tamanvi
ಸ್ಥಳೀಯ

ಮುಖಂಡರು ಮಗು ತೆಗೆಸಿ ಎಂದರೇ ಹೊರತು, ಮದುವೆ ಬಗ್ಗೆ ಮಾತನಾಡಲಿಲ್ಲ: ಸಂತ್ರಸ್ತೆ ತಾಯಿ | ನ್ಯಾಯಕ್ಕೆ ಆಗ್ರಹಿಸಿ ಹೋರಾಟಕ್ಕೆ ಮುಂದಾದ ಎಸ್.ಡಿ.ಪಿ.ಐ.

D_shiva_bhat
ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿದ ರಾಜಕೀಯ ಮುಖಂಡನ ಪುತ್ರನಿಂದ ವಂಚನೆ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿದ ರಾಜಕೀಯ ಮುಖಂಡನ ಪುತ್ರನಿಂದ ವಂಚನೆ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪುತ್ತೂರು SDPI ವತಿಯಿಂದ ಪುತ್ತೂರು ನಗರಸಭೆಯ ಎದುರು ಜು. 2ರಂದು ಪ್ರತಿಭಟನೆ ನಡೆಯಿತು.

maithri

ಎಸ್ ಡಿ ಪಿ ಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮತ್ತು ಬಂಟ್ವಾಳ ಪುರಸಭೆ ಉಪಾಧ್ಯಕ್ಷ ಮೂನಿಶ್ ಅಲಿ ಬಂಟ್ವಾಳ ಅವರು ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವುದು, ರಾಜಕೀಯಕ್ಕಾಗಿ ಹಿಂದುಗಳ ಮನಸ್ಸಿನಲ್ಲಿ ದ್ವೇಷ ಹುಟ್ಟಿಸುವುದು ಸಂಘ ಪರಿವಾರದ ಕೆಲಸವಾಗಿದೆ. ಆದರೆ ಓರ್ವ ತಾಯಿಗೆ ನ್ಯಾಯ ಕೊಡಲು ಆಗದ ಹಿಂದು ಸಮಾಜದ ಮುಖಂಡರು ಇವರ ಅಸಲಿಯತ್ತು ಈಗ ಗೊತ್ತಾಗಿದೆ. ಇಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವ ಒಂದು ಹಿಂದು ಸಂಘಟನೆಯೂ ಇಲ್ಲ. ಜಾತಿ ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ಇವರದಾಗಿದೆ ಪೊಲೀಸರು ಆರೋಪಿಯನ್ನು ಯಾಕೆ ಬಂಧಿಸುತ್ತಿಲ್ಲ ಸಂತ್ರಸ್ತೆಯ ನ್ಯಾಯದ ಹೋರಾಟಕ್ಕೆ ಎಸ್ ಡಿಪಿಐ ಪುತ್ತೂರು ನಾಯಕರು ಇದ್ದಾರೆ ಎಂದರು.

ಸಂತ್ರಸ್ತೆಯ ತಾಯಿ ನಮಿತಾ ಅವರು ಮಾತನಾಡಿ, ನಾನು ಎಲ್ಲಾ ಮುಖಂಡರಲ್ಲಿ ಮಾತನಾಡಿದ್ದೇನೆ. ಎಲ್ಲರು ಮಗುವನ್ನು ತೆಗೆಸಿ ಎಂದು ಹೇಳಿದ್ದಾರೆ. ಹೊರತು ಮದುವೆ ಮಾಡಿ ಕೊಡಬೇಕೆಂದು ಯಾರು ಹೇಳಿಲ್ಲ. ಇವತ್ತು ಹುಡುಗನನ್ನು ಅವರ ಅಪ್ಪನೆ ಅಡಗಿಸಿಟ್ಟಿದ್ದಾರೆ. ನನ್ನ ಮಗಳ ಮಗುವಿಗೆ ತಂದೆಯ ಸ್ಥಾನ ಕೊಡಿಸಿ, ಹುಡಗನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗಬೇಕು ಎಂದು ಪಟ್ಟು ಹಿಡಿದರು.

ಎಸ್ ಡಿ ಪಿ ಐ ಜಿಲ್ಲಾ ಸದಸ್ಯೆ ಝೀನತ್ ಬಂಟ್ವಾಳ ಅವರು ಮಾತನಾಡಿ, ವಿಚಿತ್ರವಾದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಭಾರತದ ಪ್ರಜೆ ಎಂದು ಹೇಳಿ ಅನ್ಯಾಯದ ವಿಷಯ ಬಂದಾಗ ಒಂದು ವರ್ಗವನ್ನು, ಧರ್ಮವನ್ನು ಗುರಿಯಾಗಿಸಿ ನ್ಯಾಯ ಕೊಡುವುದು. ಅತ್ಯಾಚಾರ ಎಸಗಿದವನು ಮೇಲ್ವರ್ಗ,ಬಿಜೆಪಿ ಮುಖಂಡನಾಗಿದ್ದರೆ ಅಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವುದಿಲ್ಲ.ಅದೇ ಯಾವುದೋ ಅಬ್ದುಲ್ಲ, ಜೋಸಫ್‌ ಆಗಿದ್ದಾರೆ. ಶೋಭಕ್ಕ ಬೆಂಕಿ ಹಚ್ಚುತ್ತಿದ್ದರು. ಇವತ್ತು ಅವರ ಪತ್ತೆ ಇಲ್ಲ ಎಂದರು.

ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಪ್ ಬಾವು ಅಧ್ಯಕ್ಷತೆ ವಹಿಸಿದರು.

ತಾಜುದ್ದಿನ್ ಸಾಲ್ಮರ ಮಾತನಾಡಿದರು.

ನಗರಸಭೆ ಸದಸ್ಯೆ ಪಾತಿಮಾತ್ ಜೋಹಾರ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 126