Gl harusha
ರಾಜ್ಯ ವಾರ್ತೆಸ್ಥಳೀಯ

BIG BREAKING: ಕನ್ನಡದ ಖ್ಯಾತ ನಿರೂಪಕಿ, ಮಜಾ ಟಾಕೀಸಿನ ವರಲಕ್ಷ್ಮೀ ಖ್ಯಾತಿಯ ಅಪರ್ಣಾ ಇನ್ನಿಲ್ಲ

ಕನ್ನಡದ ಕಿರುತೆರೆಯಲ್ಲಿ ನಿರೂಪಕಿಯಾಗಿ ಜನಪ್ರಿಯವಾಗಿದ್ದಂತ ಅಪರ್ಣಾ ಅವರು ಇನ್ನಿಲ್ಲವಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದಂತ ಖ್ಯಾತ ನಿರೂಪಕಿ ಅಪರ್ಣಾ ಅವರು ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅವರು ಬೆಂಗಳೂರಿನ ಬನಶಂಕರಿಯಲ್ಲಿನ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕನ್ನಡದ ಕಿರುತೆರೆಯಲ್ಲಿ ನಿರೂಪಕಿಯಾಗಿ ಜನಪ್ರಿಯವಾಗಿದ್ದಂತ ಅಪರ್ಣಾ ಅವರು ಇನ್ನಿಲ್ಲವಾಗಿದ್ದಾರೆ.

srk ladders
Pashupathi
Muliya

ಕ್ಯಾನ್ಸರ್ ನಿಂದ ಬಳಲುತ್ತಿದ್ದಂತ ಖ್ಯಾತ ನಿರೂಪಕಿ ಅಪರ್ಣಾ ಅವರು ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅವರು ಬೆಂಗಳೂರಿನ ಬನಶಂಕರಿಯಲ್ಲಿನ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಮಸಣದ ಹೂ, ಇನ್ಸ್ ಪೆಕ್ಟರ್ ವಿಕ್ರಂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಂತ ಅಪರ್ಣಾ, ಆ ಬಳಿಕ ಕಿರುತೆರೆಯ ಧಾರವಾಹಿಗಳು, ರಿಯಾಲಿಟಿ ಶೋ ಗಳಲ್ಲಿ ನಿರೂಪಕಿಯಾಗಿ ತೊಡಗಿಸಿಕೊಂಡು, ಖ್ಯಾತಿಯನ್ನು ಪಡೆದಿದ್ದರು.

ಕ್ಯಾನ್ಸರ್ ನಿಂದ ನಿಧನರಾಗಿರುವಂತ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರು, 1989ರಲ್ಲಿ ನಿರೂಪಕಿಯಾಗಿ ಟಿವಿ ಮಾಧ್ಯಮಕ್ಕೆ ಸೇರಿದರು. ಅದಕ್ಕೂ ಮುನ್ನಾ 1984ರಲ್ಲಿ ತೆರೆಕಂಡಂತ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂ ಚಿತ್ರದಲ್ಲಿಯೂ ಕಾಣಿಸಿಕೊಂಡು, ಸಿನಿ ರಂಗದ ಜರ್ನಿ ಆರಂಭಗೊಂಡಿತ್ತು.

ಮಸಣದ ಹೂ ಬಳಿಕ ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಪರ್ಣಾ ನಟಿಸಿ, ಸ್ಯಾಂಡಲ್ ವುಡ್ ನಟಿಯ ಖ್ಯಾತಿಯನ್ನೂ ಗಳಿಸಿದ್ರು. 90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ನಿರೂಪಿಸಿದರು. ಆ ನಂತರ ರೇಡಿಯೋ ಜಾಕಿಯಾಗಿ ಕೂಡ ಕೆಲಸ ಮಾಡಿದ್ದಾರೆ. 1998 ರಲ್ಲೇ ದೀಪಾವಳಿ ಕಾರ್ಯಕ್ರಮದಲ್ಲಿ 8 ಗಂಟೆಗಳ ನಿರೂಪಣೆ ಮಾಡಿ ಹೊಸ ದಾಖಲೆ ಬರೆದದ್ದು ಇವರ ಮತ್ತೊಂದುಕೀರ್ತಿ.

ಮೂಡಲ ಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ರು. 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದಾರೆ. ಇಂತಹ ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಇಂದು ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts