ಸ್ಥಳೀಯ

ಪುತ್ತೂರು ವಕೀಲರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಜಿ.ಜಗನ್ನಾಥ ರೈ, ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಕಾರ್ಯದರ್ಶಿಯಾಗಿ ಚಿನ್ಮಯ್ ರೈ, ಕೋಶಾಧಿಕಾರಿಯಾಗಿ ಮಹೇಶ್ ಕೆ. ಸವಣೂರು ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿ ಜಿ.ಜಗನ್ನಾಥ ರೈ ಚುನಾಯಿತರಾಗಿದ್ದಾರೆ.

maithri

ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಕಾರ್ಯದರ್ಶಿಯಾಗಿ ಚಿನ್ಮಯ್ ರೈ(ಅವಿರೋಧ ), ಜೊತೆ ಕಾರ್ಯದರ್ಶಿಯಾಗಿ ಮಮತಾ ಸುವರ್ಣ ಹಾಗೂ ಕೋಶಾಧಿಕಾರಿಯಾಗಿ ಮಹೇಶ್ ಕೆ. ಸವಣೂರು ಚುನಾಯಿತರಾಗಿದ್ದಾರೆ.

ಏ 6ರಂದು ಪುತ್ತೂರು ವಕೀಲರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆದಿತ್ತು . ಬೆಳಿಗ್ಗೆ 10 ಗಂಟೆಯಿಂದ 4 ಗಂಟೆಯವರೆಗೆ ಚುನಾವಣೆ ನಡೆದು ಬಳಿಕ ಮತ ಎಣಿಕೆ ನಡೆದಿತ್ತು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಜಗನ್ನಾಥ ರೈ ವಿಜೇತರಾಗಿದ್ದು, ಇನ್ನಿಬ್ಬರು ಸ್ಪರ್ಧಿಗಳು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಆಯ್ಕೆಯಾಗಿದ್ದು, ಎದುರಾಳಿ ವಿಶ್ವನಾಥ ನಂದಿಲ, ಪರಾಭವಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಚಿನ್ಮಯ್ ರೈ ಅವಿರೋಧ ಆಯ್ಕೆಗೊಂಡಿದ್ದು .ಜತೆ ಕಾರ್ಯದರ್ಶಿಯಾಗಿ ಮಮತಾ ಸುವರ್ಣ ಆಯ್ಕೆಗೊಂಡಿದ್ದು ಹೀರಾ ಉದಯ್ ಪರಾಭವಗೊಂಡಿದ್ದಾರೆ. ಕೋಶಾಧಿಕಾರಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹೇಶ್ ಕೆ. ಸವಣೂರು ಆಯ್ಕೆಗೊಂಡಿದ್ದು, ಚಿದಾನಂದ ರೈ, ಕೊಡಿಂಬಾಡಿ ಪರಾಭವಗೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಮ್ಮ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಯಿಂದಲೇ ಕಾಮಗಾರಿ ಉದ್ಘಾಟಿಸಿದ ಶಾಸಕ!

ಪುತ್ತೂರು: ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 124