ಯಕ್ಷ ರತ್ನಾಕರ ರೈ, ಝೋನಲ್ ಲೆಫ್ಟಿನೆಂಟ್ ಭರತ್ ಪೈ, ನಿಯೋಜಿತ ಅಧ್ಯಕ್ಷೆ ವಚನಾ ಜಯರಾಂ, ಪೂರ್ವಾಧ್ಯಕ್ಷ ಚೇತನಾ ಪ್ರಕಾಶ್, ನರಸಿಂಹ ಪೈ, ಕೋಶಾಧಿಕಾರಿ ಸಚಿನ್ ನಾಯಕ್, ಸಾರ್ಜಂಟ್ ಅಟ್ ಆರ್ಮ್ಸ್ ಹರಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಪಂ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಕೋಟ್ಯಾನ್, ವಿದ್ಯಾಭಿಮಾನಿಗಳ ಸಂಘದ ಉಪಾಧ್ಯಕ್ಷ ಹರೀಶ್ ರಾಂಬೈಲ್, ಹಿರಿಯ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ನಾರಾಯಣ ಗೌಡ, ಕಾರ್ಯದರ್ಶಿ ಅಚ್ಯುತ ಗೌಡ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಯಶೋಧಾ ಕಟ್ಟಮನೆ ಮೊದಲಾದವರು ಉಪಸ್ಥಿತರಿದ್ದರು.

ಕ್ಲಬ್ ಕಾರ್ಯದರ್ಶಿ ಅಭೀಷ್ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts