Gl harusha
ಕೃಷಿಸ್ಥಳೀಯ

ಕೊಡಿಪ್ಪಾಡಿ ಗ್ರಾಮದಲ್ಲಿ ಅಡಕೆಗೆ ಎಲೆ ಚುಕ್ಕಿ ಮಾರಕ ರೋಗ!!

ಕೊಡಿಪ್ಪಾಡಿ ಗ್ರಾಮದ ಬಹುತೇಕ ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದ್ದು ಸುಮಾರು ಸಾವಿರಾರು ಅಡಿಕೆ ಮರಗಳು ನಾಶವಾಗಿದೆ. ಇದರಿಂದ ಕೃಷಿಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು ಸರಕಾರದಿಂದ ಸೂಕ್ತ ಔಷಧಿ ಮತ್ತು ಪರಿಹಾರಕ್ಕೆ ಆಗ್ರಹಿಸಿ ಕೊಡಿಪ್ಪಾಡಿ ಅಡಕೆ ಕೃಷಿಕರ ನಿಯೋಗ ಬನ್ನೂರು ರೈತರ ಸೇವಾ ಸಹಕಾರಿ‌ ಸಂಘದ‌ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದಲ್ಲಿ‌ ಶಾಸಕರ ಮೂಲಕ ಸರಕಾರಕ್ಕೆ‌ ಮನವಿ ಸಲ್ಲಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಬಹುತೇಕ ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದ್ದು ಸುಮಾರು ಸಾವಿರಾರು ಅಡಿಕೆ ಮರಗಳು ನಾಶವಾಗಿದೆ. ಇದರಿಂದ ಕೃಷಿಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು ಸರಕಾರದಿಂದ ಸೂಕ್ತ ಔಷಧಿ ಮತ್ತು ಪರಿಹಾರಕ್ಕೆ ಆಗ್ರಹಿಸಿ ಕೊಡಿಪ್ಪಾಡಿ ಅಡಕೆ ಕೃಷಿಕರ ನಿಯೋಗ ಬನ್ನೂರು ರೈತರ ಸೇವಾ ಸಹಕಾರಿ‌ ಸಂಘದ‌ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದಲ್ಲಿ‌ ಶಾಸಕರ ಮೂಲಕ ಸರಕಾರಕ್ಕೆ‌ ಮನವಿ ಸಲ್ಲಿಸಿದರು.

srk ladders
Pashupathi
Muliya

ನಾವು ಅಡಿಕೆ ಕೃಷಿಕರಾಗಿದ್ದು, ಅಡಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು , ಬೇರೆ ಯಾವುದೇ ಆದಾಯದ ಮೂಲಗಳಿರುವುದಿಲ್ಲ. ನಾವು ಹೊಂದಿದ ಜಾಗದಲ್ಲಿ ಅಡಿಕೆ ಕೃಷಿ ಮಾಡಿದ್ದು, ಈ ಸಾಲಿನಲ್ಲಿ ಕುಡಿಪ್ಪಾಡಿ ಗ್ರಾಮದ ಭಾಗಶಃ ಅಡಿಕೆ ತೋಟಗಳಿಗೆ ಎಲೆಚುಕ್ಕಿ ರೋಗ ಬಂದಿದೆ. ಸಣ್ಣ ಅಡಿಕೆ ಉದುರಿ ಹೋಗಿದೆ. ಸದರಿ ರೋಗವನ್ನು ತಡೆಗಟ್ಟಲು ಬೇರೆ ಬೇರೆ ಕಂಪೆನಿಯವರು ತಿಳಿಸಿದಂತೆ ಕ್ರಮ‌ ವಹಿಸಿದರೂ ರೋಗದ ಬಾಧೆ ಕಡಿಮೆ ಆಗಿರುವುದಿಲ್ಲ. ಔಷದಿ ಸಿಂಪರಣೆ ಮಾಡಿದರೂ ನಮ್ಮ ತೋಟಕ್ಕೆ ಕೃಷಿಕ ಪಂಜಿಗುಡ್ಡೆ ಈಶ್ವರ ಭಟ್ ರವರ ಮನವಿಯ ಮೇರೆಗೆ ಇಂದೋರ್ ಶ್ರೀ ಸಿದ್ದಿ ಅಗ್ರಿ ಕಂಪೆನಿ ಪೈ. ಅ. ಕಾರ್ಯಪಾಲಕ ನಿರ್ದೆಶಕರಾದ ಪೆರ್ವೋಡಿ ನಾರಾಯಣ ಭಟ್ ರವರು ಬಂದು ಪರಿಶೀಲಿಸಿ ಅದು ಎಲೆ ಚುಕ್ಕಿ ರೋಗ ಎಂದು ದೃಢೀಕರಿಸಿದ್ದಾರೆ. ಈ ರೀತಿಯಿಂದ ನಮಗೆ ತುಂಬಾ ಆರ್ಥಿಕ ನಷ್ಟವಾಗಿದೆ. ಆದುದರಿಂದ ಎಲೆ ಚುಕ್ಕಿ ರೋಗವನ್ನು ತಡೆಗಟ್ಟಲು ಔಷಧಿಯನ್ನು ಸಿಂಪಡಿಸಲು ಸರಕಾರದಿಂದ ಸಹಾಯ ಧನವನ್ನು ಒದಗಿಸುವ‌ ಮೂಲಕ ನಮ್ಮ ಅಡಕೆ ತೋಟವನ್ನು ಎಲೆ ಚುಕ್ಕಿ ರೋಗದಿಂದ ರಕ್ಷಣೆ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಅಧಿವೇಶನದಲ್ಲಿ ಪ್ರಸ್ತಾಪಿಸುವೆ: ಅಶೋಕ್ ರೈ
ಅಡಕೆ ಎಲೆ ಚುಕ್ಕಿ ರೋಗ ದ‌ ಕ. ಜಿಲ್ಲೆಯಲ್ಲಿ‌ ವ್ಯಾಪಕವಾಗಿ ಹರಡುತ್ತಿದೆ. ಕಳೆದ ಕೆಲವು ತಿಂಗಳಿಂದ ಸುಳ್ಯ‌ ಭಾಗದಲ್ಲಿ ಕಾಣಿಸಿಕೊಂಡಿದ್ದ ಈ ರೋಗ ಇದೀಗ ಪುತ್ತೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು ಕೃಷಿಕರು‌ ಕಂಗಾಲಾಗಿದ್ದಾರೆ. ಇದಕ್ಕೆ ಸೂಕ್ತ ಔಷಧಿಯನ್ನು ಪತ್ತೆ ಮಾಡಬೇಕಿದೆ.‌ ನಷ್ಟಕ್ಕೊಳಗಾದ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ವಿಚಾರವನ್ನು ವಿಧಾನಸಭಾ ಅಧಿವೇಶನದಲ್ಲಿ‌ ಸರಕಾರದ‌ ಗಮನ ಸೆಳೆಯುವುದಾಗಿ ಶಾಸಕ ಅಶೋಕ್ ರೈ ನಿಯೋಗಕ್ಕೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬನ್ನೂರು ರೈತರ ಸೇವಾ‌ ಸಹಕಾರಿ‌ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ನಿರ್ದೇಶಕರುಗಳಾದ ಸುಬಾಶ್ ನಾಯಕ್ ನೆಕ್ಕರಾಜೆ, ದೇವಾನಂದ ಕೆ, ಸುಬ್ರಹ್ಮಣ್ಯ ಗೌಡ ಹಣಿಯೂರು, ಮೋಹನ್ ಪಕ್ಕಳ ಕುಂಟಾಪು, ಧೀರಜ್ ಗೌಡ ಕೊಡಿಪ್ಪಾಡಿ, ಕೇಶವ ಅಶ್ವತ್ತಡಿ, ಅಶೋಕ್ ಗೌಡ ಅಶ್ವತ್ತಡಿ, ಗಂಗಾಧರ ಗೌಡ, ಇಬ್ರಾಹಿಂ ಕೊಡಿಪ್ಪಾಡಿ ದಿನೇಶ ಗೌಡ ಗೋಮುಖ, ವಾಸುದೇವ‌ಮಯ್ಯ, ರಾಮ ಜೋಯಿಸ,ದೇವಯ್ಯ ಗೌಡ ಅಂಜಾಲ, ಸುಬ್ರಾಯ ನಾಯ್ಕ ಕೊಳತ್ತಿಮಾರ್, ರಾಜೇಶ‌ ಕೊಡಿಪ್ಪಾಡಿ, ರಾಧಾಕೃಷ್ಣ ನಂದನ, ಕರೀಂ‌ ಆನಾಜೆ, ಇರ್ಷಾದ್ ಕೊಡಿಪ್ಪಾಡಿ, ಶ್ರೀಕಾಂತ ಕೊಡಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ