ಪುತ್ತೂರು: ಕರ್ನಾಟಕ ಶಿಕ್ಷಣ ಇಲಾಖೆಯು ಶೀಘ್ರದಲ್ಲೇ 15,000 ಸರ್ಕಾರಿ ಶಿಕ್ಷಕರ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ, ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಿಗಾಗಿ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಿದೆ.
ಆ.23ರಂದು GPSTR, PSTR ಹಾಗೂ HSTR ಉಚಿತ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆಯ ಕುರಿತು ಸಮಗ್ರ ಮಾರ್ಗದರ್ಶನ ನೀಡಲಾಗುತ್ತದೆ.
ಕಾರ್ಯಾಗಾರದಲ್ಲಿ ನೂತನ ಪರೀಕ್ಷಾ ಮಾದರಿ, ಪಠ್ಯಕ್ರಮ, ಹುದ್ದೆಗಳ ಆಯ್ಕೆ ಪ್ರಕ್ರಿಯೆ ಸೇರಿದಂತೆ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ನೀಡಲಾಗುತ್ತದೆ. ಜೊತೆಗೆ ಪರಿಣಾಮಕಾರಿ ಅಧ್ಯಯನ ವಿಧಾನಗಳು, ಸಮಯ ನಿರ್ವಹಣೆ ಹಾಗೂ ಪರೀಕ್ಷಾ ತಯಾರಿಗೆ ಉಪಯುಕ್ತ ಟಿಪ್ಸ್‌ಗಳ ಕುರಿತು ತಜ್ಞರಿಂದ ಮಾರ್ಗದರ್ಶನ ದೊರೆಯಲಿದೆ.
ಅಭ್ಯರ್ಥಿಗಳ ವೈಯಕ್ತಿಕ ಸಂದೇಹ ಹಾಗೂ ಪ್ರಶ್ನೆಗಳಿಗೆ ನುರಿತ ಉಪನ್ಯಾಸಕರಿಂದ ನೇರವಾಗಿ ಉತ್ತರ ಪಡೆಯುವ ಅವಕಾಶವೂ ಇರಲಿದೆ.
ಕಾರ್ಯಾಗಾರದ ವಿವರ:
📅 ದಿನಾಂಕ: 23.08.2026, ಭಾನುವಾರ
⏰ ಸಮಯ: ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ
📍 ಸ್ಥಳ: ವಿದ್ಯಾಮಾತಾ ಅಕಾಡೆಮಿ, ಎಪಿಎಂಸಿ ರಸ್ತೆ, ಪುತ್ತೂರು
ಕಾರ್ಯಾಗಾರಕ್ಕೆ ಸೀಟುಗಳು ಸೀಮಿತವಾಗಿದ್ದು, ಮುಂಚಿತ ನೋಂದಣಿ ಕಡ್ಡಾಯವಾಗಿದೆ. ಆಸಕ್ತ ಅಭ್ಯರ್ಥಿಗಳು ಉಚಿತ ನೋಂದಣಿಗಾಗಿ 8590773486 ಸಂಖ್ಯೆಯನ್ನು ಸಂಪರ್ಕಿಸುವಂತೆ ವಿದ್ಯಾಮಾತಾ ಅಕಾಡೆಮಿ ಪ್ರಕಟಣೆ ತಿಳಿಸಿದೆ.

































