ಸ್ಥಳೀಯ

ಮಳೆ ಆವಾಂತರ: ಸೂಚನೆ ಜತೆ ತುರ್ತು ಸಂದರ್ಭಕ್ಕಾಗಿ ಸಂಪರ್ಕ ಸಂಖ್ಯೆ ನೀಡಿದ ಶಾಸಕ ಅಶೋಕ್ ರೈ

GL
ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಅಲ್ಲಲ್ಲಿ ಮಳೆಯ ಕಾರಣಕ್ಕೆ ಅವಘಡಗಳು ಸಂಭವಿಸುತ್ತಲೇ ಇದೆ. ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಅಲ್ಲಲ್ಲಿ ಮಳೆಯ ಕಾರಣಕ್ಕೆ ಅವಘಡಗಳು ಸಂಭವಿಸುತ್ತಲೇ ಇದೆ. ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದ್ದಾರೆ.

chennai-shopping
maithri

ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಬೇಡಿ. ಹೊಳೆ, ಕೆರೆ, ಬಾವಿಯ ಕಡೆ ಮಕ್ಕಳು ತೆರಳದಂತೆ ಎಚ್ಚರ ವಹಿಸಿ. ವಿದ್ಯುತ್ ಕಂಬ, ಮನೆಯ ವಿದ್ಯುತ್ ಮೀಟರ್, ಟ್ರಾನ್ಸ್ ಫಾರ್ಮರ್ ,ವಿದ್ಯುತ್ ಕಂಬ ಮುಟ್ಟಲು ಹೋಗಬೇಡಿ. ಬಾವಿ ಕುಸಿಯುತ್ತಿರುವ ಘಟನೆಗಳು ನಡೆದಿದ್ದು ಬಾವಿಯಿಂದ ದೂರ ಇರಿ. ಮನೆಯ ಬಳಿ ಧರೆ ಇದ್ದರೆ ಅದಕ್ಕೆ ಪ್ಲಾಸ್ಡಿಕ್ ಹೊದಿಕೆ ಹಾಕಿ ನೀರು ಇಂಗದಂತೆ ನೋಡಿಕೊಳ್ಳಿ. ಧರೆ ಕುಸಿಯುವ ಭೀತಿಯಲ್ಲಿದ್ದರೆ ತಕ್ಷಣ ನನಗೆ ಅಥವಾ ನನ್ನ ಕಚೇರಿಗೆ ಕರೆ ಮಾಡಿ ತಿಳಿಸಿ. ಮನೆಯ ಪಕ್ಕ ಮರ ಇದ್ದರೆ ಜಾಗೃತೆ ವಹಿಸಿ. ಮನೆ ಅಪಾಯಕಾರಿಯಾಗಿದ್ದಲ್ಲಿ ತಿಳಿಸಿದರೆ ಬದಲಿ ವ್ಯವಸ್ಥೆ ಮಾಡುತ್ತೇವೆ. ಏನೇ ಘಟನೆ ನಡೆದರೂ, ಅವಘಡದ‌ ಮುನ್ಸೂಚನೆ ಇದ್ದಲ್ಲಿ ನನ್ನ ಕಚೇರಿಗೆ ತಿಳಿಸಿ ಸಾರ್ವಜನಿಕರು ನೆರವು ಪಡೆದುಕೊಳ್ಳಬಹುದು. ಯಾರೂ ಆತಂಕಪಡಬೇಕಾಗಿಲ್ಲ ಎಂದು ಶಾಸಕ ಅಶೋಕ್ ರೈ ಸಾರ್ವಜನಿಕರಲ್ಲಿ‌ ಮನವಿ‌ ಮಾಡಿದ್ದಾರೆ.

ಶಾಸಕರ ಕಚೇರಿ ಮೊಬೈಲ್ ಸಂಖ್ಯೆ:+91 89047 07969
944-838-0969 ಶಾಸಕ ಅಶೋಕ್ ರೈ ನಂಬರ್ ಗೆ ಕರೆ ಮಾಡಬಹುದು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರೋಟರಿ ಯುವದಿಂದ ರಾಮಕೃಷ್ಣ ಆಶ್ರಮದಲ್ಲಿ ಚಿತ್ರಕಲಾ ಶಿಬಿರ | ಯುವ ಕಲಾವಿದ ಯುಧಿಷ್ಠಿರ್ ಗೌಡ ಅವರಿಂದ ಕಲಾ ತರಬೇತಿ

ಪುತ್ತೂರು: ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ…

ಇ-ಖಾತಾ, ಇ-ಸ್ವತ್ತು ವಿತರಣೆಗೆ ವೇಗ: ದಕ್ಷಿಣ ಕನ್ನಡದಲ್ಲಿ ಸಚಿವ ದಿನೇಶ್ ಗುಂಡೂರಾವ್ ಕಟ್ಟುನಿಟ್ಟಿನ ಸೂಚನೆ

ಮಂಗಳೂರು:ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಇ-ಖಾತಾ ಮತ್ತು ಇ-ಸ್ವತ್ತುಗಳನ್ನು…

1 of 123