ಮತದಾರರನ್ನು ಸೆಳೆಯಲಿರುವ ಸಖಿ, ಸಾಂಪ್ರದಾಯಿಕ, ವಿಶೇಷ ಚೇತನರ, ಯುವ, ಧ್ಯೇಯ ಆಧಾರಿತ ಮತಗಟ್ಟೆಗಳು
ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿ.ಪಂ. ಮೂಲಕ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಪುತ್ತೂರು ತಾಲೂಕು ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 9 ವಿಶೇಷ ಮಾದರಿ ಮತಗಟ್ಟೆಗಳನ್ನು ರೂಪಿಸುವ ಮೂಲಕ ಮತದಾರರನ್ನು ಮತಗಟ್ಟೆಗೆ ವಿಶೇಷವಾಗಿ ಆಹ್ವಾನಿಸುವಂತಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಲೋಕಸಭಾ ಕ್ಷೇತ್ರವಾರು SVEEP (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ) ಕಾರ್ಯಕ್ರಮಗಳ ಅಡಿಯಲ್ಲಿ ಚುನಾವಣೆ ಮಹತ್ವ, ಅರಿವು ಮೂಡಿಸಲು ನಾನಾ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲೊಂದು ಮಾದರಿ ಮತಗಟ್ಟೆಗಳು.
ಮಾದರಿ ಮತಗಟ್ಟೆಗಳು ವರ್ಣಮಯ
ಒಟ್ಟು 5 ವಿಷಯಗಳಲ್ಲಿ ಮತಗಟ್ಟೆಗಳನ್ನು ವಿಭಾಗಿಸಲಾಗಿದ್ದು, ಆಯಾಯ ವಿಷಯಗಳಿಗೆ ಸಂಬಂಧಪಟ್ಟ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಸಖಿ ಮತಗಟ್ಟೆಗಳಾಗಿ ಸ.ಹಿ.ಪ್ರಾ ಶಾಲೆ ಕಬಕ, ಸ.ಹಿ.ಪ್ರಾ.ಶಾಲೆ ಕೈಕಾರ, ಸ.ಹಿ.ಪ್ರಾ.ಶಾಲೆ ಹಿರೇಬಂಡಾಡಿ, ಸ.ಹಿ.ಪ್ರಾ.ಶಾಲೆ ಬಜತ್ತೂರು, ಸ.ಹಿ.ಪ್ರಾ.ಶಾಲೆ ಸಾಮೆತ್ತಡ್ಕ, ಸಾಂಪ್ರದಾಯಿಕ ಮತಗಟ್ಟೆಯಾಗಿ (ಕಂಬಳ) ಸ.ಹಿ.ಪ್ರಾ.ಶಾಲೆ ಕೋಡಿಂಬಾಡಿ, ಧ್ಯೇಯ ಆಧಾರಿತ ಮತಗಟ್ಟೆಯಾಗಿ ಸ.ಉ.ಹಿ.ಪ್ರಾ.ಶಾಲೆ ಕಾವು, ಯುವಜನ ನಿರ್ವಹಣೆ ಮತಗಟ್ಟೆಯಾಗಿ ಸರ್ವೆ ಸ.ಹಿ.ಪ್ರಾ.ಶಾಲೆ ವರ್ಣಮಯವಾಗಿ ಕಾಣಲಿದೆ.ಮತಕೇಂದ್ರದ ಗೋಡೆಗಳಲ್ಲಿ ಕಲಾಚಿತ್ರಗಳ ಚಿತ್ತಾರ
ವೈವಿಧ್ಯಮಯ ಚಿತ್ರಗಳು ಜನರಿಗೆ ಮತಕೇಂದ್ರಕ್ಕೆ ಆಗಮಿಸುವಾಗ ಕಂಬಳ ಇನ್ನಿತರ ಚಿತ್ತಾರಗಳು ಎದುರುಗೊಳ್ಳಲಿವೆ. ಮಹಿಳಾ ಸಾಧಕಿಯರ ಚಿತ್ರಗಳು, ಪರಿಸರ ರಕ್ಷಣೆಯ ಅರಿವು, ವಿಶೇಷಚೇತನರ ಸಾಧನೆಗಳ ಅವತರಣಿಕೆ ಹೀಗೆ ಒಂದೇ ಎರಡೇ, ನಮ್ಮ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಮತದಾರರು ಕಣ್ತುಂಬಿಕೊಳ್ಳಬಹುದು. ಇಷ್ಟೇ ಅಲ್ಲದೇ ಮತದಾನದ ವಿಷಯಾಧಾರಿತ ಭಿತ್ತಿಚಿತ್ರಗಳು ನೋಡುಗರ ಕಣ್ಮನಗಳನ್ನು ಸೆಳೆಯಲಿವೆ.
ವಿಧಾನಸಭಾ ಕ್ಷೇತ್ರದ ಸ್ವೀಪ್ ಕಾರ್ಯಕ್ರಗಳ ಮುಖ್ಯಸ್ಥರಾಗಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಅವರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅವರ ಮಾರ್ಗದರ್ಶನದಲ್ಲಿ ನುರಿತ ಚಿತ್ರಕಲಾ ಶಿಕ್ಷಕರ ತಂಡ ಚಿತ್ರಬಿಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕೊಂಬೆಟ್ಟು ಸರಕಾರ ಪದವಿ ಪೂರ್ವ ಕಾಲೇಜಿನ ಚಿತ್ರ ಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ, ಕೆಯ್ಯೂರು ಕರ್ನಾಟಕ ಪಬ್ಲಿಕ್ ಶಾಲೆಯ ಚಿತ್ರಕಲಾ ಶಿಕ್ಷಕ ಪ್ರಕಾಶ್ ವಿಟ್ಲ, ನರಿಮೊಗ್ರು ಸಾಂದೀಪನಿ ವಿದ್ಯಾಸಂಸ್ಥೆಯ ಚಿತ್ರಕಲಾ ಶಿಕ್ಷಕ ಸುಚೇತ್ ಎಂ. ಅವರು ಮಾದರಿ ಮತಗಟ್ಟೆಗಳನ್ನು ವರ್ಣಮಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ವಿಭಿನ್ನ ಚಿತ್ರಗಳ ಮೂಲಕ ಕಂಗೊಳಿಸಲಿರುವ ಮತಗಟ್ಟೆಗಳು
ಮತಗಟ್ಟೆಗಳ ಗೋಡೆಗಳು ನೈಜ ಚಿತ್ರಗಳಿಂದ ಮೊದಲ್ಗೊಂಡು, ಮಧುಬನಿ ಕಲಾ ಶೈಲಿ, ವರ್ಲಿ ಕಲಾ ಶೈಲಿ, ಕಾರ್ಟೂನ್ ಚಿತ್ರಗಳು, ಅಲಂಕಾರಿಕ ಚಿತ್ರಗಳ ಮೂಲಕ ಕಂಗೊಳಿಸುವ ಕಾರ್ಯವನ್ನು ಚಿತ್ರಕಲಾ ಶಿಕ್ಷಕರು ಮಾಡುತ್ತಿದ್ದಾರೆ.
–ಹನಮ ರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ. ಪುತ್ತೂರು
ಮತಗಟ್ಟೆ ಕೇಂದ್ರಗಳ ಗೋಡೆಗಳಲ್ಲಿ ಚಿತ್ರಗಳ ಚಿತ್ತಾರ
What's your reaction?
- 194c
- 194cc
- 1ai technology
- 1ajjavara
- 1alwas
- 1apology
- 1artificial intelegence
- 1avg
- 1belthangady-provocative-speech-case-conviction
- 1bihar minister
- 1bjp
- 1bjp leader
- 1bjp national president
- 1bt ranjan
- 1co-operative
- 1coastal
- 1Court convicts accused in provocative speech case
- 1crime
- 1crime news
- 1cyclothon
- 0darmasthala
- 0death news
- 0dust bin
- 0education
- 0fraud
- 0gl
- 0gods own country
- 0gold
- 0google for education
- 0independence
- 0jewel
- 0jewellers
- 0jnana vikasa
- 0karnataka state
- 0kerala village
- 0kukke - kollur temple
- 0lokayuktha
- 0lokayuktha raid
- 0Mangalore
- 0manipal
- 0minister krishna bairegowda
- 0mla ashok rai
- 0mohan alwa
- 0mudubidre
- 0nidana news
- 0nirvathu mukku
- 0nitin nabin
- 0police
- 0ptr tahasildar
- 0puttur
- 0puttur news
- 0puttur tahasildar
- 0republic
- 0revenue
- 0revenue department
- 0revenue minister
- 0school
- 0senior citizen
- 0silver
- 0society
- 0sowmya
- 0students
- 0tahasildar
- 0tahasildar absconded
- 0teachers
- 0tour
- 0trending
- 0udupi
- 0wastage
Related Posts
ಪುತ್ತೂರು: ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿದ್ದ 20ರ ಹರೆಯದ ಯುವಕ ಮೃತ್ಯು
ಪುತ್ತೂರು: ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು…
ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್ ತಡೆ ಯತ್ನ ..!!
ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…
ಎಡಮಂಗಲ: ಗ್ರಾಮ ಸಹಾಯಕ ನೇಣಿಗೆ ಶರಣು; ಸಾವಿಗೆ ಕಾರಣ ನಿಗೂಢ
ಕಡಬ: ಕಂದಾಯ ಇಲಾಖೆಯ ದೇವಚಳ್ಳ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ…
ಕಾವು: ಅನಾರೋಗ್ಯದಿಂದ ಬಳಲುತ್ತಿರುವ ಈಶ್ವರ ಆಚಾರ್ಯರಿಗೆ ಪುತ್ತಿಲ ಪರಿವಾರದಿಂದ ವೈದ್ಯಕೀಯ ನೆರವು
ಪುತ್ತೂರು: ಮಾಡ್ನೂರು ಗ್ರಾಮದ ಅಶ್ವತ್ತಡಿ ನಿವಾಸಿ, ವಿದ್ಯುತ್ ಗುತ್ತಿಗೆದಾರರಾಗಿದ್ದ ಈಶ್ವರ…
ದ.ಕ.: ಕೌಟುಂಬಿಕ ಕಲಹ – ಪತ್ನಿ, ಅತ್ತೆಗೆ ಹರಿತವಾದ ಸಾಧನದಿಂದ ಹಲ್ಲೆ; ಆರೋಪಿ ಆಸ್ಪತ್ರೆಗೆ ದಾಖಲು
ಬೆಳ್ಳಾರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಅತ್ತೆಗೆ…
ಪುತ್ತೂರು ಚಲೋದಲ್ಲಿ ದ್ವೇಷ ಘೋಷಣೆ, ಪ್ರಚೋದನಕಾರಿ ಭಾಷಣ ಆರೋಪ: ಪೊಲೀಸರಿಗೆ ದೂರು
ಪುತ್ತೂರು: ಆಗಸ್ಟ್ 31ರಂದು ನಡೆದ ‘ಪುತ್ತೂರು ಚಲೋ’ ವೇಳೆ ದ್ವೇಷಪೂರಿತ ಘೋಷಣೆಗಳು ಹಾಗೂ…
ಕಡಬ: ತಡರಾತ್ರಿ ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ – 37 ಪ್ರಯಾಣಿಕರು ಪಾರು
ಕಡಬ: ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ತಡರಾತ್ರಿ…
ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…
ಪುತ್ತೂರು: (ಸೆ.05) ಪ್ರಜಾಸೇವೆ ಆಂದೋಲನ ಸಭೆ..!!
ಪುತ್ತೂರು: ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳಿಗೆ ಪರಿಹಾರ…
ಪುತ್ತೂರು: ಇನ್ನು ಮುಂದೆ ಪ್ರತೀ ಸೋಮವಾರ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಗೆ ಗಂಜಿ–ಚಟ್ಟಿ..!
ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಅಹವಾಲು ಸಲ್ಲಿಸಲು ಬರುವ ಸಾರ್ವಜನಿಕರಿಗೆ…





















