ಪುತ್ತೂರು: ಕಾಂಗ್ರೆಸ್ ನಾಯಕ, ತಮಿಳು ಕಾರ್ಮಿಕ ಮುಖಂಡ ಕೌಡಿಚ್ಚಾರ್ ನಿವಾಸಿ ಶಿವಕುಮಾರ್ (50 ವ) ಅವರು ಬೆಳಗಾವಿಯ ಖಾನಾಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಶಿವಕುಮಾರ್ ಅವರು ಕೆಲಸದ ನಿಮಿತ್ತ ಬೆಳಗಾವಿಯ ಖಾನಾಪುರಕ್ಕೆ ಹೋಗಿದ್ದು ಅಲ್ಲಿ ತಾನು ಚಲಾಯಿಸುತ್ತಿದ್ದ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಸಾವಿತ್ರಿ, ಪುತ್ರಿಯರಾದ ಸಹನಾ ಹಾಗೂ ಪ್ರಿಯಾಂಕ, ಪುತ್ರ ಹೃತಿಕ್ ರಾಹುಲ್ ಅವರನ್ನು ಅಗಲಿದ್ದಾರೆ.































