Gl jewellers
ರಾಜ್ಯ ವಾರ್ತೆಸ್ಥಳೀಯ

ಶಿವಾನಂದ ಸ್ವಾಮೀಜಿಯ ಬರ್ಬರ ಕೊಲೆ!! ವಿಷ ಸೇವಿಸಿ ಆಸ್ವಸ್ಥನಾಗಿರುವ ಸಹಾಯಕ!!

Karpady sri subhramanya
ಮೈಸೂರು: ಇಲ್ಲಿನ ಸಿದ್ದಾರ್ಥನಗರ ಸಮೀಪದ ಬನ್ನೂರು ರಸ್ತೆಯಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (92) ಅವರನ್ನು ಸೋಮವಾರ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders

ಮೈಸೂರು: ಇಲ್ಲಿನ ಸಿದ್ದಾರ್ಥನಗರ ಸಮೀಪದ ಬನ್ನೂರು ರಸ್ತೆಯಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (92) ಅವರನ್ನು ಸೋಮವಾರ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

Akshaya College

ಅವರ ಸಹಾಯಕ ರವಿ (60) ಕೊಲೆ ಆರೋಪಿ ಎನ್ನಲಾಗಿದೆ.

‘ಸ್ವಾಮೀಜಿ 50 ವರ್ಷದಿಂದ ಮಠದ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ತಮಗೆ ನೆರವಾಗಲೆಂದು ಆರೋಪಿಯನ್ನು 3 ವರ್ಷದ ಹಿಂದೆ ಸೇರಿಸಿಕೊಂಡಿದ್ದರು. ಆತ ನಿತ್ಯ ಸಂಬಂಧಿಕರ ಮನೆಯಿಂದ ಆಹಾರ ತರುತ್ತಿದ್ದ, ಪೂಜೆಗೆ ಸಹಾಯ ಮಾಡುತ್ತಿದ್ದ’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ತಿಳಿಸಿದರು.

‘ಸೋಮವಾರ ಆಹಾರ ಪಡೆಯಲು ಆರೋಪಿಯು ಬಾರದ ಕಾರಣ ಸಂಬಂಧಿಕರು ಕರೆ ಮಾಡಿದ್ದರು. ಆತ ಸ್ಪಂದಿಸದಿದ್ದಾಗ ತಾವೇ ಮಠಕ್ಕೆ ಬಂದ ವೇಳೆ ಕೊಲೆ ವಿಚಾರ ಬೆಳಕಿಗೆ ಬಂತು. ಮಠದ ಆವರಣದಲ್ಲೇ ಇದ್ದ ಆರೋಪಿಯು ಪಾನಮತ್ತನಾಗಿದ್ದು, ಜೊತೆಗೆ ವಿಷವನ್ನೂ ಕುಡಿದಿದ್ದರಿಂದ ಕೆ.ಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಟ್ಟೆಯ ಮೇಲಿನ ರಕ್ತದ ಕಲೆ ಹಾಗೂ ಇನ್ನಿತರ ಸಾಕ್ಷಿ ಆಧರಿಸಿ ಆತನೇ ಕೊಲೆ ಮಾಡಿರಬಹುದೆಂಬುದು ಶಂಕಿಸಲಾಗಿದೆ.

ಆತ ಗುಣಮುಖನಾದ ಬಳಿಕ ಕೊಲೆಯ ಕಾರಣ ಗೊತ್ತಾಗಲಿದೆ’ ಎಂದರು. ನಜರ್‌ಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts