Gl
ದೇಶರಾಜ್ಯ ವಾರ್ತೆಸ್ಥಳೀಯ

ಕೀಟನಾಶಕದಿಂದ ತೊಂದರೆ..! ಗುರುವಾಯೂರು ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ತುಳಸಿ ನಿಷೇಧ!!

ಪ್ರಸಿದ್ದ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ತುಳಸಿ ದಳಗಳನ್ನು ಸಮರ್ಪಿಸುವುದನ್ನು ನಿರ್ಬಂಧ ವಿಧಿಸಲಾಗಿದೆ. ಭಕ್ತಾದಿಗಳು ಸಮರ್ಪಿಸುತ್ತಿದ್ದ ತುಳಸಿಯಲ್ಲಿ ಅಧಿಕ ಮಟ್ಟದ ಕೀಟನಾಶಕ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆಯೆಂದು ದೇವಾಲಯದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ಪ್ರಸಿದ್ದ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ತುಳಸಿ ದಳಗಳನ್ನು ಸಮರ್ಪಿಸುವುದನ್ನು ನಿಷೇಧಿಸಲಾಗಿದೆ.

rachana_rai
Pashupathi
akshaya college

ಭಕ್ತಾದಿಗಳು ಸಮರ್ಪಿಸುತ್ತಿದ್ದ ತುಳಸಿಯಲ್ಲಿ ಅಧಿಕ ಮಟ್ಟದ ಕೀಟನಾಶಕ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆಯೆಂದು ದೇವಾಲಯದ ಮೂಲಗಳು ತಿಳಿಸಿವೆ.

pashupathi

ಭಕ್ತಾದಿಗಳು ಸಮರ್ಪಿಸುವ ತುಳಸಿಯ ದಳಗಳನ್ನು ನಿರ್ವಹಿಸುತ್ತಿದ್ದ ದೇವಾಲಯದ ಹಲವಾರು ಸಿಬ್ಬಂದಿಯಲ್ಲಿ ತುರಿಕೆ ಹಾಗೂ ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

“ಬಹುತೇಕ ಯಾತ್ರಿಕರು ಅಂಗಡಿಗಳಿಂದ ತುಳಸಿಯನ್ನು ಖರೀದಿಸಿ ದೇವಾಲಯಕ್ಕೆ ಸಮರ್ಪಿಸುತ್ತಾರೆ. ವಾಣಿಜ್ಯ ಉದ್ದೇಶಕ್ಕಾಗಿ ಬೆಳಸಲಾಗುವ ಈ ತುಳಸಿಗಿಡದ ಎಲೆಗಳು ದೀರ್ಘ ಸಮಯದವರೆಗೆ ಬಾಡದಂತೆ ನೋಡಿಕೊಳ್ಳಲು ಅವುಗಳಿಗೆ ಅಧಿಕ ಪ್ರಮಾಣದಲ್ಲಿ ಕೀಟನಾಶಕಗಳನ್ನು ಸೇರಿಸಲಾಗುತ್ತದೆ. ಇಂತಹ ತುಳಸಿ ಎಲೆಗಳ ನಿರಂತರ ಸಂಪರ್ಕದಿಂದಾಗಿ ದೇವಾಲಯದ ಸಿಬ್ಬಂದಿಯಲ್ಲಿ ಅಲರ್ಜಿ ಹಾಗೂ ತುರಿಕೆಯ ಸಮಸ್ಯೆಗಳು ಕಾಣಿಸಿಕೊಂಡಿವೆ “ಎಂದು ದೇವಾಲಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಪೂಜಾ ಉದ್ದೇಶಗಳಿಗೆ ಕೀಟನಾಶಕ ಮುಕ್ತ ತುಳಸಿಯನ್ನು ಪಡೆಯಲು ದೇವಾಲಯವು ವಿಶೇಷ ವ್ಯವಸ್ಥೆಯನ್ನು ಮಾಡಿದೆಯೆಂದು ದೇವಾಲಯ ಸಿಬ್ಬಂದಿ ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

1 of 133