tamanvi
ಸ್ಥಳೀಯ

ಬಾವಿಗೆ ಬಿದ್ದ ಮರಿಯಾನೆ! | ಬಾವಿ ಕಲ್ಲು ಕೆಡವಿ ರಕ್ಷಿಸಿದ ತಾಯಾನೆ!

D_shiva_bhat
ಬಾವಿಗೆ ಬಿದ್ದ ಮರಿಯಾನೆಯೊಂದನ್ನು ತಾಯಿ ಆನೆ ರಕ್ಷಿಸಿರುವ ಘಟನೆ ಎರ್ನಾಕುಲಂನ ಮಲಯತ್ತೂರ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬಾವಿಗೆ ಬಿದ್ದ ಮರಿಯಾನೆಯೊಂದನ್ನು ತಾಯಿ ಆನೆ ರಕ್ಷಿಸಿರುವ ಘಟನೆ ಎರ್ನಾಕುಲಂನ ಮಲಯತ್ತೂರ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

maithri

ಬುಧವಾರ ಬೆಳಗ್ಗೆ ಇಲ್ಲಿತ್ತೋಟ್ ಒಂದನೇ ಬ್ಲಾಕ್‌ನಲ್ಲಿರುವ ಸಾಜು ಎಂಬವರ ನಿವಾಸದ ಬಾವಿಗೆ ಮರಿಯಾನೆ ಬಿದ್ದಿದೆ. ಆಗ ಆನೆಗಳ ಹಿಂಡು ಘೀಳಿಟ್ಟ ಸದ್ದನ್ನು ಕೇಳಿದ ಸ್ಥಳೀಯರಿಗೆ ಈ ಘಟನೆ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ರವಾನಿಸಿದ್ದಾರೆ.

ಸುದ್ದಿ ತಿಳಿದು ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರಾದರೂ, ಕಾಡಾನೆಗಳ ಹಿಂಡು ಬಾವಿಯ ಬಳಿಯೇ ಬೀಡು ಬಿಟ್ಟಿದ್ದುದರಿಂದ ಅವರು ರಕ್ಷಣಾ ಕಾರ್ಯಾಚರಣೆಗೆ ತೊಡಗಲು ಸಾಧ್ಯವಾಗಿಲ್ಲ. ಹೀಗಾಗಿ ಅರಣ್ಯ ಸಿಬ್ಬಂದಿಗಳು ಆನೆಗಳ ಹಿಂಡನ್ನು ಚದುರಿಸಲು ಮುಂದಾಗಿದ್ದಾರೆ.

ಈ ವೇಳೆ ತಾಯಿ ಆನೆಯು ಬಾವಿಯ ಕಲ್ಲುಗಳನ್ನು ಕೆಡವಿ, ಮರಿಯಾನೆಯು ಬಾವಿಯಿಂದ ಮೇಲೇರಲು ದಾರಿ ಮಾಡಿಕೊಟ್ಟಿದೆ. ಮರಿಯಾನೆಯು ಬಾವಿಯಿಂದ ಮೇಲೇರಿ ಬಂದ ನಂತರ, ಆನೆಯ ಹಿಂಡು ಕಾಡಿನತ್ತ ತೆರಳಿತು ಎಂದು ವರದಿಯಾಗಿದೆ.

ಈ ಪ್ರದೇಶದಲ್ಲಿ ನಿರಂತರವಾಗಿ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳ ವರದಿಯಾಗುತ್ತಲೇ ಇವೆ. ಅರಣ್ಯ ಸಿಬ್ಬಂದಿಗಳ ವಿರುದ್ಧ ಈ ಪ್ರದೇಶದ ನಿವಾಸಿಗಳು ರಸ್ತೆ ತಡೆ ನಡೆಸಿ, ಪ್ರತಿಭಟನೆಗಳನ್ನೂ ಮಾಡುತ್ತಿದ್ದಾರೆ.

ಜನವಸತಿ ಪ್ರದೇಶಗಳನ್ನು ಅತಿಕ್ರಮಿಸುತ್ತಿರುವ ವನ್ಯಜೀವಿಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ಈ ಪ್ರದೇಶದ ನಿವಾಸಿಗಳು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿ | ಪುತ್ತೂರು ಗೃಹಲಕ್ಷ್ಮೀ ಸಂಭ್ರಮಾಚರಣೆಯಲ್ಲಿ ಉಮಾನಾಥ ಶೆಟ್ಟಿ ಪೆರ್ನೆ

ಪುತ್ತೂರು: ಗೃಹ ಲಕ್ಷ್ಮೀ ಸೇರಿದಂತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಮಂದಿ ಬದುಕು…

1 of 126